ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಜಯ ಗಳಿಸಿದೆ. ಈ ದೊಡ್ಡ ಗೆಲುವಿನ ಹಿಂದೆ ಹಲವಾರು ವಿಭಿನ್ನ ಅಂಶಗಳಿವೆ. ಪಕ್ಷ ನೀಡಿದ್ದ ಫ್ರೀಬೀಸ್(ಉಚಿತ ಭಾಗ್ಯ) ಭರವಸೆಯು ಜನರನ್ನು ಸೆಳೆದಿದ್ದು, ಕೊಟ್ಟ ಮಾತಿನಂತೆ ನಡೆಯಬೇಕಾದ ಒತ್ತಡ ಮುಂಬರುವ ಸರಕಾರದ ಮೇಲಿದೆ.
ಪ್ರಣಾಳಿಕೆಯಲ್ಲಿನೀಡಿದ್ದ ‘ಉಚಿತ ಭಾಗ್ಯ’ಕ್ಕೆ ಸಂಬAಧಿಸಿದAತೆ ಫಲಾನುಭವಿಗಳಿಗೆ ನಗದು ಪಾವತಿ ಮತ್ತು ಉಚಿತ ವಿದ್ಯುತ್ ಯೋಜನೆ ಜಾರಿಗಾಗಿಯೇ ರಾಜ್ಯ ಸರಕಾರಕ್ಕೆ ವರ್ಷಕ್ಕೆ 62,000 ಕೋಟಿ ರೂ. ವೆಚ್ಚವಾಗಲಿದೆ. ಅಂದರೆ ಬಜೆಟ್ನ ಸುಮಾರು ಶೇ.20ರಷ್ಟು ಭಾಗ ‘ಉಚಿತ ಭಾಗ್ಯ’ಗಳಿಗೆ ಬೇಕು ಎಂದು ಕೆಲವು ಲೆಕ್ಕಾಚಾರಗಳು ಹೇಳಿವೆ. ಈ ದೊಡ್ಡ ‘ಹೊರೆ’ಯಿಂದಾಗಿ ಖಂಡಿತವಾಗಿಯೂ ರಾಜ್ಯ ಬಜೆಟ್ ಮೇಲೆ ದೊಡ್ಡ ನಕಾರಾತ್ಮಕ ಪ್ರಭಾವ ಉಂಟಾಗಲಿದೆ.
ಪ್ರಮುಖ ಉಚಿತ ಭಾಗ್ಯಗಳಿಗೆ ಸರಕಾರ ಖರ್ಚು ಮಾಡಬಹುದಾದ ಮೊತ್ತವು ಹಿಂದಿನ ಹಣಕಾಸು ವರ್ಷದಲ್ಲಿನ ವಿತ್ತೀಯ ಕೊರತೆಯಷ್ಟೇ ದೊಡ್ಡದಾಗಿದೆ. ಕರ್ನಾಟಕದ ಬಜೆಟ್ 2023-24ರಲ್ಲಿ2022-23ನೇ ಸಾಲಿನ ವಿತ್ತೀಯ ಕೊರತೆಯು 60,581 ಕೋಟಿ ರೂ. ಎಂದು ನಿರೀಕ್ಷಿಸಲಾಗಿದೆ. ಇದು ಒಟ್ಟು ರಾಜ್ಯ ದೇಶೀಯ ಉತ್ಪನ್ನದ(ಜಿಎಸ್ಡಿಪಿ) ಶೇ.2.60ರಷ್ಟಾಗಿದೆ.
ಕಾಂಗ್ರೆಸ್ ಪ್ರಮುಖ ಗ್ಯಾರಂಟಿಗಳು ಕುಟುಂಬದ ಪ್ರತಿ ಮಹಿಳೆಗೆ ಮಾಸಿಕ 2,000 ರೂ. ನೆರವು. ಪ್ರತಿ ನಿರುದ್ಯೋಗಿ ಡಿಪ್ಲೋಮಾದಾರರಿಗೆ ತಿಂಗಳಿಗೆ 1,500 ರೂ. ಮತ್ತು ಪದವೀಧರರಿಗೆ ತಿಂಗಳಿಗೆ 3,000 ರೂ. ಭತ್ಯೆ. ರಾಜ್ಯ ಸರಕಾರದ ಬಸ್ಗಳಲ್ಲಿಮಹಿಳೆಯರಿಗೆ ಉಚಿತ ಪ್ರಯಾಣ. ರಾಜ್ಯದ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತ.
ಇತರ ಭರವಸೆಗಳೇನು?
ಆಳ ಸಮುದ್ರದ ಮೀನುಗಾರಿಕೆಗೆ ಪ್ರತಿ ವರ್ಷ 500 ಲೀಟರ್ ತೆರಿಗೆಮುಕ್ತ ಡೀಸೆಲ್
ಮೀನುಗಾರಿಕೆ ರಜೆಯ ಸಮಯದಲ್ಲಿಎಲ್ಲಾಸಮುದ್ರ ಮೀನುಗಾರರಿಗೆ 6,000 ರೂ.
ಗ್ರಾಮೀಣ ಮಹಿಳೆಯರು/ಯುವಕರನ್ನು ಒಳಗೊಂಡ ಹಳ್ಳಿಗಳಲ್ಲಿಕಾಂಪೋಸ್ವ್/ಗೊಬ್ಬರ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಭರವಸೆ. ಪ್ರತಿ ಕೆ.ಜಿ.ಗೆ 3 ರೂ.ನಂತೆ ಹಸುವಿನ ಸಗಣಿ ಖರೀದಿಸಲು ಭರವಸೆ.
ಕಾಂಗ್ರೆಸ್ ವಾದವನೇನು?
ಉಚಿತ ಭಾಗ್ಯಗಳನ್ನು ನೀಡಲು ಹಣ ಹೇಗೆ ಹೊಂದಿಸುವಿರಿ ಎನ್ನುವ ಪ್ರಶ್ನೆಗೆ ಕರ್ನಾಟಕದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಟೈಮ್ಸ್ ಆಫ್ ಇಂಡಿಯಾಕ್ಕೆ ವಿವರಿಸಿದ್ದು, ”ಕಾಂಗ್ರೆಸ್ನ ಫ್ರೀಬೀಸ್ ಜಾರಿಗೆ ರಾಜ್ಯ ಬಜೆಟ್ನ ಶೇ.15ಕ್ಕಿಂತ ಹೆಚ್ಚು ಹಣ ವೆಚ್ಚವಾಗುವುದಿಲ್ಲ. ಅಲ್ಲದೇ, ಮುಂದಿನ 5 ವರ್ಷಗಳಲ್ಲಿರಾಜ್ಯ ಬಜೆಟ್ನ ಗಾತ್ರವು ಹೆಚ್ಚಾಗುವ ನಿರೀಕ್ಷೆ ಇದೆ” ಎಂದಿದ್ದಾರೆ.
ರಾಜ್ಯ ಆರ್ಥಿಕವಾಗಿ ಸದೃಢ, ಆದರೂ ಆತಂಕ
ಕರ್ನಾಟಕವು ಆರ್ಥಿಕವಾಗಿ ಸದೃಢವಾಗಿದ್ದು, ಬಲವಾದ ಆದಾಯದ ಬೆಳವಣಿಗೆಯನ್ನು ದಾಖಲಿಸಿದೆ. ನಿರ್ಗಮಿತ ಬಿಜೆಪಿ ಸರಕಾರವು ಆದಾಯ ಹೆಚ್ಚುವರಿಯ ಬಜೆಟ್ ಮಂಡಿಸಿತ್ತು. ಜಿಎಸ್ಟಿ ಸಂಗ್ರಹದಲ್ಲಿಕರ್ನಾಟಕವು ದೊಡ್ಡ ರಾಜ್ಯಗಳ ಪೈಕಿ ಅತಿ ಹೆಚ್ಚು ಬೆಳವಣಿಗೆ ದರವನ್ನು ದಾಖಲಿಸಿದೆ. 2022-23ಕ್ಕೆ ಆದಾಯ ಸಂಗ್ರಹಣೆಯ ಗುರಿಯನ್ನು 72,000 ಕೋಟಿ ರೂ.ಗೆ ನಿಗದಿಪಡಿಸಲಾಗಿತ್ತು. ಜಿಎಸ್ಟಿ ಪರಿಹಾರವನ್ನು ಹೊರತುಪಡಿಸಿಯೂ 83,010 ಕೋಟಿ ರೂ. ಆದಾಯ ಸಂಗ್ರಹವನ್ನು ಜನವರಿ ಅಂತ್ಯದ ವೇಳೆಗೆ ಸಾಧಿಸಲಾಗಿದೆ. ಇದು ಬಜೆಟ್ ಅಂದಾಜಿಗಿAತ ಶೇ.15ರಷ್ಟು ಹೆಚ್ಚು. ಆದಾಗ್ಯೂ, ರಾಜ್ಯದ ಸಾಲಗಳು ಕಳವಳಕಾರಿ ವಿಷಯವಾಗಿದೆ.
ಮುಂಬರುವ ವರ್ಷಗಳಲ್ಲಿಕರ್ನಾಟಕದ ಆರ್ಥಿಕತೆಯು ದೊಡ್ಡದಾಗಿ ಬೆಳೆಯಲು ಸಿದ್ಧವಾಗಿದ್ದರೂ, 62,000 ಕೋಟಿ ರೂ. ವೆಚ್ಚದ ‘ಉಚಿತ ಭಾಗ್ಯ’ವು ಸಮಸ್ಯೆಯನ್ನು ಸೃಷ್ಟಿಸಬಹುದು. 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಮತ್ತು ಸರಕಾರಿ ಇಲಾಖೆಗಳಾದ್ಯಂತ 2. 5 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿಯೂ ಕಾಂಗ್ರೆಸ್ ಭರವಸೆ ನೀಡಿದೆ. ಇದು ರಾಜ್ಯದ ಸಂಬಳದ ಬಿಲ್ ಅನ್ನು ಹೆಚ್ಚಿಸುತ್ತದೆ. ಈ ಅಂಶಗಳೂ ಆರ್ಥಿಕವಾಗಿ ಸರಕಾರಕ್ಕೆ ಹೊರೆಯಾಗಲಿವೆ.