ಕೆಲವರಿಗೆ ಮಟನ್ ಇಷ್ಟವಾಗುವುದಿಲ್ಲ, ಇನ್ನೂ ಕೆಲವರಿಗೆ ಚಿಕನ್ ಇಷ್ಟವಾಗುವುದಿಲ್ಲ. ಆದರೆ ಎಲ್ಲಾ ನಾನ್ವೆಜ್ ಪ್ರಿಯರು ಇಷ್ಟಪಟ್ಟು ತಿನ್ನುವುದು ಮೊಟ್ಟೆ. ಅದಕ್ಕೆ ಸ್ವಲ್ಪ ಮಸಾಲಾ ಟೆಸ್ಟ್ ಸಿಕ್ಕರೆ ಬಾಯಿ ಚಪ್ಪರಿಸಿಕೊಂಡು ತಿನ್ನುವುದರಲ್ಲಿ ಸಂಶಯವೇ ಇಲ್ಲ. ಇಂದು ‘ಎಗ್ ಫಿಂಗರ್ಸ್’ ಮಾಡುವ ಸುಲಭ ವಿಧಾನವನ್ನು ಹೇಳಿಕೊಡುತ್ತಿದ್ದೇವೆ. ನೀವೂ ಟ್ರೈ ಮಾಡಿ ನೋಡಿ.
ಬೇಕಾಗಿರುವ ಪದಾರ್ಥಗಳು:
* ಮೊಟ್ಟೆಗಳು – 10
* ಉಪ್ಪು – 1/4 ಟೀಸ್ಪೂನ್
* ಕಪ್ಪು ಉಪ್ಪು – 1/4 ಟೀಸ್ಪೂನ್
* ಕಪ್ಪು ಮೆಣಸು ಪುಡಿ – 1/3 ಟೀಸ್ಪೂನ್
* ಚಾಟ್ ಮಸಾಲಾ – 1/2 ಟೀಸ್ಪೂನ್
* ಕಾರ್ನ್ ಫ್ಲೋರ್ – 1/4 ಕಪ್
* ಕಡ್ಲೆ ಹಿಟ್ಟು – 1 ಕಪ್
* ಚಿಲ್ಲಿ ಫ್ಲೇಕ್ಸ್ – 1/2 ಟೀಸ್ಪೂನ್
* ಇಟಾಲಿಯನ್ ಮಸಾಲೆ – 1/2 ಟೀಸ್ಪೂನ್
* ಬ್ರೆಡ್ ಕ್ರಂಬ್ – 1/2 ಕಪ್
* ಡೀಪ್ ಫ್ರೈಗೆ ಎಣ್ಣೆ
ಮಾಡುವ ವಿಧಾನ:
* ಒಂದು ಬೌಲ್ ತೆಗೆದುಕೊಂಡು ಮೊಟ್ಟೆಗಳನ್ನು ಒಡೆದು ಅದಕ್ಕೆ ಉಪ್ಪು, ಕಪ್ಪು ಉಪ್ಪು, ಕಪ್ಪು ಮೆಣಸು ಮತ್ತು ಚಾಟ್ ಮಸಾಲಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಕಾರ್ನ್ ಫ್ಲೋರ್, ಕಡ್ಲೆ ಹಿಟ್ಟು ಚಿಲ್ಲಿ ಫ್ಲೇಕ್ಸ್ ಮತ್ತು ಇಟಾಲಿಯನ್ ಮಸಾಲೆ ಹಾಕಿ ಕಲಸಿ. ಇದಕ್ಕೆ ಎಗ್ ಮಿಶ್ರಣವನ್ನು ಸೇರಿಸಿ ಬೆರಳಿನಾಕಾರದಲ್ಲಿ ಕಟ್ ಮಾಡಿ.
* ಇನ್ನೊಂದು ತಟ್ಟೆಯಲ್ಲಿ ಬ್ರೆಡ್ ತುಂಡುಗಳನ್ನು ತೆಗೆದುಕೊಂಡು ಅದಕ್ಕೆ ಎಗ್ ಮಿಶ್ರಣದ ಮೇಲೆ ಲೇಪಿಸಿ.
* ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಮೊಟ್ಟೆ ಮಿಶ್ರಣವನ್ನು ಹಾಕಿ. ಇವು ಗೋಲ್ಡನ್ ಬ್ರೌನ್ ಬರುವವರೆಗೂ ಫ್ರೈ ಮಾಡಿ. ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಟಿಶ್ಯೂ ಪೇಪರ್ ಮೇಲೆ ಕರಿದ ಎಗ್ ಫಿಂಗರ್ಸ್ ಹಾಕಿ.
ಟೊಮೆಟೊ ಕೆಚಪ್ನೊಂದಿಗೆ ಎಗ್ ಫಿಂಗರ್ಸ್ ಬಡಿಸಿ ಮತ್ತು ಚಹಾದೊಂದಿಗೆ ಆನಂದಿಸಿ.