ಸಕಲೇಶಪುರ: ಎತ್ತಿನಹೊಳೆ ಯೋಜನೆ ಪ್ರಗತಿ ಸಮಾಧಾನ ತಂದಿಲ್ಲ, ಮುಂದಿನ 100 ದಿನಗಳಲ್ಲಿ ನೀರು ಹರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದ ಎತ್ತಿನಹೊಳೆ ಯೋಜನೆ ಪ್ರಗತಿ ಪರಿಶೀಲಿಸಿದ ನಂತರ ಮಾತನಾಡಿದ ಅವರು,
ನಾನು ಸಕಲೇಶಪುರಕ್ಕೆ 2ನೇ ಬಾರಿ ಬಂದಿದ್ದು ಮೊದಲಿಗೆ ಎತ್ತಿನಹೊಳೆ ಯೋಜನೆ 24 ಸಾವಿರ ಕೋಟಿ ಅನುದಾನ ಬಿಡುಗಡೆಯಾಗಿದ್ದು ಇದರಲ್ಲಿ 14 ಸಾವಿರ ಕೋಟಿಯನ್ನು ಉಪಯೋಗಿಸಲಾಗಿದೆ ಇದರ ಉದ್ದೇಶವೇನೆಂದರೆ ಮೊದಲಿಗೆ ನೀರು ಬಿಡುವುದು ತುಂಬಾ ಮುಖ್ಯವಾಗಿದೆ. ಪಶ್ಚಿಮ ಘಟ್ಟದ ನೀರನ್ನು ಕೋಲಾರದವರೆಗೆ ತೆಗೆದುಕೊಂಡು ಹೋಗುವುದು ಮೂಲ ಉದ್ದೇಶ. ಆದರೆ ಈ ಯೋಜನೆಯ ಪ್ರಗತಿ ವರದಿಯನ್ನು ಪರಿಶೀಲಿಸಿದ ನಂತರ ಎತ್ತಿನಹೊಳೆ ಯೋಜನೆ ಸಮಾಧಾನ ತಂದಿಲ್ಲ ಎಂದು ಜಲ ಸಂಪನ್ಮೂಲ ಸಚಿವರಾದ ಡಿ ಕೆ ಶಿವಕುಮಾರ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಯೋಜನೆಯಡಿ ಅನೇಕ ಸಮಸ್ಯೆಗಳು ಎದ್ದು ಕಾಣಿಸುತ್ತಿದೆ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಇಂಧನ ಇಲಾಖೆಗಳು ಗುತ್ತಿಗೆದಾರರಿಗೆ ಸರಿಯಾದ ಕ್ರಮದಲ್ಲಿ ಕೆಲಸ ನಿರ್ವಹಣೆ ಮಾಡಲು ತೊಂದರೆಯಾಗುತ್ದಿ ಕೆಲವರು ಜಾಗ ಬಿಟ್ಟುಕೊಡದೆ ದಾವೆ ಹೂಡಿದ್ದಾರೆ ಅಲ್ಲದೆ ಎತ್ತಿನಹೊಳೆಯ ಪವರ್ ಹಬ್ ನಲ್ಲಿ ಕೆಲ ದಿನ ಪವರ್ ಕಟ್ ಮಾಡಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಪಿಟಿಸಿಎಲ್ ಅಧಿಕಾರಿಗಳು 8 ಗಂಟೆ ಸಾಕು ಎಂದು ಅಭಿಪ್ರಾಯ ಪಟ್ಟಿದ್ದಾರೆ ಆದರೆ ಅದು ಸಾಧ್ಯವಿಲ್ಲ ಸರಿಯಾದ ಕ್ರಮದಲ್ಲಿ ಅದನ್ನು ಯೋಚನೆ ಮಾಡಿ ಲೋಡ್ ಶೆಡ್ಡಿಂಗ್ ಮೂಲಕ ನಿರ್ವಹಿಸುವ ಮೂಲಕ ಯೋಜನೆಯನ್ನು ಸಂಪೂರ್ಣ ಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.
ಕೆಲವೊಂದು ಭಾಗದಲ್ಲಿ ಜಾಗದ ಕೊರತೆ ಉಂಟಾಗಿದ್ದು ಅದರ ಸಂಪೂರ್ಣ ಜವಾಬ್ದಾರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಹಕಾರ ಮಾಡಲಾಗುವುದು ಜೊತೆಗೆ ಜಿಲ್ಲಾಧಿಕಾರಿಗಳು ಕೂಡ ಅಡಚಣೆ ಎಲ್ಲಿದೆ ಅದನ್ನು ಅನುಕೂಲವಾಗುವಂತೆ ಯಾವುದೇ ಸಮಯದಲ್ಲಾದರೂ ಸಹಕಾರ ನೀಡುವುದರ ಮೂಲಕ ಯೋಜನೆಯು ಕಾರ್ಯಗತವಾಗುವಂತೆ ಸಹಕರಿಸಬೇಕೆಂದು ಸೂಚಿಸಿದರು .
ಎತ್ತಿನಹೊಳೆ ಯೋಜನೆಯ ಮೊದಲ ಹಂತ ಕಾಮಗಾರಿಗಳನ್ನು 5 ಪ್ಯಾಕೇಜುಗಳನ್ನು ನೀಡುವ ಮೂಲಕ ಸಂಬಂಧಿಸಿದ ವಿದ್ಯುತ್ ಕಾಮಗಾರಿಯನ್ನು 2 ಪ್ಯಾಕೆಜ್ ರೀತಿಯ ಆಧಾರದ ಮೇಲೆ ಗುತ್ತಿಗೆ ವಹಿಸಲಾಗಿದೆ. ಒಟ್ಟು 8 ವಿದ್ಯುತ್ ಹಬ್ ಸ್ಟೇಷನ್ ಗಳಿದ್ದು ಇದರಲ್ಲಿ 7 ಹಬ್ ಗಳು ಪೂರ್ಣ ಗೊಂಡಿದೆ ಉಳಿದಿರುವ ಒಂದು ಹಬ್ ಅನ್ನು ಆರಂಭಿಸಲು ಸೂಚನೆ ನೀಡಲಾಗಿದೆ. ಇನ್ನೂ 3 ದಿನಗಳಲ್ಲಿ ಮೊದಲ ಹಂತದ ನೀರನ್ನು ಪಂಪ್ ಔಟ್ ಮಾಡಲಾಗುವುದು.
ಇದಕ್ಕೆ ಸಂಭಂದ ಪಟ್ಟ ಎಲ್ಲಾ ಅಧಿಕಾರಿಗಳಿಗೆ 100 ದಿನದ ಸಮಯವನ್ನು ನಿಗದಿ ಮಾಡಲಾಗಿದೆ ನಿಗದಿ ಮಾಡಿರುವ ಸಮಯದ ವೇಳೆಗೆ ಯೋಜನೆ ಸಂಪೂರ್ಣ ನೀರನ್ನು ಹೊರಗೆ ಹರಿಸಲಾಗುವುದು. ಇರುವಂತಹ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎನ್ನುವುದು ಇದ್ದೆ ಇರುತ್ತದೆ. ಯೋಜನೆಯ ಪ್ರಗತಿ ಪ್ರಕಾರ ಮೊದಲ ಹಂತದ ನೀರನ್ನು 12 ಕಿ ಮಿ ವರೆಗೆ ಹರಿಯುತ್ತದೆ.
ವಿದ್ಯುತ್ ಶಕ್ತಿ ಪೂರೈಸುವ ಎಲ್ಲಾ ಸಬ್ ಸ್ಟೇಷನ್ ಗಳು ಪೂರ್ಣ ಗೊಂಡಿದೆ ಆದರೆ ಟ್ರಾನ್ಸ್ ಮಿಷನ್ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣ ಹಂತದಲ್ಲಿದೆ. ಯೋಜನೆಗಾಗಿ ಒಟ್ಟಾರೆ 9023 ಎಕರೆ 26 ಗಂಟೆ ಜಮೀನಿನ ಅವಶ್ಯಕತೆ ಇರುತ್ತದೆ ಆದರೆ 5454 ಎಕರೆ 15 ಗಂಟೆ ಭೂ ಸ್ವಾಧೀನವಾಗಿದ್ದು ಇನ್ನೂ ಸಹ ಭೂ ಸ್ವಾಧೀನದ ಅವಶ್ಯಕತೆಗಾಗಿ ಪ್ರಗತಿಯಲ್ಲಿದೆ. ಭೂ ಸ್ವಾಧೀನಕ್ಕಾಗಿ ಒಟ್ಟಾರೆ 1212 ಕೋಟಿ ಹಣ ವೆಚ್ಚ ಮಾಡಲಾಗಿದೆ ಎಂದು ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿ ಕೆ ಶಿವಕುಮಾರ್ ರವರು ಹೇಳಿದರು..
ಸಭೆಯಲ್ಲಿ ಸಂಸದರಾದ ಪ್ರಜ್ವಲ್ ರೇವಣ್ಣ, ಡಿ.ಕೆ.ಸುರೇಶ್, ಶಾಸಕರುಗಳಾದ ಕೆ.ಎಂ.ಶಿವಲಿಂಗೇಗೌಡ, ಸಿಮೆಂಟ್ ಮಂಜು ,
ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಸಿಇಓ ಪೂರ್ಣಿಮಾ, ಎಎಸ್ಪಿ ಮಿಥುನ, ಉಪವಿಭಾಗಾಧಿಕಾರಿ ಶೃತಿ, ತಹಸೀಲ್ದಾರ್ ಮೇಘನಾ, ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು, ಗುತ್ತಿಗೆದಾರರು, ತಾಲ್ಲೂಕು ಆಡಳಿತದ ಅಧಿಕಾರಿಗಳು, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.