ನಂಜನಗೂಡು ಸಿಟಿಜನ್ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸಿಂಚನ ಇಂದು ನಡೆದ ಗಣಿತ ಪತ್ರಿಕೆ ಬರೆಯುವ ಸಂದರ್ಭದಲ್ಲಿ ನಿಗದಿತ ಸಮಯಕ್ಕಿಂತ ಮುಂಚೆ ಬರೆಯುತ್ತಿದ್ದ ಪತ್ರಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಶಾಲೆಯ ಮುಂಭಾಗದಲ್ಲೇ ಕಣ್ಣೀರು ಹಾಕಿರೋ ಘಟನೆ
ನಡೆದಿದೆ
ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಿಟಿಜನ್ ಶಾಲೆಯ ಮುಖ್ಯಸ್ಥರಿಗೆ ಮತ್ತು ಶಿಕ್ಷಕರ ಗಮನಕ್ಕೆ ತಂದಿದೆ ತಕ್ಷಣ ಶಿಕ್ಷಕರು ಮತ್ತು ಮುಖ್ಯಸ್ಥರು ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿದ್ದ ಪಟ್ಟಣ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಆಗಮಿಸಿ ಶಾಲೆಯ ಮುಂಬಾಗದಲ್ಲಿ ಕುಳಿತು ನ್ಯಾಯ ಬೇಕು ಎನ್ನುತ್ತಾ ಆ ಶಾಲೆಯ ಮುಖ್ಯಸ್ಥರಿಗೆ ವಿದ್ಯಾರ್ಥಿನಿ ಸಿಂಚನ ಮತ್ತು ಶಿಕ್ಷಕರು ಸೇರಿ ಆತನ ಮೇಲೆ ಕ್ರಮ ಜರುಗಿಸುವಂತೆ ಮನವಿ ಪತ್ರ ನೀಡಿದ್ದಾರೆ
ಮುಂದೆ ಯಾವ ವಿದ್ಯಾರ್ಥಿಗೂ ಈ ರೀತಿ ಆಗದಂತೆ ತಡೆಯಬೇಕು ಎಂದು ಮನವಿ ಮಾಡಿದರು
ಸ್ಥಳಕ್ಕೆ ಆಗಮಿಸಿದ ಶಿಕ್ಷಣಾಧಿಕಾರಿ ಶಿವಲಿಂಗಯ್ಯ ಈ ವಿಷಯದ ಬಗ್ಗೆ ಚರ್ಚಿಸಿ ನಂತರ ಮಾತನಾಡಿ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕೇಳಿದರೆ ಪರೀಕ್ಷೆಗೆ ಬರೆಯುವುದಕ್ಕೆ ತೊಂದರೆ ಆಗಬಹುದು ಆದ್ದರಿಂದ ಕಡೆಯ ದಿನ ಪರೀಕ್ಷೆ ಮುಗಿದ ಮೇಲೆ ಆ ಕೊಠಡಿಯ ಎಲ್ಲಾ ವಿದ್ಯಾರ್ಥಿಗಳು ಕೇಳಿಕೊಂಡು ಈತನ ಮೇಲೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು