ಮುಂಬೈ: ತೀವ್ರ ಕುತೂಹಲ ಕೆರಳಿಸಿದ್ದ ಏಷ್ಯಾ ಕಪ್ 2023 ಕ್ರಿಕೆಟ್ ಟೂರ್ನಿಗೆ ಬಿಸಿಸಿಐ ಟೀಂ ಇಂಡಿಯಾ ಆಟಗಾರರನ್ನು ಪ್ರಕಟಿಸಿದ್ದು, ಉದಯೋನ್ಮುಖ ಆಟಗಾರ ತಿಲಕ್ ವರ್ಮಾ, ಶುಭ್ ಮನ್ ಗಿಲ್ ಮತ್ತು ಹಿರಿಯ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವಕಾಶ ಪಡೆದಿದ್ದಾರೆ.
ಹೌದು.. ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಆಯೋಜನೆಯಾಗಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ತಂಡದ ಹಿರಿಯ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಇಬ್ಬರೂ ಬ್ಯಾಟರ್ಗಳು ದೀರ್ಘಕಾಲದ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದರು ಮತ್ತು ಸಾಕಷ್ಟು ಸಮಯದವರೆಗೆ ಕ್ರೀಡೆಯಿಂದ ಹೊರಗುಳಿದಿದ್ದರು.
ಇದೀಗ ಈ ಇಬ್ಬರೂ ಆಟಗಾರರು ಚೇತರಿಸಿಕೊಂಡಿದ್ದು ಮಾತ್ರವಲ್ಲದೇ ತಂಡಕ್ಕೆ ಲಭ್ಯರಾಗಿರುವುದು ತಂಡಕ್ಕೆ ಉತ್ತೇಜನ ಸಿಕ್ಕಂತಾಗಿದೆ. ಎರಡು ತಿಂಗಳೊಳಗೆ ವಿಶ್ವಕಪ್ ಬರುವುದರಿಂದ ಭಾರತ ತಂಡಕ್ಕೆ ಭಾರಿ ಉತ್ತೇಜನ ಸಿಕ್ಕಿದೆ. ಇನ್ನು ಈ ಹಿಂದೆ ನಡೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ತಮ್ಮ ಚೊಚ್ಚಲ ಅಂತರಾಷ್ಟಿçÃಯ ಪಂದ್ಯದಲ್ಲೇ ಪ್ರಭಾವಿ ಆಟ ಪ್ರದರ್ಶಿಸಿದ್ದ ತಿಲಕ್ ವರ್ಮಾ ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ. ತಿಲಕ್ ವರ್ಮಾ ಮಾತ್ರವಲ್ಲದೇ ಉದಯೋನ್ಮುಖ ಆಟಗಾರ ಶುಭ್ ಮನ್ ಗಿಲ್ ಕೂಡ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳು ಪೃಥ್ವಿ ಶಾ ತಂಡದಿAದ ದೂರ ಉಳಿದಿದ್ದು, ಅವರ ಚೇತರಿಕೆಗೆ ಮತ್ತಷ್ಟು ಸಮಯಾವಕಾಶ ಬೇಕಿದೆ ಎಂದು ಹೇಳಲಾಗಿದೆ.
ಉಳಿದಂತೆ ಐರ್ಲೆಂಡ್ನಲ್ಲಿ ಬಹುನಿರೀಕ್ಷಿತ ಕಮ್ ಬ್ಯಾಕ್ ಮಾಡಿರುವ ಹಿರಿಯ ಆಟಗಾರ ಮತ್ತು ತಂಡದ ಸ್ಟಾರ್ ವೇಗಿ ಜಸ್ಪಿçÃತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಕೂಡ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ತಂಡ ಇಂತಿದೆ.
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ತಿಲಕ್ ವರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ ಪ್ರೀ