ಭುವನೇಶ್ವರ: ಒಡಿಶಾದ ಬಾಲಸೋರ್ ನಲ್ಲಿ ನಡೆದ ರೈಲು ದುರಂತದ ಬೆನ್ನಲ್ಲೇ ಇದೀಗ ಮತ್ತೊಂದು ರೈಲು ಹಳಿ ತಪ್ಪಿದೆ.
ಬರ್ಗರ್ ಜಿಲ್ಲೆಯಲ್ಲಿ ಸುಣ್ಣದ ಕಲ್ಲು ಸಾಗಿಸುತ್ತಿದ್ದ ಗೂಡ್ಸ್ ಟ್ರೆöÊನ್ ಹಳಿ ತಪ್ಪಿದೆ. ಈ ರೈಲಿನ ಐದು ಬೋಗಿಗಳು ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.
ಘಟನೆಗೆ ಇಂಡಿಯನ್ ರೈಲ್ವೆ ಹೊಣೆಯಲ್ಲ ಎಂದು ಈಸ್ಟ್ ಕೋಸ್ಟ್ ರೈಲ್ವೇ (ಇಸಿಒರ್) ತಿಳಿಸಿದೆ. ಖಾಸಗಿ ಸಿಮೆಂಟ್ ಕಂಪನಿಯ ಮಾಲೀಕತ್ವದ ಮತ್ತು ನಿರ್ವಹಿಸುವ ನ್ಯಾರೋ ಗೇಜ್ ಸೈಡಿಂಗ್ನಲ್ಲಿ ಹಳಿ ತಪ್ಪಿದೆ. ಎಂಜಿನ್, ವ್ಯಾಗನ್ಗಳು ಮತ್ತು ನ್ಯಾರೋ ಗೇಜ್ ರೈಲ್ವೇ ಟ್ರಾ÷್ಯಕ್ನಂತಹ ರೋಲಿಂಗ್ ಸ್ಟಾಕ್ ಸೇರಿದಂತೆ ಮೂಲಸೌಕರ್ಯ ನಿರ್ವಹಣೆಯ ಎಲ್ಲಾ ಅಂಶಗಳಿಗೆ ಕಂಪನಿ ಜವಬ್ದಾರಿಯಾಗಿದೆ.
ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ 3 ರೈಲುಗಳಾದ ಶಾಲಿಮಾರ್-ಚೆನ್ನೆöÊ ಕೋರಮಂಡಲ್ ಎಕ್ಸ್ ಪ್ರೆಸ್ ಬೆಂಗಳೂರು-ಹೌರಾ ಸೂರ್ಫಾಸ್ಟ್ ಹಾಗೂ ಗೂಡ್ಸ್ ರೈಲುಗಳ ನಡುವೆ ಒಡಿಶಾದ ಬಾಲಸೋರ್ ನಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಇದನ್ನು ಭಾರತದಲ್ಲೇ ಸಂಭವಿಸಿದ 3 ಅತ್ಯಂತ ಕೆಟ್ಟ ರೈಲ್ವೆ ಅಪಘಾತಗಳಲ್ಲಿ ಒಂದು ಎಂದು ಹೇಳಲಾಗಿದೆ.
ಕೋರಮಂಡಲ್ ಎಕ್ಸ್ ಪ್ರೆಸ್ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಅದರ ಹಲವು ಬೋಗಿಗಳು ಚದುರಿ ಹೋಗಿದ್ದವು. ಇದೇ ವೇಳೆ ಪಕ್ಕದ ಹಳಿಯಲ್ಲಿ ಹಾದು ಹೋಗುತ್ತಿದ್ದ ಬೆಂಗಳೂರು-ಹೌರಾ ಸೂರ್ಫಾಸ್ಟ್ ರೈಲಿಗೂ ಬೋಗಿಗಳು ಡಿಕ್ಕಿ ಹೊಡೆದು, ಅದರ ಕೆಲವು ಬೋಗಿಗಳೂ ಹಳಿ ತಪ್ಪಿದ್ದವು. ವರದಿಗಳ ಪ್ರಕಾರ, ಸುಮಾರು 260 ಗಾಯಾಳುಗಳು ಒಡಿಶಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಸುಮಾರು 900 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.