ಮೆಕ್ಸಿಕೋ: ವೇಗವಾಗಿ ಚಲಿಸುತ್ತಿದ್ದ ಬಸ್ 80 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 27 ಮಂದಿ ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಅಮೆರಿಕದ ಮೆಕ್ಸಿಕೋ ನಗರದಲ್ಲಿ ನಡೆದಿದೆ.
ಉರುಳಿಬಿದ್ದ ರಭಸಕ್ಕೆ ಬಸ್ ಸಂಪೂರ್ಣ ಬಸ್ ಛಿದ್ರ ಛಿದ್ರವಾಗಿದೆ. ಘಟನೆಯಲ್ಲಿ ಗಾಯಗೊಂಡ 17 ಮಂದಿಯನ್ನ ವೈದ್ಯಕೀಯ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಕನಿಷ್ಠ 6 ಮಂದಿ ಪ್ರಜ್ಞಾಹೀನರಾಗಿದ್ದರು, ಅವರನ್ನ ಆಸ್ಪತ್ರೆಗೆ ಸಾಗಿಸಿದಾಗ ಗಂಭೀರ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ಥಳೀಯ ಸಾರಿಗೆ ಸಂಸ್ಥೆಯೊಂದು ನಿರ್ವಹಿಸುತ್ತಿದ್ದ ಬಸ್ ರಾಜಧಾನಿ ಮೆಕ್ಸಿಕೋ ನಗರದಿಂದ ಹೊರಟು ಸ್ಯಾಂಟಿಯಾಗೊ ಡಿ ಯೊಸೊಂಡುವಾ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಮ್ಯಾಗ್ಡಲೇನಾ ಪೆನಾಸ್ಕೋ ಪಟ್ಟಣದಲ್ಲಿ ಅಪಘಾತ ಸಂಭವಿಸಿದೆ. ವಾಹನ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದಾಗಿ ಬಸ್ ಅಪಘಾತಕ್ಕೀಡಾಗಿದೆ ಹಿರಿಯ ಅಧಿಕಾರಿ ಜೀಸಸ್ ರೊಮೆರೊ ಮಾಹಿತಿ ನೀಡಿದ್ದಾರೆ.