ಬೆಂಗಳೂರು: ಕನ್ನಡ ಚಿತ್ರರಂಗದ ಒಳಿತಿಗಾಗಿ ವಿಶೇಷ ಪೂಜೆ, ಹೋಮ ಹವನ ನಡೆಯುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಆಗುತ್ತಿರೋದ್ರಿಂದ ಪರಿಹಾರ ಕಂಡುಕೊಳ್ಳಲು ಕಲಾವಿದರ ಸಂಘ ಹೋಮ ಹವನ ಮಾಡ್ತಿದೆ. ಇಂಡಸ್ಟ್ರಿಯ ಒಗ್ಗಟ್ಟು, ಥಿಯೇಟರ್ ಸಮಸ್ಯೆ, ನಿರ್ಮಾಪಕರ ಸಮಸ್ಯೆ ನಿವಾರಣೆಗಾಗಿ ಪೂಜೆ ಮಾಡಲಾಗುತ್ತಿದೆ.
ಅದ್ಯಾವಾಗ ಕಲಾವಿದರ ಸಂಘದಲ್ಲಿ ಹೋಮ ಅನ್ನೋ ವಿಚಾರ ಹೊರಬೀಳ್ತಿದ್ದಂತೆ ಹಲವು ಊಹಾ ಪೆÇೀಹಗಳಿಗೆ ತೆರೆ ಬಿದ್ದಿದೆ. ಈ ಪೂಜೆಯನ್ನ ಪರಪ್ಪನ ಅಗ್ರಹಾರದ ನಿವಾಸಿಯಾಗಿರುವ ದರ್ಶನ್ ಅವರಿಗಾಗಿ ಮಾಡ್ತಿರುವ ಪೂಜೆ ಅನ್ನೋ ಆರೋಪ ಕೇಳಿ ಬಂದಿತ್ತು. ಆದ್ರೀಗ ಈ ಎಲ್ಲ ಆರೋಪಗಳಿಗೆಲ್ಲ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕ್ಲಾರಿಟಿ ಕೊಟ್ಟಿದ್ದಾರೆ.
ಮೊದಲಿಗೆ ಗಣಪತಿ ಹೋಮ, ಮೃತ್ಯಂಜಯ ಹೋಮ, ಸರ್ಪ ಶಾಂತಿ, ಮುಂತಾದ ಹೋಮಗಳ ಮಂತ್ರಗಳ ಪಠಣ ಇರಲಿದೆ ಅನ್ನೋ ಮಾಹಿತಿ ಇದೆ. ಕನ್ನಡ ಚಿತ್ರರಂಗದಲ್ಲಿ ನಿರ್ವಿಘ್ನವಾಗಿ ಕೆಲಸಗಳು ಆಗಲಿ ಅಂತ ಪೂಜೆ ಮಾಡಲಾಗ್ತಿದೆ. ಈ ಶುಭ ಕಾರ್ಯಕ್ಕೆ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಸೇರಿ ಹಲವು ನಟ ನಟಿಯರಿಗೆ ಭಾಗಿ ಆಗಲಿದ್ದಾರೆ.
ಪೂಜೆ ನಂತರ ಮಾತಾಡಿದ ಪ್ರಧಾನ ಪುರೋಹಿತ್ ಪ್ರಕಾಶ್ ಅಮ್ಮಂಣಾಯ.. ಈ ಪೂಜೆಯಿಂದ ಸಿನಿಮಾರಂಗಕ್ಕೆ ಒಳಿತು. ರಾಹು ಹಾಗೂ ಕೇತುವಿನಿಂದ ಪಾರಾಗಲು ಈ ಪೂಜೆ ಮಾಡ್ತಿದ್ದೀವಿ. ಇಂದು ಪ್ರಶಸ್ತವಾದ ದಿನ. ಆದ್ದರಿಂದ ಪೂಜೆ ಮಾಡ್ತಿದ್ದೀವಿ. ಮೊದಲಿಗೆ ಗಣ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷ ಬಲಿ ಹಾಗೂ ಸರ್ಪಶಾಂತಿ ನಡೆಯಲಿದೆ. ಈ ಪೂಜೆಯ ಯಜಮಾನರಾಗಿ ದೊಡ್ಡಣ್ಣ ಇರ್ತಾರೆ. ಸುಮಾರು ಏಳೆಂಟು ಮಂದಿ ಪುರೋಹಿತರಿಂದ ಹೋಮ ಮಾಡಲಾಗುತ್ತಿದೆ.
ಚಿತ್ರರಂಗದ ಉಳಿವಿಗಾಗಿ ಪೂಜೆ:
ಚಿತ್ರರಂಗದ ಏಳಿಗೆಗೋಸ್ಕರ, ನಾವು ಹೋಮ, ಪೂಜೆ ಮಾಡಬೇಕು ಎಂದುಕೊಂಡಿದ್ದೇವೆ. ಈ ಬಗ್ಗೆ ಈಗಾಗಲೇ ಪ್ಲಾನ್ ಮಾಡಿಕೊಳ್ಳಲಾಗಿದೆ. ದರ್ಶನ್ ಗಾಗಿ ಪೂಜೆ ಮಾಡಬೇಕು ಅಂದರೆ 100 ದೇವಾಲಯದಲ್ಲಿ ಪೂಜೆ ಮಾಡಿಸ್ತೀನಿ. ಇಲ್ಲೇ ಪೂಜೆ ಮಾಡಬೇಕೆಂದು ನನಗೇನೂ ಇಲ್ಲ. ದರ್ಶನ್ ಗೋಸ್ಕರ ಪೂಜೆ ಮಾಡಲಾಗುತ್ತಿದೆ ಎಂದು ಅನ್ಕೋಂಡರೆ ದಯವಿಟ್ಟು ಕ್ಷಮಿಸಿ. ಇದು ಅವರಿಗಾಗಿ ಅಲ್ಲ, ಚಿತ್ರರಂಗದ ಅಭಿವೃದ್ಧಿಗಾಗಿ ಮಾಡಲಾಗುತ್ತಿದೆ.