ಬೆಂಗಳೂರು:: ಕಾಂಗ್ರೆಸ್ ಕಾರ್ಯಕರ್ತ ರವಿ ಹತ್ಯೆ ಪ್ರಕರಣ ಸಂಬಂಧ 7 ಮಂದಿ ಆರೋಪಿಗಳನ್ನು ನಂದಿನಿಲೇಔಟ್ ಠಾಣಾ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬAಧಿತರನ್ನು ಲಗ್ಗೆರೆಯ ಪ್ರೇಮನಗರದ ಮಂಜುನಾಥ್ (42), ನ್ಯೂ ರಿಂಗ್ ರಸ್ತೆಯ ನಾಗರಾಜ್(38), ಗೋಪಾಲ್ (35), ಕಿರಣ್ ಕುಮಾರ್ (29), ಚೌಡೇಶ್ವರಿ ನಗರದ ಮಣಿಕಂಠನ್(23), ಕಾರ್ತಿಕ್ (34) ಹಾಗೂ ಬಾಬು (35) ಎಂದು ಗುರ್ತಿಸಲಾಗಿದೆ.
ಮೇ.24 ರಂದು ಲಗ್ಗೆರೆಯ ಚೌಡೇಶ್ವರಿ ನಗರದ ಹಳ್ಳಿ ರುಚಿ ಹೋಟೆಲ್ ಮುಂಭಾಗ ರವಿ ಅಲಿಯಾಸ್ ಮತ್ತಿ ರವಿಯನ್ನು ಆರೋಪಿಗಳು ಹತ್ಯೆ ಮಾಡಿ ಪರಾರಿಯಾಗಿದ್ದರು.
ಈ ಪ್ರಕರಣ ದಾಖಲಿಸಿ ತನಿಖೆಗಿಳಿದ ನಂದಿನಿ ಲೇಔಟ್ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡು 7 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣ: 7 ಆರೋಪಿಗಳ ಬಂಧನ
