ನಂಜನಗೂಡು: ನಗರದ ಕೆಎಚ್ ಬಿ ಬಡಾವಣೆಯ ಮನೆ ಒಂದರಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನೆಯ ವೇಳೆ ಕಾರಿನ ಮುಂದೆ ಗಣಪತಿಯನ್ನು ಕೂರಿಸಿ ಸೀಟ್ ಬೆಲ್ಟ್ ಹಾಕಿ ಮೆರವಣಿಗೆ ಮಾಡುವುದರ ಮೂಲಕ ಗಮನ ಸೆಳೆದಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆಯಂತೆ ಹೊಸ ನಿಯಮ ಜಾರಿಗೆ ತಂದಿರುವ ಪೊಲೀಸ್ ಇಲಾಖೆಯು, ನಿಯಮ ಉಲ್ಲಂಘನೆಗೆ ಈ ಹಿಂದೆ ಇದ್ದ ದಂಡದ ಮೊತ್ತವನ್ನು ಹೆಚ್ಚಿಸಿದೆ. ಬಾಡಿಗೆ ಅಥವಾ ಖಾಸಗಿ ಕಾರುಗಳಲ್ಲಿ ಚಾಲಕರ ಜೊತೆಗೆ ಸಹ ಪ್ರಯಾಣಿಕರೂ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕಿದೆ ಎಂದು ಭಾಗ್ಯರಾಜ್ ಹೇಳಿದರು ಮತ್ತು ಗಣೇಶೋತ್ಸವವು ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರೂ ಒಂದಾಗಿ ಆಚರಿಸುವ ಹಬ್ಬ ಎಂದರು. ಹಾಗೂ ಗಣಪತಿ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೂ ವಾತಾವರಣ ಅತ್ಯಂತ ಸಂಭ್ರಮ ಸಡಗರದಿಂದ ಕೂಡಿರುತ್ತವೆ ಎಂದರು.
ಚಂದ್ರಶೇಖರ್, ಶಿವಶೇಖರ್, ನವೀನ್, ಪ್ರಜ್ವಲ್, ಶ್ರೀನಿವಾಸ ಗೌಡ, ಪವನ್, ಜೀವನ್, ಅಭಿಷೇಕ್, ಮಹಾಲಕ್ಷ್ಮಿ, ಲಕ್ಷ್ಮಿ ಭಾಗಿಯಾದರು.