ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೂದಲೆಳೆ ಅಂತರದಲ್ಲಿ ಭಾರೀ ದುರಂತವೊAದು ತಪ್ಪಿದೆ. ಟೇಕ್ ಆಫ್ ಆಗುವ ವೇಳೆ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ಗುರುವಾರ ಬೆಳಗ್ಗೆ 8.30ಕ್ಕೆ ಘಟನೆ ನಡೆದಿದ್ದು, ಪೈಲಟ್ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿದೆ.
ಮಂಗಳೂರಿನಿAದ ದುಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದ್ದು, ಪ್ರಯಾಣಿಕರು ಕೆಲ ಕಾಲ ಆತಂಕಗೊAಡಿದ್ದರು. ಟ್ಯಾಕ್ಸಿ ವೇ ದಾಟಿ ರನ್ವೇನಲ್ಲಿ ವಿಮಾನ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಏಕಾಏಕಿ ಬಂದ ಹಕ್ಕಿಯು ವಿಮಾನದ ರೆಕ್ಕೆಗೆ ಡಿಕ್ಕಿ ಹೊಡೆದಿದೆ.
ಅಪಾಯದ ಮುನ್ಸೂಚನೆ ಹಿನ್ನೆಲೆ ಕೂಡಲೇ ಪೈಲಟ್ ಎಟಿಸಿಗೆ ಮಾಹಿತಿ ರವಾನಿಸಿದ್ದಾರೆ. ಇದಾದ ಬಳಿಕ ತಕ್ಷಣವೇ ಟೇಕಾಫ್ ಕ್ಯಾನ್ಸಲ್ ಮಾಡಿ ರನ್ವೇನಿಂದ ವಿಮಾನ ವಾಪಸ್ ಬಂದಿದೆ. ಪ್ರಯಾಣಿಕರನ್ನು ಇಳಿಸಿ ವಿಮಾನದ ತಪಾಸಣೆ ಮಾಡಲಾಗಿದೆ.
ಇನ್ನು, ದುಬೈಗೆ ತೆರಳುತ್ತಿದ್ದದ ಪ್ರಯಾಣಿಕರನ್ನು ಬೆಂಗಳೂರಿನಿAದ ಬಂದಿದ್ದ ಮತ್ತೊಂದು ವಿಮಾನದಲ್ಲಿ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಯಿತು. ಈ ಘಟನೆಯಿಂದ ಮಂಗಳೂರು ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನೂ ಹೆಚ್ಚಿನ ಮಾಹಿತಿ ಬರಬೇಕಿದೆ.
13 ವರ್ಷದ ಹಿಂದೆ ಭೀಕರ ವಿಮಾನ ದುರಂತ
ಮAಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ 2010ರ ಮೇ ತಿಂಗಳಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿತ್ತು. ಈ ವಿಮಾನ ಅಪಘಾತದಲ್ಲಿ 158 ಜನರು ಸಾವನ್ನಪ್ಪಿದ್ದರು. ದುರಂತದಲ್ಲಿ ಮಡಿದವರ ನೆನಪಿಗಾಗಿ ಕೂಳೂರು ಸೇತುವೆಯಿಂದ ತಣ್ಣೀರು ಬಾವಿ ರಸ್ತೆಗೆ ತಿರುಗುವಲ್ಲಿ ಪಾರ್ಕ್ ಅನ್ನು ನಿರ್ಮಿಸಲಾಗಿದ್ದು, ಅಲ್ಲಿ ಪ್ರತಿ ವರ್ಷ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಾ ಬರಲಾಗುತ್ತಿದೆ. ಮೇ 22, 2010ರಂದು ಏರ್ ಇಂಡಿಯಾ ಎಕ್ಸ್ಪ್ರೆಸ್ನ ಬೋಯಿಂಗ್ 737-800 ವಿಮಾನ ಲ್ಯಾಂಡಿAಗ್ ವೇಳೆ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿ 166 ಜನ ಇದ್ದು, 158 ಜನ ಮೃತಪಟ್ಟಿದ್ದರು. ಕೇವಲ 8 ಮಂದಿ ಮಾತ್ರ ಬದುಕುಳಿದಿದ್ದರು.