ನಾವು ತಿನ್ನುವ ಪ್ರತಿ ಊಟ, ಖರೀದಿ ತಿನಿಸುಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಅದರಲ್ಲೂ ಹೋಟೆಲ್ಗಳಲ್ಲಿ ನೀಡುವ ಊಟಗಳಿಂದ ಮಾತ್ರವಲ್ಲ, ಆಡುಗೆ ತಯಾರಿಸುವವರಿಂದಲೂ ವಿವಿಧ ಮಾದರಿಯ ರೋಗಗಳು ಹರಡುತ್ತಿವೆ. ಪ್ಯಾಕಿಂಗ್ಗಳಿಂದ ಹಿಡಿದು, ಸೇವಿಸುವವರೆಗೂ ಎಲ್ಲಿಯೂ ಮಾನದಂಡಗಳು ಪಾಲನೆಯಾಗುತ್ತಿಲ್ಲ.
ಈ ಎಲ್ಲಅಂಶಗಳು ಬಯಲಾಗಿರುವುದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ನಡೆಸಿರುವ 2 ದಿನಗಳ ದಾಳಿಯಲ್ಲಿಯೇ ಇಷ್ಟೆಲ್ಲಅಂಶಗಳು ಬಯಲಾಗಿವೆ. 2 ದಿನಗಳ ಅಂತರದಲ್ಲಿರೆಸ್ಟೋರೆಂಟ್, ಹೋಟೆಲ್, ಬೀದಿಬದಿ ವ್ಯಾಪಾರಿಗಳಿಂದ ಸೇರಿ ಒಟ್ಟು 71 ಕಡೆಗಳಲ್ಲಿಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 27,150 ರೂ.ದಂಡ ಸಂಗ್ರಹಿಸಿದ್ದಾರೆ. ಪ್ರಾರಂಭದಲ್ಲಿದಂಡದೊಂದಿಗೆ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ದಾಳಿ ನಡೆಸಿದ ಬಹುತೇಕ ಕಡೆಯೂ ಒಂದಿಲ್ಲೊಂದು ನಿಯಮ ಉಲ್ಲಂಘಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಈ ವರ್ಷದಲ್ಲಿ ಆಹಾರ ಗುಣಮಟ್ಟದ ದೃಷ್ಟಿಯಿಂದ 583 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 11 ಮಾದರಿಗಳು ತಿನ್ನಲು ಯೋಗ್ಯವಿಲ್ಲಎಂಬ ವರದಿ ಬಂದಿದೆ. ಹೀಗಾಗಿ ಜೆಎಂಎಫ್ಸಿ ನ್ಯಾಯಾಲಯದಲ್ಲಿಪ್ರಕರಣ ದಾಖಲಾಗಿದೆ. ಇನ್ನುಳಿದ 5 ಮಾದರಿಗಳಲ್ಲಿಅಘಾತಕಾರಿ ಅಂಶಗಳು ಬಯಲಾಗಿವೆ. ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ರೋಗ ಕಟ್ಟಿಟ್ಟ ಬುತ್ತಿ:ಖರಿದ ಎಣ್ಣೆಗಳನ್ನೇ ಪದೇಪದೆ ಬಳಕೆ ಮಾಡುವುದರಿಂದ ಹೃದಯ ಸ್ತಂಭನ ಮಾತ್ರವಲ್ಲದೇ, ಶುಚಿತ್ವವಿಲ್ಲದ ಊಟದಿಂದಾಗಿ ಅಧಿಕ ತೂಕ, ರಕ್ತದೊತ್ತಡ, ಅಪೌಷ್ಟಿಕತೆ, ಮಧುವೇಹ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ಗಳು ರೋಗಗಳು ಬರುವುದು ಗ್ಯಾರಂಟಿ. ಅದರಲ್ಲೂ ಫುಡ್ ಕಲರ್ ಬಳಕೆ, ಪ್ಲಾಸ್ಟಿಕ್ ಕವರ್ಗಳಲ್ಲಿಊಟ, ತಿಂಡಿಗಳ ಪಾರ್ಸಲ್, ನ್ಯೂಸ್ ಪೇಪರ್ಗಳಲ್ಲಿ ತಿಂಡಿ ಮಾರಾಟಮಾಡುವುದು, ಕೆಮಿಕಲ್ಸ್ಗಳ ಬಳಕೆ, ಟೇಸ್ಟಿಂಗ್ ಪೌಂಡರ್ಗಳಿಂದಾಗಿ ಅನೇಕ ರೋಗಗಳು ಹರಡುತ್ತಿರುವುದನ್ನು ಆರೋಗ್ಯ ಇಲಾಖೆ ಖಚಿತ ಪಡಿಸಿದೆ. ಅದರಲ್ಲೂ ರೆಸ್ಟೋರೆಂಟ್, ಹೋಟೆಲ್ಗಳಲ್ಲಿ ಬಳಕೆ ಮಾಡುವ ಎಣ್ಣೆಗಳನ್ನೇ ಬೀದಿಬದಿ ವ್ಯಾಪಾರಿಗಳು ಖರೀದಿಸಿ ಮರು ಬಳಕೆ ಮಾಡುತ್ತಿರುವುದು ಹೃದಯ ಸಂಬಂಧಿ ಕಾಯಿಲೆಗಳಿಗೆ ನೇರ ಪರಿಣಮ ಬೀರುತ್ತಿದೆ. ಕಲುಷಿತ ನೀರಿನ ಬಳಕೆಯಿಂದಾಗಿ ರೋಗಗಳು ಉಲ್ಬಣಗೊಳ್ಳುತ್ತಿರುವುದು ವರದಿಯಿಂದ ದೃಢಪಟ್ಟಿವೆ.