ಚಾಮರಾಜನಗರ:- ಕೇರಳದಲ್ಲಿ ಹೆಚ್ಚಾಗುತ್ತಿರುವ ಹಂದಿ ಜ್ವರದಿಂದಾಗಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಆತಂಕ ಶುರುವಾಗಿದ್ದು ಮುಂಜಾಗ್ರ ತಾಕ್ರಮವಾಗಿ ಕೇರಳ ಗಡಿಯಲ್ಲಿ ಪಶು ಇಲಾಖೆ ಕಟ್ಟೆಚ್ಚರ ವಹಿಸಿದೆ. ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೆÇೀಸ್ಟ್ ನಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯಇಲಾಖೆಯುತೀವ್ರ ನಿಗಾ ವಹಿಸಿದ್ದು ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರತಿ ವಾಹನಗಳಿಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ಕೇರಳದಲ್ಲಿ ಆಫ್ರಿಕನ್ ಸ್ವೈನ್ ಫೀವರ್ (ಹಂದಿ ಜ್ವರ), ಕೊರೊನಾ ವೈರಸ್ ನಂತೆ ಬೇಗ ಹರಡುವ ವೈರಲ್ ಫೀವರ್ಆಗಿದ್ದು
ಸದ್ಯಕಾಡು ಹಂದಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಜ್ವರ ಹೆಚ್ಚಾಗಿ ಹಂದಿಗಳು ಸಾವನ್ನಪ್ಪುತ್ತಿದ್ದು ಹಂದಿಗಳಿಂದ ಬೇರೆಕಾಡು ಪ್ರಾಣಿಗಳಿಗೂ ಹರಡುವ ಭೀತಿಎದುರಾಗಿದೆ. ಈ ಹಿನ್ನೆಲೆಜ್ವರ ಹರಡದಂತೆ ಪಶು ಇಲಾಖೆ ಮುನ್ನಚ್ಚರಿಕೆಕ್ರಮ ವಹಿಸಿದೆ.