ತಿ.ನರಸೀಪುರ:ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡು ಸಂಧಾನಕ್ಕಾಗಿ ಕರೆದು ಯುವಕನೊಬ್ಬನ್ನು ಕೊಲೆ ಮಾಡಿದ ಘಟನೆ ತಿ.ನರಸೀಪುರ ಪಟ್ಟಣದ ಅಗ್ನಿಶಾಮಕ ದಳದ ಕಚೇರಿ ಮುಂದೆ ಮಾರುತಿ ಸರ್ವಿಸ್ ಸ್ಟೇಷನ್ ಬಳಿ ನಡೆದಿದೆ.
ಪಟ್ಟಣದ ಶ್ರೀರಾಂಪುರ ಕಾಲೋನಿ ನಿವಾಸಿ
ವೇಣುಗೋಪಾಲ್ ನಾಯಕ್ (32)ವರ್ಷ ಕೊಲೆಯಾದ ಯುವಕ.
ಯುವ ಬ್ರಿಗೇಡ್ ನ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದನು.
ನೆನ್ನೆ ನಡೆದ ಹನುಮ ಜಯಂತಿ ವೇಳೆ ಮೆರವಣಿಗೆಯಲ್ಲಿ ಪುನೀತ್ ರಾಜಕುಮಾರ್ ಫೋಟೋ ಇಡುವ ಸಂಬಂಧ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.ಸ್ಥಳದಲ್ಲಿದ್ದ ಕೆಲವರು ಈ ವೇಳೆ ಎರಡು ಗುಂಪುಗಳ ನಡುವೆ ಮಧ್ಯಸ್ಥಿಕೆ ವಹಿಸಿ ಸಮಾಧಾನ ಪಡಿಸಲಾಗಿತ್ತು.ಆದರೆ,ನೆ ನ್ನೆ ಕೂಡ ಈ ಬಗ್ಗೆ
ಎರಡು ಗುಂಪುಗಳ ನಡುವಿನ ಗಲಾಟೆ ನಡೆದು ಆರೋಪಿತ ಮಣಿ ಮತ್ತು ಅವರ ತಂಡ ವೇಣುಗೋಪಾಲ್ ಮೇಲೆ ಹಲ್ಲೆ ನಡೆಸಿತ್ತು.ಅಲ್ಲೂ ಕೂಡ ಕೆಲವರು ಮಧ್ಯ ಪ್ರವೇಶಿಸಿ ಗಲಾಟೆ ನಿಲ್ಲಿಸಿದ್ದರು.
ಮತ್ತೆ ನೆನ್ನೆ ರಾತ್ರಿ 8.30 ಸಮಯದಲ್ಲಿ
ಆರೋಪಿಗಳಲ್ಲಿ ಒಬ್ಬನಾದ ಮಣಿ ಉ ಕೋಳಿ ಮಣಿ ಎಂಬುವನು ವೇಣುಗೋಪಾಲ್ ಗೆ ಕರೆಮಾಡಿ ಮಾತನಾಡಲು ಆಹ್ವಾನಿಸಿದ್ದನು.ಆದರೆ,ವೇಣುಗೋಪಾಲ್ ಹೋಗಲು ನಿರಾಕರಿಸಿದ್ದನು.ನಂತರ ವೇಣುಗೋಪಾಲ್ ತನ್ನ ಸ್ನೇಹಿತರ ಜೊತೆಗೂಡಿ ಸರ್ವಿಸ್ ಸ್ಟೇಷನ್ ಬಳಿಗೆ ಬಂದಾಗ ಏಕಾಏಕಿ ಬಾಟಲಿನಿಂದ ಹೊಡೆದು,ಹೊಟ್ಟೆಗೆ ಬಾಟಲಿಗಳಿಂದ ಚುಚ್ಚಿ ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ಸಂಬಂಧ ಪಟ್ಟಣದ ನಿವಾಸಿಗಳಾದ ಮಣಿಕಂಠ ಉ ಕೋಳಿ ಮಣಿ,ಸಂದೇಶ್,ಶಂಕರೇಗೌಡ,ಅನಿಲ್,ಮಂಜು,ಹ್ಯಾರಿಸ್ ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲಾಗಿದೆ.ಆರೋಪಿತರ ಇಬ್ಬರು ಪೊಲೀಸರಿಗೆ ಶರಣಾಗಿದ್ದು,ಇನ್ನುಳಿದ
ಆರೋಪಿಗಳ ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಗೋವಿಂದರಾಜು ಭೇಟಿ ನೀಡಿ ಪರಿಶೀಲಿಸಿದರು.ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.