ಬೆಂಗಳೂರು: ರಾಜ್ಯದ ಮಹಿಳೆಯರು ಕುತೂಹಲದಿಂದ ನಿರೀಕ್ಷಿಸುತ್ತಿರುವ ‘ಗೃಹಲಕ್ಷ್ಮೀ ‘ ಗ್ಯಾರಂಟಿ ಯೋಜನೆಯಡಿ 2 ಸಾವಿರ ರೂ. ಪಡೆಯುವುದು ಇನ್ನೂ ಕೆಲದಿನ ವಿಳಂಬವಾಗುವ ಸಾಧ್ಯತೆಯಿದೆ.
ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ಕೊಡುವ ಈ ಯೋಜನೆಗೆ ಸ್ವಾತಂತ್ರ್ಯೋತ್ಸವ ದಿನದ ಮರುದಿನ ಆ.16 ಚಾಲನೆ ನೀಡಲು ಉದ್ದೇಶಿಸಲಾಗಿತ್ತು. ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರನ್ನು ಕರೆಸಿ ಈ ಮಹತ್ವದ ಯೋಜನೆಗೆ ಚಾಲನೆ ನೀಡಲು ಸರಕಾರ ಬಯಸಿರುವ ಕಾರಣ ಕನಿಷ್ಠ ಒಂದು ವಾರ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಶೇ. 75 ರಷ್ಟು ನೋಂದಣಿ
ಸರ್ವರ್ ಸಮಸ್ಯೆ, ಆಧಾರ್ ಕಾರ್ಡ್ ಲಿಂಕ್ ಸೇರಿ ನಾನಾ ಸಮಸ್ಯೆಗಳ ನಡುವೆಯೂ ರಾಜ್ಯದಲ್ಲಿ ಶೇ.75 ರಷ್ಟು ನೋಂದಣಿ ದಾಖಲಾಗಿದೆ. 31ಜಿಲ್ಲೆಗಳನ್ನು ನೋಂದಣಿ ಸಾಧನೆ ಆಧರಿಸಿ ಗ್ರೀನ್, ಹಳದಿ ಹಾಗೂ ರೆಡ್ ಝೋನ್ಗಳನ್ನಾಗಿ ವಿಂಗಡಿಸಲಾಗಿದೆ. ಅತೀ ಹೆಚ್ಚು ನೋಂದಣಿ ದಾಖಲಿಸಿದ ಮೂರು ಜಿಲ್ಲೆಗಳು ಗ್ರೀನ್, 19 ಜಿಲ್ಲೆಗಳು ಹಳದಿ, 9ಜಿಲ್ಲೆಗಳು ರೆಡ್ ಝೋನ್ನಲ್ಲಿವೆ.
ಆ.01ರ ವರದಿ ಪ್ರಕಾರ ರಾಜ್ಯದಲ್ಲಿಬೆಂಗಳೂರು ಗ್ರಾಮೀಣ ಜಿಲ್ಲೆಮೊದಲ ಸ್ಥಾನದಲ್ಲಿದೆ. ಬೆಂಗಳೂರು ನಗರ ಕೇವಲ ಶೇ.36.44ರಷ್ಟು ನೋಂದಣಿ ಪೂರ್ಣಗೊಳಿಸಿರುವ ಮೂಲಕ ಕೊನೆ ಸ್ಥಾನದಲ್ಲಿದೆ. ಈ ಪೈಕಿ ನಿಗದಿಪಡಿಸಿದ ನೋಂದಣಿ ಗುರಿಯಲ್ಲಿಬೆಂಗಳೂರು ಗ್ರಾಮೀಣ ಶೇ.117.56ರಷ್ಟು ನೋಂದಣಿ ಪೂರ್ಣಗೊಳಿಸಿದೆ.
ಹಾವೇರಿ ಶೇ.84.76, ಚಾಮರಾಜನಗರ ಶೇ.80.07, ಚಿಕ್ಕಮಗಳೂರು ಶೇ.79.83, ಗದಗ ಶೇ.78.10. ಹಾಸನ ಶೇ.77.81, ಮಂಡ್ಯ ಶೇ 76.53, ಉತ್ತರ ಕನ್ನಡ ಶೇ.76.31, ರಾಮನಗರ ಶೇ.76.04, ಚಿತ್ರದುರ್ಗ ಶೇ.75.54, ತುಮಕೂರು ಶೇ.74.62, ಶಿವಮೊಗ್ಗ ಶೇ.74.46, ದಾವಣಗೆರೆ ಶೇ.74.25, ಬೀದರ್ ಶೇ.73.80, ಕೊಪ್ಪಳ ಶೇ.73.76, ಬೆಳಗಾವಿ ಶೇ.73.21, ಮೈಸೂರು ಶೇ.72.77, ಚಿಕ್ಕಬಳ್ಳಾಪುರ ಶೇ.71.71, ರಾಯಚೂರು ಶೇ.71.32, ವಿಜಯಪುರ ಶೇ.71.31, ಬಾಗಲಕೋಟೆ ಶೇ.71.18, ಯಾದಗಿರಿ ಶೇ.71.07, ಧಾರವಾಡ ಶೇ.69.75, ಕಲಬುರಗಿ ಶೇ.69.73, ಕೋಲಾರ ಶೇ.69.71, ಬಳ್ಳಾರಿ ಶೇ.69.26, ಕೊಡಗು ಶೇ.69.09, ದಕ್ಷಿಣ ಕನ್ನಡ ಶೇ.67.52, ವಿಜಯನಗರ ಶೇ.67.31, ಉಡುಪಿ ಶೇ.65.22 ಹಾಗೂ ಬೆಂಗಳೂರು ನಗರದಲ್ಲಿಕೇವಲ ಶೇ.36.44ರಷ್ಟು ಮಾತ್ರ ನೋಂದಣಿಯಾಗಿದೆ.
1.28ಕೋಟಿ ಫಲಾನುಭವಿಗಳಿಗೆ ಲಾಭ
ಕೆಲವೆಡೆ ಪಡಿತರ ಚೀಟಿಯಲ್ಲಿರುವಂತ ಮನೆಯೊಡತಿ ಮೃತಪಟ್ಟಿದ್ದರೂ ಅಪ್ಡೇಟ್ ಮಾಡಿಸದ ಪ್ರಕರಣಗಳು ಸಹ ಕಂಡುಬAದಿವೆ. ನೋಂದಣಿ ಕೇಂದ್ರದ ಸಿಬ್ಬಂದಿಗೆ ಆಗಾಗ ಕೈಕೊಡುವ ಸರ್ವರ್ ಸಮಸ್ಯೆ ನಡುವೆ ಜನತೆಯ ದಾಖಲೆಗಳ ಪರಿಶೀಲನೆ, ಅವರಿಗೆ ಮಾರ್ಗ ಸೂಚನೆ ಕೋಡುವುದು ಸೇರಿ ನಾನಾ ಸವಾಲುಗಳನ್ನು ಎದುರಿಸುವಂತಾಗಿದೆ. ರಾಜ್ಯದಲ್ಲಿ 1.28ಕೋಟಿ ಫಲಾನುಭವಿಗಳು ಲಾಭ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.