ಚಾಮರಾಜನಗರ:-ಚಾಮರಾಜನಗರಜಿಲ್ಲಾಕೇಂದ್ರಕ್ಕೆ ಮುಖ್ಯಮಂತ್ರಿಆದವರು ಬಂದರೆಅಧಿಕಾರ ಕಳೆದುಕೊಳ್ಳುತ್ತಾರೆಂಬ ಮೌಡ್ಯತೊಡೆದು ಹಾಕಿದ್ದ ಸಿದ್ದರಾಮಯ್ಯ ಈಗ 2 ಬಾರಿ ಸಿಎಂ ಗಾದಿಗೆ ಏರುತ್ತಿದ್ದಾರೆ.
ಹೌದು, ಮುಖ್ಯಮಂತ್ರಿಆಗಿದ್ದ ವೇಳೆ 17 ಕ್ಕೂ ಹೆಚ್ಚು ಬಾರಿಚಾಮರಾಜನಗರಕ್ಕೆ ಆಗಮಿಸಿ ಸಾವಿರಾರುಕೋಟಿಅನುದಾನಕೊಟ್ಟಿದ್ದ ಸಿದ್ದರಾಮಯ್ಯ, ಈಗ ಮತ್ತೆ ಸಿಎಂ ಆಗುತ್ತಿದ್ದು, ಗಡಿಜಿಲ್ಲೆಅಭಿವೃದ್ಧಿಗೆ ಶುಕ್ರದೆಸೆಆರಂಭಎಂಬುದುಜನರ ಮಾತಾಗಿದೆ.
ಚಾಮರಾಜನಗರ ಲೋಕಸಭಾಕ್ಷೇತ್ರ ವ್ಯಾಪ್ತಿಗೆ ವರುಣಾ ವಿಧಾನಸಭೆ ಬರಲಿದ್ದು, ಜೊತೆಗೆಚಾಮರಾಜನಗರ ಅವಿಭಜಿತ ಮೈಸೂರುಜಿಲ್ಲೆಯಲ್ಲಿದ್ದರಿಂದಗಡಿಜಿಲ್ಲೆಕಂಡರೆ ವಿಶೇಷ ಪ್ರೀತಿಇಟ್ಟುಕೊಂಡಿರುವ ಸಿದ್ದರಾಮಯ್ಯ ಜಿಲ್ಲಾಉದ್ಘಾಟನೆ ವೇಳೆ ಅಂದಿನ ಸಿಎಂ ಜೆಹೆಚ್ ಪಟೇಲ್ ಮಲೆಮಹದೇಶ್ವರ ಬೆಟ್ಟದಲ್ಲಿಜಿಲ್ಲೆ ಉದ್ಘಾಟಿಸಿದರೆ, ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಬಂದುಜಿಲ್ಲಾಕೇಂದ್ರ ಉದ್ಘಾಟಿಸಿದ್ದರು.
ಚಾಮರಾಜನಗರಅಭಿವೃದ್ಧಿ ವೇಗ ಪಡೆಯಲಿದೆ: ಚಾಮರಾಜನಗರಕ್ಕೆ ಬಂದರೆಅಧಿಕಾರ ಹೋಗಲಿದೆ ಎಂಬ ಮೌಡ್ಯಕ್ಕೆ ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಆಗಿದ್ದ ವೇಳೆ 17ಕ್ಕೂ ಹೆಚ್ಚು ಬಾರಿ ಭೇಟಿಕೊಟ್ಟು 5 ವರ್ಷ ಆಡಳಿತ ನಡೆಸಿ ಗಡಿಜಿಲ್ಲೆಗೆಅಂಟಿದ್ದ ಮೌಡ್ಯಕ್ಕೆ ಎಳ್ಳುನೀರು ಬಿಟ್ಟಿದ್ದರು. ಈಗ ಮತ್ತೆ ಸಿಎಂ ಆಗುತ್ತಿದ್ದು, ಚಾಮರಾಜನಗರಅಭಿವೃದ್ಧಿ ವೇಗ ಪಡೆಯಲಿದೆಎಂಬುದುಜನರ ಪಕ್ಷಾತೀತಅಭಿಪ್ರಾಯವಾಗಿದೆ.
ಚಾಮರಾಜನಗರ ಪರರೋಡ್ ಶೋ ಮಾಡಿದ್ದ ಸಿದ್ದರಾಮಯ್ಯ: ಗಡಿಚಾಮರಾಜನಗರಜಿಲ್ಲೆಯಜನತೆಯ ವಲಸೆ ತಪ್ಪಿಸುವ ಸಲುವಾಗಿ ಬಹು ನಿರೀಕ್ಷೆಯಿಂದಆರಂಭಿಸಲಾದಚಾಮರಾಜನಗರತಾಲೂಕಿನ ಬದನಗುಪ್ಪೆ – ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬರದಿದ್ದಾಗ ಕೈಗಾರಿಕೆಗಳನ್ನು ಸೆಳೆಯಲು ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ ತಮಿಳುನಾಡಿನ ಕೊಯಮತ್ತೂರಿನಲ್ಲಿರೋಡ್ ಶೋ ನಡೆಸಿ ಗಮನ ಸೆಳೆದಿದ್ದರು.
ಹೊಸ ಕೈಗಾರಿಕೆಗಳು ಸ್ಥಾಪನೆಯಾಗುವ ನಿರೀಕ್ಷೆ: ಆಗ ಆರಂಭಿಕಯಶಕಂಡಿದ್ದ ಸಿದ್ದರಾಮಯ್ಯ 300 ಕೈಗಾರಿಕೋದ್ಯಮಿಗಳು ಸುಮಾರು 12 ಸಾವಿರಕೋಟಿರೂ. ಹೂಡಿಕೆ ಮಾಡಲು ಆಸಕ್ತಿ ತೋರಿದ್ದರು. ಆದರೆ, ನಂತರ ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಲು ಹಿಂದೇಟು ಹಾಕಿದ್ದರು. ಈಗ ಮತ್ತೆ ಸಿದ್ದರಾಮಯ್ಯ ಸಿಎಂ ಆಗುತ್ತಿರುವುದರಿಂದ ಹೊಸ ಕೈಗಾರಿಕೆಗಳು ಸ್ಥಾಪನೆಯಾಗುವ ನಿರೀಕ್ಷೆಗರಿಗೆದರಿದೆ.
ಚಾಮರಾಜನಗರ ಶಾಸಕಗೆ ಸಚಿವ ಪಟ್ಟ: ಸಿದ್ದರಾಮಯ್ಯ ಶಿಷ್ಯ, ಆಪ್ತ ಬಳಗದ ಶಾಸಕ ಸಿ ಪುಟ್ಟರಂಗಶೆಟ್ಟಿ ಸತತ ನಾಲ್ಕನೇ ಬಾರಿಗೆದ್ದಿದ್ದಾರೆ. ಅದೂಕೂಡ, ಬಿಜೆಪಿ ಪ್ರಭಾವಿ ನಾಯಕ ಸೋಮಣ್ಣ ವಿರುದ್ಧಜಯ ಸಾಧಿಸಿದ್ದು, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆದಟ್ಟವಾಗಿದೆ.
ಚಾಮರಾಜನಗರದಲ್ಲಿಗೆದ್ದಿರುವ ಮೂವರು ಕೈ ಶಾಸಕರುಕೂಡ ಸಿದ್ದರಾಮಯ್ಯ ಜೊತೆಆತ್ಮೀಯ ಸಂಬಂಧ ಹೊಂದಿದ್ದು, ಅನುದಾನತರುವಲ್ಲಿಯಾವುದೇ ಸಮಸ್ಯೆಎದುರಿಸಲಾರರುಎಂಬುದಂತೂ ಸತ್ಯ. ಮೊದಲ ಬಾರಿ ಸಿಎಂ ಆದಾಗಚಾಮರಾಜನಗರದ ಮೌಡ್ಯತೊಡೆದು ಹಾಕಿದ್ದ ಸಿದ್ದರಾಮಯ್ಯ ಈಗ ಎರಡನೇ ಬಾರಿ ಸಿಎಂ ಆಗುತ್ತಿದ್ದು, ಗಡಿಜಿಲ್ಲೆ ನಿರೀಕ್ಷೆಗಳು ಗರಿಗೆದರಿವೆ.