ಬೆಂಗಳೂರು:- ಇಂದು ಒಂದೇ ದಿನ ೧೦೦ ಗ್ರಾಂ ೨೪ ಕ್ಯಾರಟ್ ಚಿನ್ನದ ಬೆಲೆ 10,400 ರೂಪಾಯಿ ಕಡಿಮೆಯಾಗಿದೆ.
ಬಂಗಾರ ದರದಲ್ಲಿ ಏರಿಳಿಯ ಆಗುತ್ತಲೇ ಬರುತ್ತಿದೆ. ಆದರೆ ಬಜೆಟ್ ಆದಾಗಿನಿಂದಲೂ ಭಾರೀ ಪ್ರಮಣದಲ್ಲಿ ಇಳಿಕೆಯಾಗುತ್ತಲೇ ಇದೆ. ಇನ್ನೂ ನಿನ್ನೆಗೆ ಹೋಲಿಕೆ ಮಾಡಿದರೆ ಇಂದು (ಜುಲೈ ೨೫) ದಿಢೀರ್ ೧೦,೪೦೦ ರೂಪಾಯಿ ಇಳಿಕೆಯಾಗಿದೆ.
ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ & ಬೆಳ್ಳಿ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಗುರುವಾರ ಒಂದೇ ದಿನ ೧೦೦ ಗ್ರಾಂ ೨೪ ಕ್ಯಾರಟ್ ಚಿನ್ನದ ಬೆಲೆ ೧೦,೪೦೦ ರೂಪಾಯಿ ಕಡಿಮೆಯಾಗಿದೆ. ಇನ್ನು ನಿನ್ನೆ ೭,೦೮,೬೦೦ ರೂಪಾಯಿ ಇದ್ದ ೧೦೦ ಗ್ರಾಂ (೨೪ ಕ್ಯಾರಟ್) ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ ೧೦,೪೦೦ ರೂಪಾಯಿ ಕುಸಿತ ಕಂಡಿದ್ದು, ೬,೯೮,೨೦೦ ರೂಪಾಯಿಗೆ ಮಾರಾಟವಾಗುತ್ತಿದೆ. ಈ ಮೂಲಕ ಪ್ರತಿ ಗ್ರಾಂ ಚಿನ್ನದ ದರ ೧೦೪ ರೂಪಾಯಿ ಕಡಿಮೆಯಾಗಿದೆ.
ಬುಧವಾರ ೬,೪೯,೫೦೦ ಇದ್ದ ೧೦೦ ಗ್ರಾಂ ಚಿನ್ನದ (೨೨ ಕ್ಯಾರಟ್) ದರ ಇಂದು ೯,೫೦೦ ರೂಪಾಯಿ ಕುಸಿತ ಕಂಡಿದ್ದು, ೬,೪೦,೫೦೦ ರೂಪಾಯಿಗೆ ಮಾರಾಟ ಆಗುತ್ತಿದೆ. ಇನ್ನು ಪ್ರತಿ ಗ್ರಾಂ (೨೨ ಕ್ಯಾರಟ್) ಚಿನ್ನದ ಬೆಲೆ ೯೫ ರೂಪಾಯಿ ಕಡಿಮೆಯಾಗಿದೆ. ನಿನ್ನೆ ಬೆಂಗಳೂರಿನಲ್ಲಿ ೧೦ ಗ್ರಾಂ (೨೨ ಕ್ಯಾರೆಟ್) ಬಂಗಾರ ದರ ೬೪,೯೫೦ ಇದ್ದರೆ, ಇಂದು ೬೪,೦೦೦ ರೂಪಾಯಿಗೆ ಮಾರಾಟ ಆಗುತ್ತಿದೆ.
ವಿವಿಧ ನಗರಗಳಲ್ಲಿ ಬಂಗಾರ ದರ ೨೪ ಕ್ಯಾರೇಟ್ (೧೦ ಗ್ರಾಂ)
- ಬೆಂಗಳೂರು – ೬೯,೮೨೦ ರೂಪಾಯಿ
- ಚೆನ್ನೈ – ೭೦,೧೨೦ ರೂಪಾಯಿ
- ಮುಂಬೈ – ೬೯,೮೨೦ ರೂಪಾಯಿ
- ಕೋಲ್ಕತ್ತಾ – ೬೯,೮೨೦ ರೂಪಾಯಿ
- ನವದೆಹಲಿ – ೬೯,೯೫೦ ರೂಪಾಯಿ
- ಹೈದರಾಬಾದ್ – ೬೯,೮೨೦ ರೂಪಾಯಿ
ಬೆಳ್ಳಿ ದರ (ಕೆ.ಜಿ.)
- ಬೆಂಗಳೂರು – ೮೪,೫೦೦ ರೂಪಾಯಿ
- ಚೆನ್ನೈ – ೮೪,೫೦೦ ರೂಪಾಯಿ
- ಮುಂಬೈ – ೮೪,೫೦೦ ರೂಪಾಯಿ
- ಕೋಲ್ಕತ್ತಾ – ೮೪,೫೦೦ ರೂಪಾಯಿ
- ನವದೆಹಲಿ – ೮೪,೫೦೦ ರೂಪಾಯಿ
- ಹೈದರಾಬಾದ್ – ೮೪,೫೦೦ ರೂಪಾಯಿ