ಮೈಸೂರು: ಸಿಎಂ ಹಾಗೂ ಡಿಸಿಎಂ ಅವರ ಸೂಚನೆ ಮೇರೆಗೆ ವಾರ್ಡ್ ಹಂತದಲ್ಲಿಯೂ ಜನಸ್ಪಂದನಾ ನಡೆಸಲು ಮುಂದಾದ ಶಾಸಕ ಹರೀಶ್ ಗೌಡ ಅವರ ಮೊದಲ ಸಭೆಯೇ ಅವ್ಯವಸ್ಥೆಯ ಅಗಾರವಾಗಿ ಮಾರ್ಪಡಾಗಿತು.
ನಜರ್ ಬಾದ್ ನ ನಿಂಬುಜಾಂಬದೇವಿ ದೇವಾಲಯದ ಸಭಾ ಭವನದಲ್ಲಿ 40 ನೇ ವಾರ್ಡಿನ ಜನತೆಗೆ 10.30 ರಿಂದಲೇ ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಶಾಸಕರು 11.45 ಕ್ಕೆ ಒಂದು ತಾಸಿಗೂ ಹೆಚ್ಚು ಕಾಲ ವಿಳಂಬವಾಗಿ ಬಂದರು. ಹೀಗಾಗಿ ಅರ್ಜಿ ಹಿಡಿದು ಆಗಮಿಸಿದ್ದ ನೂರಾರು ಮಹಿಳೆಯರು, ಹಿರಿಯರು ಬಸವಳಿದರು.
ಇನ್ನೂ ಪೂರ್ವ ಸಿದ್ಧತೆ ಇಲ್ಲದೆ ಇದ್ದದ್ದರಿಂದ ತಮ್ಮ ಅರ್ಜಿ ಕೊಡಲು ಜನರು ಮುಗಿ ಬಿದ್ದರು. ಪೂರ್ವಪರ ಸಿದ್ಧತೆಯಿಲ್ಲದೆ ಸಂಪೂರ್ಣ ಗೊಂದಲದ ಗೂಡಾಗಿ ಮೊದಲ ಕಾರ್ಯಕ್ರಮವೇ ಅವ್ಯವಸ್ಥೆಯಿಂದ ಕೂಡಿತ್ತು. ಈ ನಡುವೆಯೂ ವಿಶೇಷ ಚೇತನರು ಸೇರಿ ಅನೇಕ ಹಿರಿಯರು ತಮ್ಮ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಅರ್ಜಿ ಹಿಡಿದು ಆಗಮಿಸಿದ್ದ ದೃಶ್ಯ ಕಂಡು ಬಂದವು.