ಮೈಸೂರು: ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಮೊದಲ ತಂಡ ವೀರನಹೊಸಹಳ್ಳಿಯಿಂದ ಗಜಪಯಣ’ ಕಾರ್ಯಕ್ರಮದ ಮೂಲಕ ನಗರವನ್ನು ಪ್ರವೇಶಿಸಿದ್ದು ಅರಣ್ಯಭವನದಲ್ಲಿ ಮೊದಲ ದಿನ ಜಾಲಿಮೂಡ್ನಲ್ಲಿ ದಸರಾ ಗಜಪಡೆ ಕಾಣಿಸಿಕೊಂಡಿದೆ.
ನಾಡಹಬ್ಬ ದಸರಾ ಮಹೋತ್ಸವದ ಕೇಂದ್ರಬಿಂದು ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಗಳೇ ಪ್ರಮುಖ ಆಕರ್ಷಣೆ. ಇವು ನಗರಕ್ಕೆ ಆಗಮಿಸುತ್ತಿದ್ದಂತೆ ದಸರಾ ಕಳೆ ಕಟ್ಟುತ್ತದೆ. ಇವು ಸುಮಾರು ೧ ತಿಂಗಳ ಕಾಲ ರೋಡ್ ಶೋ ನಡೆಸುವ ಮೂಲಕ ದಸರಾ ಪ್ರಚಾರಕ್ಕೆ ನಾಂದಿ ಹಾಡುತ್ತವೆ.
ಆನೆಗಳ ನೋಡೋದೇ ಚೆಂದ. ಮೈಸೂರು ದಸರಾಗೆಂದು ಆಗಮಿಸಿ ಅರಣ್ಯಭವನದಲ್ಲಿ ಬೀಡು ಬಿಟ್ಟಿರುವ ಗಜಪಡೆ ರಿಲಾಕ್ಸ್ ಮೂಡ್ನಲ್ಲಿದ್ದರೆ ಅವುಗಳನ್ನು ವೀಕ್ಷಿಸಲು ಮಕ್ಕಳ ದಂಡೇ ಆಗಮಿಸುತ್ತಿದೆ.
ಮೈಸೂರಿಗೆ ಆಗಮಿಸಿರುವ ದಸರಾ ಆನೆಗಳಿಗೆ ಹಸಿ ಹುಲ್ಲಿನ ಆಹಾರ. ಗಜಸೇವಕರ ಆರೈಕೆ. ಮೈಸೂರು ದಸರಾ ಆನೆಗಳಿಗೆ ಬೆಳಗಿನ ಉಪಹಾರ. ಭತ್ತದೊಂದಿಗೆ ಹುಲ್ಲಿನ ಉಪಚಾರ ನಡೆಯುತ್ತಿದ್ದು, ಇನ್ನೂ ಮೈಸೂರು ಅಶೋಕಪುರಂನ ಅರಣ್ಯಭವನದಲ್ಲಿ ಬೀಡು ಬಿಟ್ಟ ನಮ್ಮನ್ನು ನೋಡಲು ಬರುವವರು ಹಲವರು ಎನ್ನುವ ಖುಷಿ ಅಭಿಮನ್ಯು ಮತ್ತು ತಂಡಕ್ಕೆ.