ಬೆಂಗಳೂರು: ಕೊಲೆ ಕೇಸ್ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್, ತನಗೆ ಮನೆಯಿಂದ ಊಟ, ಹಾಸಿಗೆ, ದಿಂಬು, ಪುಸ್ತಕ ನೀಡುವಂತೆ ಹೈಕೋರ್ಟ್ನಲ್ಲಿ ಮನವಿ ಮಾಡಿಕೊಂಡಿದ್ದರು. ಜೈಲಿನಲ್ಲಿರುವ ಪರಿಷ್ಕರಣೆ ನಿಯಮ ಎಂದು ಇದೆಯಲ್ವಾ? ಅದನ್ನು ಮೊದಲು ನಮಗೆ ತೋರಿಸಿ. ಆ ನಿಯಮಗಳನ್ನು ತೋರಿಸಿದ್ರೆ ಆದೇಶ ನೀಡಬಹುದು. ಅಲ್ಲದೇ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು. ಆ ನಂತರ ನಾವು ಆದೇಶವನ್ನು ಮಾಡಬಹುದು ಎಂದು ನ್ಯಾಯಮೂರ್ತಿ ಕೃಷ್ಣ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.ಬಳಿಕ ಅರ್ಜಿ ವಿಚಾರಣೆಯನ್ನು ಜುಲೈ 18ಕ್ಕೆ ವಿಚಾರಣೆನ್ನು ಮುಂದೂಡಿತು. ಈ ಮೂಲಕ ಜುಲೈ 18ರ ತನಕ ದರ್ಶನ್ಗೆ ಮನೆ ಊಟ, ಬಟ್ಟೆ, ಚಮಚ ಮತ್ತು ಪುಸ್ತಕ ಸಿಗಲ್ಲ. ಆರೋಪಿ ದರ್ಶನ್ಗೆ ನಿರಾಸೆಯಾಗಿದೆ.