ಮೈಸೂರು: ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ಶಬರಿಮಲೆ ಶ್ರೀ ಅಯ್ಯಪ್ಪ ಪೂಜಾ ಸಮಿತಿಯ ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಶ್ರೀ ಗುರುವಾಯೂರಪ್ಪನ್ ದೇವಾಲಯದ 63ನೇ ವಾರ್ಷಿಕ ಪೂಜಾ ಮಹೋತ್ಸವವನ್ನು ಡಿ.16ರಿಂದ ಮೂರು ದಿನಗಳ ವಿವಿಧ ಪೂಜಾ ಕಾರ್ಯ ನಡೆಯಲಿದೆ.
ಈ ಕುರಿತು ಸಮಿತಿಯ ಕಾರ್ಯದರ್ಶಿ ಆರ್.ಹರಿದಾಸ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 63ನೇ ವಾರ್ಷಿಕ ಪೂಜಾ ಮಹೋತ್ಸವದಂದು ಪಳ್ಳಿಯುಣರ್ತಲ್, ಗಣಪತಿ ಹೋಮಂ, ತುಪ್ಪದ ಅಭಿಷೇಕ ವಾದ್ಯದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಅಲಂಕಾರ ಪೂಜಾ, ಎಡಕ್ಕದೊಂದಿಗೆ ಅಷ್ಟಪತಿ ಗಾನಂ, ವಾದ್ಯಕಲಾರತ್ನ ಪಯ್ಯಾವೂರು ಗೋಪಾಲನ್ ಕುಟ್ಟಿ ಮಾರಾರ್ ಮತ್ತು ವೃಂದದವರಿಂದ ಪಾಂಡಿಮೇಳದೊಂದಿಗೆ ದೇವಸ್ಥಾನದಲ್ಲಿ ದೇವರ ಉತ್ಸವ ಹಾಗೂ ಅಯ್ಯಪ್ಪನ್ ಕುಡಿಯಿರುತ್ತಲ್
ಉಡುಕ್ಕು ವಾದ್ಯದೊಂದಿಗೆ ಅಯ್ಯಪ್ಪನ್ ಭಜನೆ, ವಿದ್ಯಾರಣ್ಯಪುರಂನಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಿಂದ ಪಾಲಕ್ಕೊಂಬು ಮೆರವಣಿಗೆ ಜೊತೆಗೆ ನಂದಿಕಂಬ, ಮೈಸೂರು ಯದುಕುಮಾರ್ ಮತ್ತು ತಂಡದವರಿಂದ ನಾದಸ್ವರ ಮಂಗಳವಾದ್ಯದೊಂದಿಗೆ ಪಂಚವಾದ್ಯ, ಕೀಲುಕ ಸುರೆ, ವೆಲಿಚಪ್ಪಾಡ್ ನೃತ್ಯದೊಂದಿಗೆ ಚಾಮುಂಡಿಪುರಂ, ನಂಜುಮಳಿಗೆ ವೃತ್ತ, ತ್ಯಾಗರಾಜ ವೃತ್ತ, ಬಸವೇಶ್ವರ ಸರ್ಕಲ್, ನಂಜನಗೂಡು ರಸ್ತೆಗೆ ಬಂದು ದೇವಾಲಯ ತಲುಪಲಿದೆ ಎಂದರು.
ಡಿ.17 ರಂದು ಸಹ ಧ್ವಜಾರೋಹಣ, ವಾಸ್ತುಹೋಮ, ವಾಸ್ತಕಳಶ ಪೂಜಾ, ವಾಸ್ತು ಬಲಿ, ರಕ್ಷೋಘ್ನ ಹೋಮ ಇತ್ಯಾದಿ ಕಾರ್ಯಕ್ರಮ ಜರುಗಲಿವೆ. ಅಂತೆಯೇ 18 ಹಾಗೂ 19 ರಂದು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಸಮಿತಿಯ ಉಪಾಧ್ಯಕ್ಷ ಆಎದ ಕೃಷ್ಣೋಜಿರಾವ್, ಖಜಾಂಚಿ ಇ.ಎನ್.ಸುರೇಶನ್, ಉಸ್ತುವಾರಿ ಸುನೀಲ್ ಕುಮಾರ್, ಎ.ಎಸ್.ಅಪ್ಪು, ಕೆ.ಎನ್.ಬಸವರಾಜು ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.