ಮೈಸೂರು: ಕರ್ನಾಟಕ ರಾಜ್ಯ ಸರ್ಕಾರಿ ವಿಶ್ರಾಂತ ಉದ್ಯೋಗಿಗಳ ಸಂಘವು ಡಿ.17 ಮ.3 ಕ್ಕೆ ಪಿಂಚಣಿದಾರರ ದಿನಾಚರಣೆಯನ್ನು ಆಯೋಜಿಸಿದೆ.
ಈ ಕುರಿತು ಸಂಘದ ಅಧ್ಯಕ್ಷ ಬಿ.ಆರ್.ಊಮಾಕಾಂತ್ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಂದು ಶ್ರೀರಾಪುರ ಎಸ್ ಬಿಎಂ ಕಾಲೋನಿ ಶಿವ ದೇವಾಲಯದಲ್ಲಿ ನಡೆಯುವ ಕಾರ್ಯಕ್ರಮವನ್ನು ನಿವೃತ್ತ ಸರ್ಕಾರಿ ಅಧೀನ ಕಾರ್ಯದರ್ಶಿ ಡಾ. ಪಿ. ಬೋರೇಗೌಡರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಸಹನಿರ್ದೇಶಕಿ ಪಿ.ಶಾರದೆ ಭಾಗವಹಿಸಲಿದ್ದಾರೆ. ದಿನದರ್ಶಿಕೆಯನ್ನು ಸಂಘದ ಸಂಸ್ಥಾಪಕ ಎನ್. ಓಬಯ್ಯ ನೇರವೇರಿಸಲಿದ್ದಾರೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷರಾದ ಮರಿಯಾದಾಸ್, ಕೆ.ಟಿ.ವೀರಪ್ಪ, ನಾಗರಾಜು, ಕೆ.ಎಂ. ಪುಟ್ಟು, ಪ್ರಧಾನ ಕಾರ್ಯದರ್ಶಿ ಸಿ.ಚಿಕ್ಕಲಿಂಗಸ್ವಾಮಿ, ಖಜಾಂಚಿ ಶಿವನಾಂದ ಸುದ್ದಿಗೋಷ್ಠಿಯಲ್ಲಿದ್ದರು.