ಮೈಸೂರು: ನಗರದ ಮೈಸೂರು ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾದ ಯುವರಾಜ( ಸ್ವಾಯತ್ತ) ಕಾಲೇಜಿನ 9ನೇ ಘಟಿಕೋತ್ಸವ ಸಮಾರಂಭವನ್ನು ಡಿ.28 ರಂದು ಆಯೋಜಿಸಿರುವುದಾಗಿ ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್.ಸಿ.ದೇವರಾಜೇಗೌಡ
ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದಿನ ಪದವಿ ಪ್ರಧಾನ ಸಮಾರಂಭದಲ್ಲಿ 11 ಚಿನ್ನದ ಪದಕ ಹಾಗೂ 60 ದತ್ತು ನಗದು ಬಹುಮಾನವನ್ನು ನೀಡಿ ಗೌರವಿಸಲಾಗುವುದು ಎಂದರು.
ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಅಂದು ಬೆ.11.30 ಕ್ಕೆ ನಡೆಯುವ ಕಾರ್ಯಕ್ರಮವನ್ನು ವಿಜ್ಞಾನಿ ಪ್ರೊ.ಎಂ.ಎಸ್.ಆರ್.ಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪದವಿಯಲ್ಲಿ ಬಿಎಸ್ಸಿ-581, ಬಿಸಿಎ – 54, ಬಿಬಿ ಎ -23 ಹಾಗೂ ಸ್ನಾತಕೋತ್ತರ ಪದವಿಯ ರಸಾಯನಶಾಸ್ತ್ರ 35, ಸಸ್ಯಶಾಸ್ತ್ರ 27, ಗಣಿತಶಾಸ್ತ್ರ 47, ಭೌತಶಾಸ್ತ್ರ 14, ಆಹಾರ ವಿಜ್ಞಾನ ಮತ್ತು ಪೌಷ್ಠಿಕತೆ 26, ಅಣುಜೀವಾಣು ಶಾಸ್ತ್ರ 22 ಮತ್ತು ಎಂಬಿಎ 33 ವಿದ್ಯಾರ್ಥಿಗಳು ಸೇರಿ ಒಟ್ಟು 862 ಮಂದಿ ಪದವಿ ಪಡೆಯಲಿದ್ದಾರೆ ಎಂದರು.
ಅಂದು ವಿದ್ಯಾರ್ಥಿಗಳು ಬೆ.9.30 ಕ್ಕೆ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು. ಬಿಳಿ ಉಡುಪು ಧರಿಸಿ ಬರಬೇಕು. ಹೆಚ್ಚಿನ ಮಾಹಿತಿಗೆ ಮೊ.08212419291 ಅನ್ನು ಸಂಪರ್ಕಿಸಬಹುದಾಗಿದೆ. ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಕೆ.ಅಜಯಕುಮಾರ್, ಪ್ರೊ.ಶ್ರೀನಿವಾಸ್, ಪ್ರೊ.ವೆಂಕಟೇಶ್, ಆಡಳಿತ ಅಧಿಕಾರಿ ಪ್ರೊ.ಮಹೇಶ್, ಪ್ರೊ.ಯಶೋಧ ನಂಜಪ್ಪ ಸುದ್ದಿಗೋಷ್ಠಿಯಲ್ಲಿದ್ದರು.