ಮೈಸೂರು:- ತಮಿಳುನಾಡಿಗೆ ಅಗತ್ಯಗಿಂತಲೂ ಹೆಚ್ಚು ನೀರು ಹೋಗಿದೆ. ತನಿಳುನಾಡು ಕರ್ನಾಟಕ ಇಬ್ಬರು ಸಂತೋಷವಾಗಿದ್ದಾರೆ ಎಂದು ಮೈಸೂರಿನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಲ್ಗುಣ ಸರಿ ಇಲ್ಲ ಅನ್ನುತ್ತಿದ್ದರು. ಅವರು ಬಂದರೇ ಮಳೆ ಬರಲ್ಲ ಎನ್ನುತ್ತಿದ್ದರು. ಈಗ ಏನಾಗಿದೆ ನೋಡಿ. ಎಲ್ಲಾ ಜಲಾಶಯಗಳು ಭರ್ತಿಯಾಗಿದೆ. ತಮಿಳುನಾಡಿಗೆ ಅಗತ್ಯಗಿಂತಲೂ ಹೆಚ್ಚು ನೀರು ಹೋಗಿದೆ. ತನಿಳುನಾಡು ಕರ್ನಾಟಕ ಇಬ್ಬರು ಸಂತೋಷವಾಗಿದ್ದಾರೆ. ಎರೆಡು ರಾಜ್ಯಗಳಲ್ಲಿ ಕೆರೆ ಕಟ್ಟೆ ತುಂಬಿವೆ. ಹೀಗಾಗಿ ಇಂದು ಭಾಗಿನ ಅರ್ಪಣೆ ಮಾಡುತ್ತಿದ್ದೇವೆ. ಶುಭಕಾರ್ಯದ ವೇಳೆ ರಾಜಕೀಯ ಮಾತನಾಡಲ್ಲ ಎಂದು ತಿಳಿಸಿದರು.