ಶ್ರೀರಂಗಪಟ್ಟಣ:ನಾಡಿನ ರೈತರಿಗೆ ನೀರು ಕೊಡದೆ ಕೆಆರ್ಎಸ್ ನಿಂದ ಕಾವೇರಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ ರೈತ ಸಂಘದ ಮುಖಂಡರು ಕಾವೇರಿ ನದಿಗಿಳಿದು ಪ್ರತಿಭಟನೆ ಮಾಡಿದರು.
ಪಟ್ಟಣದ ಉತ್ತರ ಕಾವೇರಿಯ ಸ್ನಾನಘಟ್ಟದ ಬಳಿ ತಾಲೂಕು ರೈತ ಸಂಘದ ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ ನೇತೃತ್ವದಲ್ಲಿ ಜಮಾಯಿಸಿದ ಮುಖಂಡರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡಲು ಪ್ರಾಧಿಕಾರ ಸೂಚನೆ
ಈ ಬಾರಿ ಹೆಚ್ಚಿನ ಮಳೆ ಬೀಳದೆ ಕೆಆರ್ಎಸ್ ಜಲಾಶಯ ತುಂಬದೆ ಇದ್ದು ಅಲ್ಪ ಸ್ವಲ್ಪ ಇರುವ ನೀರಿನ್ನು ಸಂಗ್ರಹಣೆ ಮಾಡಿಕೊಳ್ಳದೆ ಇರುವ ನೀರಾವರಿ ಅಧಿಕಾರಿಗಳು ನೀರು ಹರಿಸುತ್ತಿರುವುದು ರೈತರಿಗೆ ಬೆನ್ನು ಮೂಳೆ ಮುರಿದಂತಾಗಿದೆ. ಒಂದು ಬೆಳೆ ಬೆಳೆಯಲು ರೈತರು ನೀರು ಕೇಳಿದಾಗ ಕಟ್ಟು ನೀರು ಪದ್ದತಿ ಮಾಡಿರುವ ಸರ್ಕಾರ ಬೆಳೆದು ನಿಂತಿರುವ ಬೆಳೆಗಳು, ಮುಂಗಾರು ನಾಟಿ ಮಾಡಿರುವ ರೈತರಿಗೆ ನೀರು ಇನ್ನು ಕುಡಿಯುವ ನೀರಿಗೆ ಸಾಲದಿದ್ದ ವೇಳೆ ಇದೀಗ ಕೆಆರ್ಎಸ್ ಜಲಾಶಯದಿಂದ ೧೨ ಸಾವಿರ ಕ್ಯೂಸೆಕ್ ನೀರನ್ನು ಹರಿಸುತ್ತಿರುವುದು ರೈತರಿಗೆ ದ್ರೋಹ ಮಾಡಿದಂತಾಗಿದೆ.
ಇದನ್ನೂ ಓದಿ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನ: ಸ್ಥಳೀಯರ ಆಕ್ರೋಶ
ಜಲಾಶಯದಲ್ಲಿರುವ ೧೧೦ ಅಡಿ ನೀರು ಇದೀಗ ಪ್ರತಿ ದಿನ ಇಳಿಕೆ ಕಂಡು ಬರುತ್ತಿದ್ದು ರೈತರಿಗೆ ನೀರಿಲ್ಲದೆ ಬದುಕು ಸಾಗಿಸುವಂತಾಗುತ್ತದೆ. ಕೂಡಲೆ ನದಿ ಮೂಲಕ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸಬೇಕು ಇಲ್ಲದಿದ್ದರೆ ನಾಳೆಯಿಂದಲೇ ನದಿಯಲ್ಲೇ ಕುಳಿತು ಉಘ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಕೃಷ್ಣೇಗೌಡ ಎಚ್ಚರಿಸಿದರು.
ರೈತ ಮುಖಂಡರಾದ ಕಡತನಾಳು ಬಾಲಣ್ಣ,ದೊಡ್ಡಪಾಳ್ಯ ಜಯರಾಮು, ನಾಗರಾಜು, ಅಗ್ರಹಾರ, ಶಂಕರ್, ಡಿ.ಎಂ.ಕೃಷ್ಣೇಗೌಡ ಸೇರಿದಂತೆ ಇತರ ರೈತ ಮುಖಮಡರು ಪ್ರತಿಭಟನೆಯಲ್ಲಿದ್ದರು.