ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳುವ ಪಾದಚಾರಿ ಮಾರ್ಗದ ಬಳಿ ಭಕ್ತರೊಬ್ಬರು ಕರಡಿಯನ್ನು ಕಂಡಿದ್ದಾರೆ. ವಾರದ ಹಿಂದೆ ಮಧ್ಯರಾತ್ರಿ ತಿರುಮಲ ಪಾದಚಾರಿ ಮಾರ್ಗವನ್ನು ದಾಟಿದ ಕರಡಿ ಇದೇ ಎಂದು ಹೇಳಲಾಗುತ್ತಿದೆ. ಕಳೆದ ವಾರ ಆರು ವರ್ಷದ ಬಾಲಕಿಯನ್ನು ಕೊಂದಿದ್ದ ಅಲಿಪಿರಿ-ತಿರುಮಲ ನಡಿಗೆ ಮಾರ್ಗದಲ್ಲಿ ಇನ್ನೂ ಐದು ಚಿರತೆಗಳು ಓಡಾಡುತ್ತಿವೆ ಎಂದು ತಿರುಪತಿ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಈ ಚಿರತೆಗಳು ಅಲಿಪಿರಿಯ ಏಳನೇ ಮೈಲಿ, ನಾಮಲಗಾವಿ ಮತ್ತು ಲಕ್ಷಿ÷್ಮÃನರಸಿಂಹ ಸ್ವಾಮಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆ ಅಳವಡಿಸಿರುವ ಸಿಸಿಟಿವಿ ಟ್ರಾ÷್ಯಪ್ ಕ್ಯಾಮೆರಾಗಳಲ್ಲಿ ಚಿರತೆಗಳ ದೃಶ್ಯ ದಾಖಲಾಗಿದೆ.
ಈ ಹಿಂದೆ ಗೀತಾ ಶಿವರಾಜಕುಮಾರ್ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು! ತಿರುಮಲಕ್ಕೆ ಹೋಗುವ ಫುಟ್ಪಾತ್ ಮಾರ್ಗಗಳ ಬಳಿ ಕಾಡು ಪ್ರಾಣಿಗಳ ಓಡಾಟಕ್ಕೆ ಶಾಶ್ವತ ಪರಿಹಾರವನ್ನು ಹುಡುಕಬೇಕು ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಇಒ ಧರ್ಮಾ ರೆಡ್ಡಿ ಅರಣ್ಯ ಇಲಾಖೆಯನ್ನು ಒತ್ತಾಯಿಸಿದರು.
ಭಕ್ತರನ್ನು ರಕ್ಷಿಸಲು ಮತ್ತು ಪಾದಚಾರಿ ಮಾರ್ಗಗಳ ಬಳಿ ಕಾಡು ಪ್ರಾಣಿಗಳಿಂದ ರಕ್ಷಿಸಲು ಅರಣ್ಯ ಇಲಾಖೆ ಪ್ರಸ್ತಾವನೆಯೊಂದಿಗೆ ಬರಬೇಕು. ನಾವು ಮೂಲಸೌಕರ್ಯ ಮತ್ತು ಮಾನವ ಶಕ್ತಿಯನ್ನು ಒದಗಿಸುತ್ತೇವೆ. ಇದು ಮೀಸಲು ಅರಣ್ಯ. ಜವಾಬ್ದಾರಿಯನ್ನು ತೆಗೆದುಕೊಂಡು ಈ ಸಂಘರ್ಷವನ್ನು ಕಡಿಮೆ ಮಾಡುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸುತ್ತೇನೆ. ಭಕ್ತರು ಶಾಂತಿಯುತವಾಗಿ ಬಂದು ದರ್ಶನ ಮಾಡುವಂತಾಗಬೇಕು ಮತ್ತು ನಾನು ಅರಣ್ಯ ಇಲಾಖೆ ಮುಖ್ಯಸ್ಥರಿಗೆ ಅದನ್ನೇ ಹೇಳಿದ್ದೇನೆ ಎಂದು ಧರ್ಮಾರೆಡ್ಡಿ ಹೇಳಿದ್ದಾರೆ.