ತಿ.ನರಸೀಪುರ:- ತಾಲೂಕಿನ ನ್ಯಾಯಾಲಯ ,ಲಿಟಲ್ ಫ್ಲವರ್ ಕಾನ್ವೆಂಟ್ ಮತ್ತು ವಿದ್ಯೋದಯ ಕಾಲೇಜು ಸೇರಿದಂತೆ ವಿವಿಧ ಕಡೆಗಳಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಪಟ್ಟಣದ ನ್ಯಾಯಾಲಯದ ಮೇಲ್ಚಾವಣಿಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಸಿವಿಲ್ ಹಿರಿಯ ನ್ಯಾಯಾಧೀಶರಾದ ಜಿ.ಎಚ್.ಹನುಮಂತ್ ಉದ್ಘಾಟಿಸಿದರು.ಯೋಗ ಮತ್ತು ಧ್ಯಾನ ಮನುಷ್ಯನಿಗೆ ಅವಶ್ಯಕ.ಯೋಗ ಮನುಷ್ಯನ ಮಾನಸಿಕ ಮತ್ತು ದೈಹಿಕ ಬದ್ಧತೆ ಕಾಪಾಡಿಕೊಳ್ಳಲು ಸಹಕಾರಿ .ಹಾಗಾಗಿ ಮನುಷ್ಯ ದಿನನಿತ್ಯ ಯೋಗ ಮತ್ತು ಧ್ಯಾನವನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚೇತನ್ ಅನ್ನದಾನಿ ಮಂಜುನಾಥ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶ್ ಕೆ ಎನ್,ತಡಿಮಾಲಂಗಿ ವೈದ್ಯಾಧಿಕಾರಿಯಾದ
ಡಾ. ಮಧುಸೂದನ್, ವಕೀಲರ ಸಂಘದ ಅಧ್ಯಕ್ಷ ಫಾಲಾಕ್ಷ ಮೂರ್ತಿ, ಖಜಾಂಚಿ ಕಿರಣ್ ಕುಮಾರ್, ಹಿರಿಯ ವಕೀಲರಾದ ಮಾದಪ್ಪ, ನಂಜುಂಡೇಗೌಡ, ಬಿ ಎಂ ಶಿವಣ್ಣ, ನಾಗರಾಜ ಸ್ವಾಮಿ ಮತ್ತು ನ್ಯಾಯಾಲಯದ ಸಿಬ್ಬಂದಿ ವರ್ಗ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗ ಹಾಜರಿದ್ದರು.