ಒಂದು ಕಪ್ ಕಾಫಿ ನಿಮಗೆ ಫ್ರೆಶ್ ನೆಸ್ ನೀಡುತ್ತದೆ. ಅದರಲ್ಲಿರುವ ಕೆಫೀನ್ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅನೇಕ ಜನರು ತಮ್ಮ ದೈನಂದಿನ ಜೀವನದಲ್ಲಿ ಒಂದು ಕಪ್ ಕಾಫಿ ಇಲ್ಲದೆ ಬೆಳಿಗ್ಗೆ ಏಳಲಾರರು. ಈ ಉತ್ತೇಜಕ ಪಾನೀಯದ ಪ್ರಯೋಜನಗಳನ್ನು ಕೆಲವರು ಚರ್ಚಿಸುತ್ತಾರಾದರೂ, ಕಾಫಿಯು ಉತ್ತಮ ಅಂಶಗಳನ್ನು ಹೊಂದಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಇದು ವಿಟಮಿನ್ ಬಿ, ಪೊಟ್ಯಾಸಿಯಮ್, ಮ್ಯಾಂಗನೀಸ್, ಫೋಲೇಟ್ ಮತ್ತು ಮೆಗ್ನೀಸಿಯಮ್ನ ಸಮೃದ್ಧ ಮೂಲವಾಗಿದೆ. ಇದೀಗ ಈ ಕಾಫಿ ವೇಗವಾಗಿ ತೂಕವನ್ನು ಕಡಿಮೆ ಮಾಡಲು ಸಹ ನಿಮಗೆ ಸಹಾಯ ಮಾಡುತ್ತದೆ ಎಂದು ತಜ್ಞರು ಕಂಡುಕೊAಡಿದ್ದಾರೆ. ವ್ಯಾಯಾಮ ಮಾಡುವ ಮೊದಲು ಕೇವಲ ಒಂದು ಕಪ್ ಸ್ಟಾçಂಗ್ ಕಾಫಿ ನಿಮ್ಮ ತೂಕ ನಷ್ಟಕ್ಕೆ ಸಹಾಯ ಮಾಡಬಹುದು. ಆದರೆ ಕೊಬ್ಬು ನಾಶವಾಗಲು ಈ ಪಾನೀಯವನ್ನು ಕುಡಿಯುವ ನೀವು ಸರಿಯಾದ ಸಮಯವನ್ನು ತಿಳಿದುಕೊಳ್ಳಬೇಕು. ಅದನ್ನು ಈ ಲೇಖನದಲ್ಲಿ ನೀಡಲಾಗಿದೆ.
ಕಾಫಿಯಲ್ಲಿರುವ ಕೆಫೀನ್ ಆಕ್ಸಿಡೀಕರಣ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ:
ಗ್ರಾನಡಾ ವಿಶ್ವವಿದ್ಯಾಲಯದ (ಯುಜಿಆರ್) ಶರೀರವಿಜ್ಞಾನ ವಿಭಾಗದ ಸಂಶೋಧಕರ ಪ್ರಕಾರ, ಏರೋಬಿಕ್ ವ್ಯಾಯಾಮದ ಅರ್ಧ ಘಂಟೆಯ ಮೊದಲು ತೆಗೆದುಕೊಳ್ಳುವ ಸ್ಟಾçಂಗ್ ಕಾಫಿಗೆ ಸಮಾನವಾದ ಅಂದ್ರೆ ಸುಮಾರು 3 ಮಿಗ್ರಾಂ / ಕೆಜಿ ಕೆಫೀನ್, ಕೊಬ್ಬನ್ನು ಸುಡುತ್ತದೆ ಎಂದು ಹೇಳಿದೆ. ವ್ಯಾಯಾಮವನ್ನು ಮಧ್ಯಾಹ್ನ ನಡೆಸಿದರೆ, ಕೆಫೀನ್ನ ಪರಿಣಾಮವು ಬೆಳಿಗ್ಗೆಗಿಂತ ಹೆಚ್ಚಾಗಿ ಗುರುತಿಸಲ್ಪಡುತ್ತದೆ ಎಂದು ಅವರು ಕಂಡುಕೊAಡರು. ಪ್ರಪಂಚದಾದ್ಯAತದ ಕ್ರೀಡಾಪಟುಗಳು ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಹೆಚ್ಚಾಗಿ ಕೆಫೀನ್ ಪೂರಕಗಳನ್ನು ಬಳಸುತ್ತಾರೆ. ವ್ಯಾಯಾಮದ ಸಮಯದಲ್ಲಿ ಕೆಫೀನ್ ಆಕ್ಸಿಡೀಕರಣ ಅಥವಾ ಕೊಬ್ಬನ್ನು “ಸುಡುವುದನ್ನು” ಹೆಚ್ಚಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ ಅತಿಯಾಗಿ ಪ್ರಯೋಜನಗಳು ಸಿಗುತ್ತದೆ ಎಂದು ಅನೇಕ ಫಿಟ್ನೆಸ್ ಉತ್ಸಾಹಿಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುತ್ತಾರೆ. ಇದು ಕೊಬ್ಬಿನ ಉತ್ಕರ್ಷಣ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಆದರೆ ವೈಜ್ಞಾನಿಕ ಸಂಶೋಧನೆಯಿAದ ಇದನ್ನು ಮೌಲ್ಯೀಕರಿಸಲಾಗುವುದಿಲ್ಲ ಎಂದು ಸಂಶೋಧಕರು ಹೇಳುತ್ತಾರೆ. ಈ ಆಕ್ಸಿಡೀಕರಣವು ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ಅಥವಾ ದೀರ್ಘಕಾಲದವರೆಗೆ ಆಹಾರವಿಲ್ಲದೇ ಇರುವುದರಿಂದ ಉಂಟಾಗಿದೆಯೆ ಎಂದು ತಿಳಿದಿಲ್ಲ.
ವ್ಯಾಯಾಮದ ಸಮಯದಲ್ಲಿ ಕೊಬ್ಬಿನ ಆಕ್ಸಿಡೀಕರಣವನ್ನುಹೇಗೆ ಲೆಕ್ಕಹಾಕಲಾಯಿತು?:
ಈ ಅಧ್ಯಯನದ ಉದ್ದೇಶಕ್ಕಾಗಿ, ಸಂಶೋಧಕರು 32 ವರ್ಷ ವಯಸ್ಸಿನ ಒಟ್ಟು 15 ಪುರುಷರನ್ನು ಬಳಸಿಕೊಂಡಿದ್ದಾರೆ. ಇವರು ಏಳು ದಿನಗಳಲ್ಲಿ ನಾಲ್ಕು ಬಾರಿ ವ್ಯಾಯಾಮ ಪರೀಕ್ಷೆಯನ್ನು ಮಾಡಬೇಕಾಗಿತ್ತು. ಅವರು ಬೆಳಿಗ್ಗೆ 8 ಮತ್ತು ಸಂಜೆ 5 ಗಂಟೆಗೆ 3 ಮಿಗ್ರಾಂ / ಕೆಜಿ ಕೆಫೀನ್ ಅಥವಾ ಪ್ಲಸೀಬೊವನ್ನು ತೆಗೆದುಕೊಂಡರು. ಮತ್ತು ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಿದರು. ವ್ಯಾಯಾಮದ ಸಮಯದಲ್ಲಿ ಕೊಬ್ಬಿನ ಉತ್ಕರ್ಷಣ ಪ್ರಕ್ರಿಯೆಯನ್ನು ನಂತರ ಲೆಕ್ಕಹಾಕಲಾಯಿತು.
ಉತ್ತಮ ಫಲಿತಾಂಶಕ್ಕಾಗಿ ಒಂದು ಕಪ್ ಕಾಫಿ ನಂತರ ಮಧ್ಯಾಹ್ನ ವ್ಯಾಯಾಮ ಮಾಡಿ:
ಏರೋಬಿಕ್ ವ್ಯಾಯಾಮ ಮಾಡುವ 30 ನಿಮಿಷಗಳ ಮೊದಲು ನೀವು ಕಾಫಿ ಕುಡಿದರೆ, ನೀವು ಗರಿಷ್ಠ ಕೊಬ್ಬನ್ನು ಸುಡುತ್ತೀರಿ ಎಂದು ಈ ಅಧ್ಯಯನದ ಫಲಿತಾಂಶಗಳು ತೋರಿಸಿಕೊಟ್ಟವು. ಇದರ ಜ್ತೆಗೆ ಉತ್ತಮವಾಗಿ ಕೊಬ್ಬು ಸುಡಲು ಮಧ್ಯಾಹ್ನ ಕಾಫಿ ಕುಡಿದು ವ್ಯಾಯಾಮ ಮಾಡುವುದು ಉತ್ತಮ ಎಂದು ಸಹ ಈ ಅಧ್ಯಯನ ತೋರಿಸಿಕೊಟ್ಟಿತು. ಕಾಫಿ ಸೇವಿಸಿದ ನಂತರ ಬೆಳಿಗ್ಗೆ ವ್ಯಾಯಾಮದ ಸಮಯದ ಕೊಬ್ಬಿನ ಆಕ್ಸಿಡೀಕರಣವು ಮಧ್ಯಾಹ್ನ ಕೆಫೀನ್ ಸೇವನೆಯಿಲ್ಲದೆ ಆಕ್ಸೀಡೀಕರರಣವನ್ನು ಹೋಲುತ್ತದೆ ಎಂದು ಅವರು ಕಂಡುಕೊAಡರು.
ಯಾರು ಕಾಫಿ ಕುಡಿಯಬಾರದು?:
ನಾವೆಲ್ಲರೂ ವೇಗವಾಗಿ ತೂಕ ಇಳಿಸಿಕೊಳ್ಳಲು ಮತ್ತು ಆರೋಗ್ಯವಾಗಿರಲು ಬಯಸುತ್ತೇವೆ. ಆದರೆ ಒಂದು ಕಪ್ ಕಾಫಿ ತೂಕ ಇಳಿಸಿಕೊಳ್ಳಲು ಸುಲಭವಾದ ಮಾರ್ಗವಾಗಿದ್ದರೂ , ಕೆಲವರು ಇದನ್ನು ತಪ್ಪಿಸಬೇಕಾಗುತ್ತದೆ. ಗರ್ಭಿಣಿಯರು ಮತ್ತು ಆತಂಕದ ಸಮಸ್ಯೆಗಳಿರುವವರು ಈ ಪಾನೀಯವನ್ನು ತಪ್ಪಿಸಬೇಕು. ನೀವು ಅಧಿಕ ರಕ್ತದೊತ್ತಡ ಅಥವಾ ಯಾವುದೇ ನಿದ್ರೆಯ ಅಸ್ವಸ್ಥತೆಯ ರೋಗಿಯಾಗಿದ್ದರೆ, ಈ ಪಾನೀಯವು ನಿಮಗಾಗಿ ಅಲ್ಲ.