ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ4 ಆರೋಪಿಯಾಗಿರುವ ರಘು ಅವರ ತಾಯಿ ನಿಧನರಾಗಿದ್ದಾರೆ. 65 ವರ್ಷ ವಯಸ್ಸಿನ ತಾಯಿ ಮಂಜುಳಮ್ಮ ಚಿತ್ರದುರ್ಗದ ಕೋಳಿ ಬುರುಜನಹಟ್ಟಿ ನಿವಾಸದಲ್ಲಿ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.ತಾಯಿ ನಿಧನದ ಬಗ್ಗೆ ಪ್ರತಿಕ್ರಿಯಿಸಿರುವ ಆರೋಪಿ ರಘು ಸಹೋದರ ಸತೀಶ್ ಬಸರೀಕಟ್ಟೆ.. ಅಮ್ಮ ಬೆಳಗ್ಗೆ 4.30ಕ್ಕೆ ತೀರಿಕೊಂಡಿದ್ದಾರೆ. ಜೈಲಿನಲ್ಲಿರುವ ತಮ್ಮನನ್ನು ಕಳುಹಿಸಿದರೆ ಚೆನ್ನಾಗಿರುತ್ತದೆ. ದರ್ಶನ್ ಪ್ರಕರಣ ಆದ ಮೇಲೆ ಅಮ್ಮ ಆತನ ಚಿಂತೆಯಲ್ಲಿ ಹಾಸಿಗೆ ಹಿಡಿದ್ದರು. ತಮ್ಮನಿಗೆ ಅಮ್ಮ ಅಂದರೆ ಆಸೆ, ಆತನಿಗೂ ಅಷ್ಟೇ. ಆತ 15 ದಿನಕ್ಕೊಮ್ಮೆ ನನ್ನ ಮನೆಗೆ ಬಂದು ಅಮ್ಮನನ್ನು ನೋಡಿಕೊಂಡು ಹೋಗುತ್ತಿದ್ದ. ಇಂದು ಆತ ಅಂತ್ಯಕ್ರಿಯೆಗೆ ಬಂದರೆ ಚೆನ್ನಾಗಿರುತ್ತದೆ ಎಂದು ಭಾವುಕರಾಗಿದ್ದಾರೆ.