ಬೆಂಗಳೂರು:- ಇನ್ನೆರಡು ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತೆ ಎಂದು ನಗರ ಪೆÇಲೀಸ್ ಆಯುಕ್ತ ಬಿ.ದಯಾನಂದ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು ದರ್ಶನ್ ಆಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಪ್ರಕರಣದ ಬಹುತೇಕ ತನಿಖೆ ಮುಕ್ತಾಯ ಆಗಿದೆ. ಕೊನೆ ಹಂತದ ಚಾರ್ಜ್ ಶೀಟ್ ಸಲ್ಲಿಕೆ ಮಾಡುವವರೆಗೆ ತನಿಖೆ ಮಾಡಲಾಗಿದೆ. ಬಳಿಕ ಮಾತು ಮುಂದುವರೆಸಿದ ಅವರು, ತನಿಖೆ ವೇಳೆ ಯಾವ ಯಾವ ಆರೋಪಿ ವಿರುದ್ಧ ಏನು ಆರೋಪ ಇದೆ ಅದರ ಮೇಲೆ ಸೆಕ್ಷನ್ ಗಳನ್ನ ಆಡ್ ಮಾಡಲಾಗಿದೆ. ಬೆಂಗಳೂರು FSLನಿಂದ ರಿಪೆÇೀರ್ಟ್ ಬಂದಿದೆ. ಹೈದ್ರಾಬಾದ್ ನಿಂದ ಒಂದಷ್ಟು ರಿಪೆÇೀರ್ಟ್ ಬಂದಿದೆ. ಮತ್ತಷ್ಟು ರಿಪೆÇೀರ್ಟ್ಗಳು ಬರಬೇಕಿದೆ ಎಂದು ಹೇಳಿದ್ದಾರೆ.ಬಹುತೇಕ ತನಿಖೆಯ ಅಂಶಗಳನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ. ತನಿಖಾ ತಂಡ ತನಿಖೆ ಪೂರ್ಣವಾಗಿ ಮುಗಿಸಿದ್ದು, ಎಸ್ ಪಿಪಿಗೆ ಸ್ಕ್ರೂಟನಿಗೆ ನೀಡಲಾಗಿತ್ತು. ಅವರು ಕೆಲವು ವಿಚಾರಗಳ ಬಗ್ಗೆ ಗುರುತು ಮಾಡಿದ್ದಾರೆ. ಕೆಲವು ಕರೆಕ್ಷನ್ ಗಳು ಇವೆ. ಅದನ್ನು ಮಾಡಲಾಗುತ್ತಿದೆ. ಇನ್ನೆರಡು ದಿನದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತದೆ. ಈಗ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತದೆ ಎಂದು ಬಿ ದಯಾನಂದ ಹೇಳಿದ್ದಾರೆ.