ಬೆಂಗಳೂರು: ವಾಲ್ಮೀಕಿ ಹಗರಣ ವಿಚಾರ ಸದನದಲ್ಲಿ ಗದ್ದಲ ಕೋಲಾಹಲಕ್ಕೆ ಕಾರಣವಾಯ್ತು. ಬಿಜೆಪಿ ಸದಸ್ಯ ಅಶ್ವತ್ಥ ನಾರಾಯಣ ಮಾತಿಗೆ ಕೆಂಡಾಮAಡಲರಾದ ಸಿಎಂ ಸಿದ್ದರಾಮಯ್ಯ ಏರು ಧ್ವನಿಯಲ್ಲೇ ಚಾಟಿ ಬೀಸಿದರು. ಅವರಿಂದ ಬೆಲ್ಲದ ಮಾತನಾಡುವ ಸಂದರ್ಭದಲ್ಲಿ ದಲಿತರ ಹಣವನ್ನು ಲೂಟಿ ಮಾಡಲಾಗಿದೆ ಎಂದು ಪದೇ ಪದೇ ಉಲ್ಲೇಖ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಎದ್ದು ನಿಂತು ಸಂವಿಧಾನದಲ್ಲಿ ಎಸ್ ಸಿಎಸ್ ಟಿ ಎಂದು ಇರುವುದು. ನೀವು ಪದೇ ಪದೇ ದಲಿತ ದಲಿತ ಎಂದು ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈ ವೇಳೆ ಅಶ್ವತ್ಥ ನಾರಾಯಣ ಎದ್ದು ನಿಂತು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ದಲಿತ ಎಂಬ ಪದವನ್ನು ನೀವೇ ಪದೇ ಪದೇ ಬಳಕೆ ಮಾಡುತ್ತಿದ್ದೀರಿ. ಅಹಿಂದ ಎಂದು ಆರಂಭಿಸಿದವರು ನೀವೇ, ಇವಾಗ ಯಾರಿಗೆ ಪಾಠ ಹೇಳುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ: ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ನಿಮ್ಮ ಹಗರಣಗಳ ಬಗ್ಗೆ ಎಲ್ಲವನ್ನೂ ಹೊರ ತೆಗೆಯುತ್ತೇನೆ. ಯಾರ್ಯಾರ ಕಾಲದಲ್ಲಿ ಏನೇನು ನಡೆದಿದೆ ಎಂದು ತೆಗೆಯುತ್ತೇವೆ. ಅಶ್ವತ್ಥ ನಾರಾಯಣ ಗೌಡ, ನಿನಗಿಂತ ಜಾಸ್ತಿ ಕೂಗಾಡಲು ಬರುತ್ತದೆ ನನಗೆ.
ಅಶ್ವತ್ಥ ನಾರಾಯಣ: ತೆಗೆಸಿ ಯಾರು ಬೇಡ ಅಂದು ಎನ್ನುತ್ತಾ. ಪೇ ಸಿಎಂ ಎಂದು ಏರು ಧ್ವನಿಯಲ್ಲಿ ಘೋಷಣೆ ಕೂಗಿದರು.
ಸಿದ್ದರಾಮಯ್ಯ: ನೀವು, ನೀನು ಭ್ರಷ್ಟಾಚಾರದ ಪಿತಾಮಹ. ನಿಮ್ಮ ಸರ್ಕಾರ ಭ್ರಷ್ಟಾಚಾರದ ಪಿತಾಮಹ. ಭ್ರಷ್ಟಾಚಾರದ ಬಗ್ಗೆ ನನಗೆ ಹೇಳಿಕೊಡುತ್ತೀರಾ? ಮಂತ್ರಿಯಾಗಿ 40 ವರ್ಷ ಆಯ್ತು. 40 ವರ್ಷದಿಂದ ಒಂದು ಕಪುö್ಪ ಚುಕ್ಕೆ ಇಲ್ಲ. ನೀವು ಎಷ್ಟೇ ಸುಳ್ಳು ಹೇಳಿದರು ಜನ ನಂಬಲ್ಲ.
ಸಿದ್ದರಾಮಯ್ಯ : ಎಲ್ಲರೂ ಎದ್ದು ನಿಂತರೂ ಹೆದರಲ್ಲ. ಭ್ರಷ್ಟಾಚಾರ, ಅನಾಚಾರ ಮಾಡಿ ನಮಗೆ ಹೇಳಿ ಕೊಡ್ತೀರಾ ಎಂದು ಏರು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು. ಇವರ ಭ್ರಷ್ಟಾಚಾರ ಬಯಲಾಗಿದೆ. 40% ಕಮಿಷನ್ ಹೊಡೆದಿದ್ದಾರೆ ಎಂದು ಗುತ್ತೆಗೆ ದಾರರ ಸಂಘದ ಅಧ್ಯಕ್ಷರು ಆರೋಪ ಮಾಡಿದ್ದಾರೆ. ಭ್ರಷ್ಟರು, ಬಂಡರು ನೀವು. ಭ್ರಷ್ಟಾಚಾರ ತಡೆದಿದ್ದರಿಂದ ನೀವು ಜೈಲಿಗೆ ಹೋಗಿದ್ದೀರಾ? ಮಾನ ಮರ್ಯಾದೆ ಇದ್ಯಾ? ಎಂದು ವಾಗ್ದಾಳಿ.
ಅಶ್ವತ್ಥ ನಾರಾಯಣ: ಕಾಂಗ್ರೆಸ್ ನಲ್ಲಿ ಸಿಎಂ ಆಗಲು ಅರ್ಹ ವ್ಯಕ್ತಿ ನೀವಲ್ಲ. ಪರ್ಯಾಯ ನಾಯಕ ಇಲ್ಲ. 100% ಕಮಿಷನ್ ಸರ್ಕಾರ ಇದು. ಭ್ರಷ್ಟಾಚಾರ ತಡೆಯುತ್ತೀವಿ ಎಂದಾಗ ಇವಾಗ ಏನು ಮಾಡ್ತಿದ್ದಾರೆ. ಬಾಯಿ ಬಂದ ಹಾಗೆ ಮಾತನಾಡುವವರು ಕಾಂಗ್ರೆಸ್ ನವರು. ನಿಮಗೆ ನಾಚಿಕೆ ಆಗಬೇಕು. ನಿಮಗೆ ನೈತಿಕತೆ ಇಲ್ಲ.
ಅಶ್ವತ್ಥ ನಾರಾಯಣ: ಸರ್ಕಾರ ಎಂದರೆ ಲೂಟಿ ಹೊಡೆಯುವ ಸರ್ಕಾರ ಅಲ್ಲ. ಬಡವರ ಹಾಗೂ ಪರಿಶಿಷ್ಟ ಜಾತಿಯವರ ದುಡ್ಡು. ಭ್ರಷ್ಟಾಚಾರ ನಡೆದಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ.