ಮೈಸೂರು: ಪ್ರತಿ ಬಾರಿ ಎಂಪಿ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಬೀಗರನ್ನು ಬಿಜೆಪಿಯಿಂದ ಗೆಲ್ಲಿಸಿಕೊಳ್ಳುತ್ತಿರುವ ಶ್ಯಾಮನೂರು ಅವರು ಕಾಂಗ್ರೆಸ್ ಯಾಕೆ ಗೆಲ್ಲಿಸಿಕೊಳ್ಳುತ್ತಿಲ್ಲ ಎಂಬುದನ್ನು ಹೇಳಲಿ ಕಾಂಗ್ರೆಸ್ ವಿಶ್ವನಾ್ ಕಿಡಿಕಾರಿದರು.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶ್ಯಾಮನೂರು ಅವರು ಏಳು ಬಾರಿ ಗೆದ್ದಿರುವುದು ಸ್ವಂತ ವರ್ಚಸ್ಸಿನಿಂದ ಅಲ್ಲ. ದಲಿತರು ಹಾಗೂ ಹಿಂದುಳಿದ ವರ್ಗದವರಿಂದ ಗೆದ್ದಿದ್ದಾರೆ. ದಾವಣಗೆರೆಯನ್ನು ಅಪ್ಪ- ಮಕ್ಕಳೇ ವಹಿಸಿಂಡಿದ್ದಾರೆ. ಹೀಗಾಗಿ ಅವರು ಯಾರಿಂದ ಗೆದ್ದಿದ್ದಾರೆ. ಯಾಕೆ ಎಂಪಿ ಚುನಾವಣೆ ಗೆಲ್ಲಲ್ಲು ಆಗುತ್ತಿಲ್ಲ ಎಂಬುದನ್ನು ಮೊದಲು ತಿಳಿಸಲಿ ಎಂದರು.
ಇನ್ನೂ ಮಹಿಷಾ ದಸರಾವನ್ನು ಒಂದು ಗುಂಪು ಮಾಡುತ್ತಿದ್ದು, ಅದನ್ನು ಯಾಕೆ ತಡೆಯಬೇಕು. ಸಂಸದ ಪ್ರತಾಪಸಿಂಹ ಹಾಗೂ ಬಿಜೆಪಿ ಮಾಡುವುದೇ ಇಂತಹ ಕೆಲಸ ಆಗಿದೆ. ಅದರಲ್ಲೂ ಚಾಮುಂಡಿ ಚಲೋ ಹೆಸರಿನಲ್ಲಿ ಮಾಡುವುದು ಸರಿಯಲ್ಲ. ಈ ಬಗ್ಗೆ ನ್ಯಾಯಾಲಯ ಎನೂ ಹೇಳಲಿದೆ ಎಂಬುದನ್ನು ಕಾದುನೋಡೋಣವೆಂದರು.
ಶಫರ್ಡ್ ಇಂಡಿಯಾ ಫೆಡರೇಶನ್ ಸಮಾವೇಶದ ಮೂಲಕ ಕುರಿಕಾರರನ್ನು ಬೆಳವಣಿಗೆ ಬಗ್ಗೆ ಚರ್ಚಿಸಲಾಗಿದೆ. ಕುರಿ ಗಾಹಿ ಕೇವಲ ಕುರುಬರಿಗೆ ಸೀಮಿತವಾಗಿಲ್ಲ. ಎಲ್ಲಾ ಸಮುದಾಯದಲ್ಲೂ ಕುರಿ ಸಾಕುವವರಿದ್ದಾರೆ. ಮಾತ್ರವಲ್ಲದೆ ಸಂಸತ್ ಸ್ಪೀಕರ್ ಕೂರುವ ಕುರ್ಚಿಯಲ್ಲೂ ಉಣ್ಣೆ ಬಳಸುತ್ತಾರೆ. ಅವರ ತಲೆ ಮೇಲೂ ಕುರಿಯ ಚಿತ್ರವಿದೆ. ಹೀಗಾಗಿ ಕುರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಲು ಈ ಸಮ್ಮೇಳನ ಪ್ರಯೋಜನಕಾರಿಯಾಗಲಿದೆ ಎಂದರು.