ಮೇಷ ರಾಶಿ: ಎಷ್ಟೇ ಹೇಳಿದರೂ ನೀವು ನಿಮ್ಮ ತನವನ್ನು ಬಿಟ್ಟು ಹೋಗಲಾರಿರಿ. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗಬಹುದು. ಏನನ್ನೋ ಯೋಚಿಸುತ್ತಲೇ ಇರುವಿರಿ. ನಿಮ್ಮದಾದ ವಸ್ತುಗಳನ್ನು ಇಟ್ಟುಕೊಳ್ಳಲು ಪ್ರಯತ್ನಿಸುವಿರಿ. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವು ಇರಲಿದೆ. ಇನ್ನೊಬ್ಬರನ್ನು ಹಾಸ್ಯವಸ್ತುವನ್ನಾಗಿ ಮಾಡಿಕೊಳ್ಳುವಿರಿ. ಸಂಗಾತಿಯಿAದ ಬಂದ ಕೆಲವು ಮಾತುಗಳು ನಿಮಗೆ ಬೇಸರವನ್ನು ತರಿಸಬಹುದು. ಶುಭ ಕಾಲದ ನಿರೀಕ್ಷೆಯನ್ನು ನೀವು ಇರುವಿರಿ. ಯಾರ ಮಾತನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ. ವ್ಯಾಮೋಹವನ್ನು ಕಡಿಮೆ ಮಾಡಿಕೊಳ್ಳುವುದು ಕಷ್ಡವೆನಿಸುವುದು.
ವೃಷಭ ರಾಶಿ: ಕಾರ್ಯದಲ್ಲಿ ಒತ್ತಡವು ಅಧಿಕವಾಗಿ ಇರುವುದು. ಖರ್ಚಿಗೆ ಕಡಿವಾಣ ಹಾಕುವುದು ಕಷ್ಟವಾದೀತು. ಅಬಲರ ಮೇಲೆ ನಿಮ್ಮ ಸಿಟ್ಟನ್ನು ತೋರಿಸುವಿರಿ. ನಿರುದ್ಯೋಗವು ನಿಮಗೆ ಸಮಸ್ಯೆಯನ್ನು ಉಂಟುಮಾಡಬಹುದು. ಯಾವುದೇ ಕೆಲಸಕ್ಕೂ ಮುನ್ನುಗ್ಗುವುದು ನಿಮಗೆ ಕಷ್ಟವಾದೀತು. ವ್ಯಾಪಾರದಲ್ಲಿ ನಮಗೆ ಮೋಸವಾಗುವ ಸಾಧ್ಯತೆ ಇದೆ. ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡುವುದು ನಿಮಗೆ ಕೀರ್ತಿಯನ್ನು ತಂದುಕೊಡುವುದು. ಯಾರನ್ನೂ ನಂಬವುದು ನಿಮಗೆ ತೊಂದರೆಯಾಗಬಹುದು. ಇಂದಿನ ಕೆಲವು ಸಮಯವು ನಿಮಗೆ ನೆಮ್ಮದಿಯನ್ನು ಕೊಡುವುದು.
ಮಿಥುನ ರಾಶಿ: ಪ್ರಯಾಣದ ಆಯಾಸದಿಂದ ವಿಶ್ರಾಂತಿಯನ್ನು ಪಡೆಯುವಿರಿ. ನಿಮ್ಮದೊಂದೇ ಸಮಸ್ಯೆ ಎನ್ನುವಂತೆ ಎಲ್ಲವನ್ನೂ ನೀವು ಚಿಂತೆಯಿAದ ಇರುವಿರಿ. ಕುಟುಂಬದ ಜೊತೆ ಇರುವುದು ನಿಮ್ಮ ಬಹಳ ಖುಷಿಯನ್ನು ಕೊಡುವುದು. ಹಣಾಕಾಸಿಗೆ ಸಂಬAಧಿಸಿದAತೆ ನೀವು ಕಠೋರ ನಿಲುವನ್ನು ತೆಗೆದುಕೊಳ್ಳುವಿರಿ. ಸಂಗಾತಿಯ ದುಃಖದಲ್ಲಿ ಭಾಗಿಯಾಗಿ ಸಾಂತ್ವನವನ್ನು ಹೇಳುವಿರಿ. ಆಕಸ್ಮಿಕವಾಗಿ ಧನಲಾಭವೂ ಆಗಬಹುದು. ನಿಮ್ಮ ನಿರಂತರ ಪರಿಶ್ರಮದಿಂದ ನಿಮಗೆ ಕಾರ್ಯವು ಸಫಲವಾಗುವುದು. ಕೆಲಸದ ಹಿಂದೆ ಬಿದ್ದು ಆಗಬೇಕಾದುದನ್ನು ಮಾಡಿಕೊಳ್ಳುವಿರಿ.
ಕರ್ಕ ರಾಶಿ: ಅತಿಯಾದ ಆತ್ಮವಿಶ್ವಾಸವೇ ಎಲ್ಲ ಕೆಲಸಗಳನ್ನೂ ಅರ್ಧಕ್ಕೆ ನಿಲ್ಲುವಂತೆ ಮಾಡುವುದು. ವ್ಯಾಪಾರದಲ್ಲಿ ಚುರುಕುತನದ ಅವಶ್ಯಕತೆ ಹೆಚ್ಚು ಇರಬೇಕಾಗುವುದು. ಮಾತು ಸರಳವೂ ನೇರವೂ ಆಗಿರಲಿ. ಹೊಸ ಮನೆಗೆ ಹೋಗುವ ಯೋಚನೆ ಇರಲಿದೆ. ನಿಮ್ಮನ್ನೇ ನೀವು ಪ್ರಶಂಸಿಸಿಕೊಳ್ಳುವುದು ಬೇಡ. ಮಕ್ಕಳ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರವು ಸರಿಯಾಗಿರದೇ ಹೋಗಬಹುದು. ನಿಮ್ಮ ರಹಸ್ಯವಾದ ಸಂಗತಿಯನ್ನು ನೀವು ಇನ್ನೊಬ್ಬರಿಗೆ ಗೊತ್ತಾಗದೇ ಹೇಳುವಿರಿ. ಸಂಬAಧಗಳಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ. ಮಾತು ಹಿತವಾಗಿ ಇರಲಿ.
ಸಿಂಹ ರಾಶಿ: ಎಷ್ಟೋ ವರ್ಷಗಳ ಅನಂತರದ ಸ್ನೇಹಮಿಲನ ನಿಮಗೆ ಆಹ್ಲಾದವನ್ನು ತರುವುದು. ಆಯಾಸಕರವಾದ ಕಛೇರಿಯ ಕೆಲಸವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿ ಇರುವುದು. ಒಂದೇ ರೀತಿಯ ದಿನಚರಿಯನ್ನು ಕಂಡು ಸ್ತಿçÃಯರು ಹೊಸ ಪಾಕದತ್ತ ಹೆಚ್ಚಿನ ಒಲವು ತೋರಿಸುವರು. ದಾಂಪತ್ಯದಲ್ಲಿ ಹೊಂದಾಣಿಕೆಯೇ ಹೆಚ್ಚಾಗಿ ಇರುವುದು. ಯಾರನ್ನೂ ಯಾರೂ ಬಿಟ್ಟುಕೊಡದ ಸ್ಥಿತಿಯು ಬರಬಹುದು. ಆರೋಗ್ಯಕ್ಕೆ ಸಂಬAಧಿಸಿದAತೆ ವೈದ್ಯರ ಸಲಹೆಯನ್ನು ಮುಂದುವರಿಸಿ. ನಿಮ್ಮ ಕಾರ್ಯಗಳು ಎಂದಿಗಿAತ ಶಿಸ್ತಿನಿಂದ ಇರುವುದು ನಿಮಗೆ ಅಚ್ಚರಿಯನ್ನು ತರಬಹುದು. ನಿಮ್ಮ ಕೋಪವು ತಾತ್ಕಾಲಿಕವಾಗಿ ಇರುವುದು.
ಕನ್ಯಾ ರಾಶಿ: ನಿಮಗೆ ಮೊದಲೇ ಸರಿ ಎನಿಸಿದ್ದು ಈಗ ತಪುö್ಪ ಎಂದು ಅರಿವಿಗೆ ಬರುವುದು. ನೀವು ಸರಿಯಾದ ಮಾರ್ಗದರ್ಶನವನ್ನು ಪಡೆಯುವುದು ಮುಖ್ಯ. ಯಾರು ಏನಂದುಕೊಳ್ಳುತ್ತಾರೇನೋ ಎಂಬ ಹಿಂಜರಿಕೆ ಬೇಡ. ಭೋಗ ವಸ್ತುಗಳಗೆ ಹೆಚ್ಚು ಹಣವನ್ನು ಖರ್ಚು ಮಾಡುವಿರಿ. ನಿಮ್ಮ ಸಂತೋಷವನ್ನೇ ಮುಖ್ಯವಾಗಿ ಇಟ್ಟುಕೊಂಡು ಕೆಲಸಮಾಡುವಿರಿ. ನಿಮ್ಮ ಅಕ್ಕಪಕ್ಕದವರನ್ನು ನಿರ್ಲಕ್ಷ÷್ಯ ಮಾಡುವಿರಿ. ನಿಮ್ಮ ವಿದ್ಯೆಯ ಬಗ್ಗೆ ಅಹಂಕಾರ ಬರಬಹುದು. ಆದಷ್ಟು ಸಾಮಾಜಿಕವಾಗಿ ಸಭ್ಯರಂತೆ ವರ್ತಿಸಿ. ಕುಟುಂಬದ ಮರ್ಯಾದೆಯನ್ನು ಕಾಪಾಡುವ ಕೆಲಸವೂ ನಿಮ್ಮಿಂದ ಆಗಬೇಕಿದೆ.
ತುಲಾ ರಾಶಿ: ಕೆಲವರಿಗೆ ನಿಮ್ಮ ವರ್ತನೆಯು ಇಷ್ಟವಾಗದೇ ಇರಬಹುದು. ದೇಹಕ್ಕೆ ಇಂದು ಹೆಚ್ಚು ಆಯಾಸವಾಗಬಹುದು. ಆಸಮಯದಲ್ಲಿ ಭೋಜನವನ್ನು ಮಾಡುವುದು ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡಬಹುದು. ಭೂಮಿಯ ವ್ಯವಹಾರದಲ್ಲಿ ನಿಮಗೆ ಅತೀವ ಆಸಕ್ತಿಯು ಇರುವುದು. ಹೂಡಿಕೆಯನ್ನು ಸರಿಯಾದ ಸ್ಥಳದಲ್ಲಿ ಮಾಡಿ. ಯಾವ ಸನ್ನಿವೇಶವೂ ಬರಬಹುದು. ಮನಸ್ಸನ್ನು ಸಮಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಮುಖ್ಯ. ವಿದ್ಯುತ್ ಉಪಕರಣಗಳ ವ್ಯಾಪಾರವು ಅಥವಾ ಸಾಹಿತ್ಯಾಸಕ್ತರು ಹೆಚ್ಚಿನ ಲಾಭವನ್ನು ಪಡೆಯುವಿರಿ.
ವೃಶ್ಚಿಕ ರಾಶಿ: ಪರಪುರುಷರಿಂದ ಆದಷ್ಟು ದೂರವಿರುವುದು ಉತ್ತಮ. ನಿಮ್ಮ ಇಂದಿನ ಕೆಲಸವು ಗೊಂದಲದಿAದ ಕೂಡಿರಲಿದೆ. ಸಂಪತ್ತಿದ್ದರೂ ಅದನ್ನು ಸದುಪಯೋಗ ಮಾಡುವ ಮಾರ್ಗವು ಗೊತ್ತಾಗದೇ ಇರಬಹುದು. ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಂಗಾತಿಯ ಮೇಲೆ ದ್ವೇಷ ಸಾಧಿಸಲು ಹೋಗುವುದು ಸರಿಯಲ್ಲ. ಮುಂದೋಪವನ್ನು ಕಡಿಮೆ ಮಾಡಿಕೊಂಡರೂ ಅದು ನಿಮ್ಮ ಹತೋಟಿಗೆ ಬರುವ ತನಕ ಕಷ್ಟವಾದೀತು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವುದು ಸರಿಯಾಗದು. ಹಿರಿಯರಿಗೆ ಯೋಗ್ಯವಾದ ಗೌರವವನ್ನು ನೀಡಿ. ದುರ್ಬಲ ಸ್ಥಿತಿಯನ್ನು ಸಕಾರಾತ್ಮಕವಾಗಿ ನೋಡುವಿರಿ.
ಧನು ರಾಶಿ: ವೃತ್ತಿಯ ಸ್ಥಳದಲ್ಲಿ ನೀವು ಇಂದು ಖುಷಿಯಿಂದ ಇರುವಿರಿ. ನೀವಾಡುವ ಮಾತು ಸರಳವೂ ಸ್ಪಷ್ಟವಾಗಿ ಆಗಿರಲಿ. ಆಗ ಮಾತ್ರ ನಿಮ್ಮ ಮಾತನ್ನು ಆಲಿಸುವರು. ಆಸ್ತಿಯನ್ನು ಸ್ವಾಯತ್ತ ಮಾಡಿಕೊಳ್ಳಲು ಏನಾದರೂ ತಂತ್ರವನ್ನು ಹೂಡುವಿರಿ. ಅಧ್ಯಾತ್ಮದ ಕಡೆ ಒಲವು ಅಧಿಕವಾಗಿ ಕಾಣುವುದು. ಪ್ರೇಮ ವಿವಾಹವು ನಿಮಗೆ ಇಷ್ಟವಾಗದು. ಮನೆಯ ಜವಾಬ್ದಾರಿಯು ಬಹಳ ಬೇಗ ಬಂದಿದ್ದು ನಿಮ್ಮ ಎಲ್ಲ ಕ್ರಿಯಾಶೀಲತೆಯನ್ನು ಸದ್ಯ ನಿಲ್ಲಿಸಬೇಕಾಗುವುದು. ನಿಮ್ಮ ವಸ್ತುಗಳನ್ನು ಕಳೆದುಕೊಂಡಿದ್ದು ಗೊತ್ತಾಗದೇಹೋಗುವುದು. ಸಮಾರಂಭಗಳಿಗೆ ಭೇಟಿಯು ಅನಿರೀಕ್ಷಿತವವೂ ಆಗಬಹುದು.
ಮಕರ ರಾಶಿ: ನಿಮ್ಮ ಅಧಿಕ ಶ್ರಮದಿಂದ ನಿಮಗೇ ಯಶಸ್ಸು ಸಿಗುವುದು. ಸ್ವಲ್ಪಮಟ್ಟಿಗೆ ಆಯಾಸವೂ ಆಗುವುದು. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿ ಇರುವಿರಿ. ನಿಮ್ಮ ಕಡೆಯಿಂದ ಆದ ತಪ್ಪಿಗೆ ಕ್ಷಮೆಯನ್ನು ಯಾಚಿಸಿ. ಸರಳವಾದ ಕಾರ್ಯವನ್ನು ಕಷ್ಟವಾಗಿಸಿಕೊಳ್ಳುವುದು ಬೇಡ. ನೀವು ಕುಟುಂಬದ ವಿಚಾರದಲ್ಲಿ ತೆಗೆದುಕೊಂಡ ತೀರ್ಮಾನವು ಇತರರಿಗೂ ಸರಿ ಎನಿಸಬಹುದು. ಆರೋಗ್ಯದ ಹೆಚ್ಚು ಗಮನವಿರಲಿ. ಹೊಸ ಸಂಬAಧದಲ್ಲಿ ನಿಮಗೆ ಆಸಕ್ತಿಯು ಹೆಚ್ಚಿರುವುದು. ನಿಮಗೆ ಬರುವ ಜವಾಬ್ದಾರಿಯನ್ನು ಅಕಾರಣವಾಗಿ ತಳ್ಳಿಹಾಕುವಿರಿ. ಗಣ್ಯರ ಭೇಟಿಯು ಸಂತೋಷವನ್ನು ನೀಡುವುದು.
ಕುಂಭ ರಾಶಿ: ಮನಸ್ಸಿಗೆ ಅಹಿತಕರ ಘಟನೆಗಳು ತೊಂದರೆಯನ್ನು ತರಬಹುದು. ಯಾರ ಮಾತನ್ನೇ ಕೇಳುವುದಿದ್ದರೂ ನಿಮ್ಮದಾದ ಪೂರ್ವಯೋಜನೆ ಇರಲಿ. ನಿಮ್ಮ ಕಷ್ಟಕ್ಕೆ ಯಾರೂ ಬರದಿರುವುದು ನಿಮಗೆ ಬೇಸರವನ್ನು ತರಿಸಬಹುದು. ಮನೆಯಿಂದ ಅನಿರೀಕ್ಷಿತ ಸುದ್ದಿಯೊಂದು ಬರಬಹುದು. ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ಪೂರ್ಣವಿಶ್ವಾಸವು ಇರದು. ತಂದೆ ಹಾಗೂ ತಾಯಿಗಳ ಆಶೀರ್ವಾದವೇ ನಿಮಗೆ ಬಲವನ್ನು ತಂದುಕೊಡುವುದು. ಯಾವುದಾದರೂ ಆಮಿಷಕ್ಕೆ ಬಲಿಯಾಗಿ ಕಾನೂನಿಗೆ ವಿರುದ್ಧವಾದ ಕಾರ್ಯದಲ್ಲಿ ತೊಡಗುವಿರಿ. ಪತ್ನಿಯ ಭಾವಕ್ಕೆ ಸ್ಪಂದಿಸಲು ನಿಮಗೆ ಇಂದು ಆಗದು. ಇದು ಮನಸ್ತಾಪಕ್ಕೆ ಕಾರಣವಾದೀತು.
ಮೀನ ರಾಶಿ: ಉನ್ನತಸ್ಥಾನದ ಪ್ರಾಪ್ತಿಗೆ ಕೆಲವು ಅಡೆತಡೆಗಳು ಎದುರಾಗಬಹುದು. ಆಪ್ತರ ನಡುವೆ ಸಂದೇಹವು ಬರುವ ಸಂಭವವಿದೆ. ಯಾರದೋ ಮಾತಿಗೆ ನಿಮ್ಮ ಪ್ರತಿಕ್ರಿಯೆ ಸಲ್ಲದು. ನೂತನ ಗೃಹನಿರ್ಮಾಣದ ಕಾರ್ಯಕ್ಕೆ ದೊಡ್ಡ ಯೋಜನೆಯನ್ನು ರೂಪಿಸುವಿರಿ. ನಿಮಗೆ ಸಿಗಬೇಕಾದ ವಸ್ತುಗಳನ್ನು ಹಕ್ಕಿನಿಂದ ಪಡೆಯುವಿರಿ. ನಿಮ್ಮ ಉದ್ಯೋಗವು ಅನ್ಯರ ಕಿವಿಕಚ್ಚುವಿಕೆಯಿಂದ ಕಳೆದುಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಸಹೋದರನಿಗೆ ಕೊಟ್ಟು ಮನೆಯಿಂದ ದೂರ ಹೋಗುವಿರಿ. ಶತ್ರುಗಳ ತೊಂದರೆಯನ್ನು ತಡೆಯಲು ಕಾನೂನಿಗೆ ಶರಣಾಗುವಿರಿ.