ಬೆಳಗಾವಿ: ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಧಾರಾಕಾರ ಮಳೆಗೆ ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ದೂದ್ ಸಾಗರ್ ಬಳಿ ಗುಡ್ಡ ಕುಸಿದಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಿಲ್ಲ.
ಭಾನುವಾರ ಸಂಜೆ 6 ಗಂಟೆಗೆ ಗುಡ್ಡ ಕುಸಿದು ರೈಲ್ವೆ ಟ್ರಾಕ್ ಮೇಲೆ ಮಣ್ಣು, ಬಂಡೆಗಳು ಬಿದ್ದಿವೆ. ಘಟನೆಯ ಪರಿಣಾಮ ನಾಲ್ಕು ಗಂಟೆಗಳ ಕಾಲ ಬೆಳಗಾವಿ- ಗೋವಾ ಮಧ್ಯೆ ರೈಲ್ವೆ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಮಣ್ಣು-ಬಂಡೆಗಳ ತೆರವಿಗೆ ಗೋವಾದ ಅಗ್ನಿಶಾಮಕ ದಳದ ಠಾಣೆ ಸಿಬ್ಬಂದಿಗಳು, ರೈಲ್ವೆ ಪೊಲೀಸರ ಹರಸಾಹಸಪಟ್ಟರು.
ಭಾನುವಾರ ದೂದ್ ಸಾಗರ್ ಜಲಪಾತ ವೀಕ್ಷಣೆಗೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ತೆರಳಿದ್ದರು. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ರಾತ್ರಿ 10 ಗಂಟೆಯ ಬಳಿಕ ರೈಲುಗಳ ಕಾರ್ಯಾಚರಣೆ ಪುನರಾರಂಭವಾಗಿದೆ