ಮೈಸೂರು: ಶ್ರೀ ಮಲೆ ಮಹದೇಶ್ವರ ದೇವಾಲಯದ ಜಾಗದ ಸರ್ವೇ ನಂಬರ್ ಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲವನ್ನು ಬಗೆಹರಿಸದಿದ್ದರೆ ತಾಲ್ಲೂಕು ಕಚೇರಿ ಎದುರು ಪ್ರತಿಭಟಿಸುವುದಾಗಿ ಎಚ್.ಡಿ.ಕೋಟೆ ತಾಲ್ಲೂಕಿನ ರಾಜೇಗೌಡನಹುಂಡಿ ಗ್ರಾಮದ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಸೇವಾರ್ಥದಾರ ಗುರುಸ್ವಾಮಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಚ್.ಡಿ.ಕೋಟೆ ತಾಲ್ಲೂಕಿನ ರಾಜೇಗೌಡನ ಹುಂಡಿ ಗ್ರಾಮದ ಸರ್ವೇ ನಂ.1ರ ಜಾಗದಲ್ಲಿ ಪ್ರಸ್ತುತ ಶ್ರೀ ಮಲೆಮಹದೇಶ್ವರ ದೇವಾಲಯವಿದೆ. ಆದರೆ, ಈ ಬಗ್ಗೆ ಸ್ಥಳ ಪರಿಶೀಲನೆಯನ್ನೇ ಮಾಡದ ಅಧಿಕಾರಿಗಳು ಸದರಿ ಜಾಗವನ್ನು ಶ್ರೀ ವರದರಾಜಸ್ವಾಮಿ ದೇವಾಲಯ ಎಂದೂ ಸರ್ವೇಯಲ್ಲಿ ನಮೂಸಿದ್ದಾರೆ. ಮಾತ್ರವಲ್ಲದೆ, ವರದರಾಜಸ್ವಾಮಿ ದೇವಾಲಯ ಇರುವ ಸರ್ವೇ ನಂ.3ರ ಜಾಗವನ್ನು ಕುರಿಮಂದೆ ಎಂದು ದಾಖಲಿಸಿದ್ದಾರೆ. ಮಲೆ ಮಹದೇಶ್ವರ ದೇವಾಲಯದ ಪ್ರಸ್ತುತ ಸರ್ವೇ ಜಾಗವನ್ನು ಪರಿಶೀಲಿಸದೇ ಬದಲಿ ಜಾಗದ ಸರ್ವೇ ನಮೂದಿಸಿದ್ದಾರೆ. ಹೀಗಾಗಿ ಈ ಗೊಂದಲವನ್ನು ಪರಿಶೀಲಿಸಿ 20 ದಿನಗಳಲ್ಲಿ ಮಲೆ ಮಹದೇಶ್ವರ ದೇವಾಲಯದ ಜಾಗದ ದಾಖಲೆ ಗೊಂದಲ ಸರಿಪಡಿಸುವಂತೆ ಒತ್ತಾಯಿಸಿದರು.