ನಂಜನಗೂಡು : ಏ ೩ ಇಂದಿಗೂ ದೃವ ನಾರಾಯಣ್ ರವರೆ ನಂಜನಗೂಡಿನ ಕಾಂಗ್ರೆಸ್ ಅಭ್ಯರ್ಥಿ ನಾನು ಕೇವಲ ಅವರು ನನ್ನಗೆ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸಲು ಬಂದಿದ್ದೇನೆ ಅಷ್ಟೆ ಎಂದು ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ದೃವನಾರಾಯಣ್ ಹೇಳಿದರು.
ಅವರು ತಮ್ಮ ಸ್ವ ಗ್ರಾಮವಾದ ಹೆಗ್ಗವಾಡಿಗೆ ತೆರಳಿ ತಂದೆಯವರ ಸಮಾಧಿಗೆ ಪೂಜೆ ಸಲಿಸಿ,ತಮ್ಮ ಕಾರ್ಯಕರ್ತರ ಜೋತೆ ಬೆಲ್ಲದ ಕುಪ್ಪೆ ಮಹದೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲಿಸಿ ಬಂಕಳ್ಳಿ, ಡೋರನಕಟ್ಟೆ ಕಾಲೋನಿ, ಹಾದುನೂರು ಒಡೆಯನಪುರ, ವೆಂಕಟಚಲಪುರ, ಯಡಿಯಾಲ, ಚಿಲಕಳ್ಳಿ, ಪಾರ್ವತಿಪುರ ಇನ್ನು ಮುಂತಾದ ಗ್ರಾಮಗಳಲ್ಲಿ ಚುನಾವಣಾ ಪ್ರಚಾರವನ್ನು ಆರಂಭಿಸಿದರು.ನಂತರ ಮಾತಾನಾಡಿದ ಅವರು ನಮ್ಮ ತಂದೆ ಸಂಸದರಾಗಿದ್ದಾಗ ನಂಜನಗೂಡು ಮತ್ತು ಚಾಮರಾಜನಗರ ಭಾಗದಲ್ಲಿ ತುಂಬಾ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಇಂದು ಅವರು ದೈಹಿಕವಾಗಿ ನಮ್ಮ ಜೋತೆ ಇಲ್ಲದಿದ್ದರು ಮಾನಸಿಕವಾಗಿ ನಮ್ಮ ಬಳಿ ಇದ್ದರೆ ಈಗಲೂ ನಂಜನಗೂಡಿನ ಅಧಿಕೃತವಾಗಿ ಅಭ್ಯರ್ಥಿ ಅವರೆ ಕಾರ್ಯ ನಿಮಿತ್ತ ಅವರು ಬೇರೆ ಕಡೆ ತೆರಳಿರುವುದರಿಂದ ನನ್ನಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಎಂದು ತಿಳಿದು ಈ ಚುನಾವಣೆಯಲ್ಲಿ ಪಾಲ್ಗೊಂಡಿದ್ದೇನೆ ಅವರಿಗೆ ನಂಜನಗೂಡಿನಿಂದ ಸ್ಪರ್ಧಿಸಿ ನಿಮ್ಮಗಳ ಸೇವೆ ಮಾಡಬೇಕು ಬಹಳ ಆಸೆ ಇತ್ತು ಯಾವಾಗಲೂ ಅವರು ನಿಮ್ಮಗಳ ನಡುವೆ ಇರುತ್ತಿದ್ದರು ಅವರ ಅಭಿವೃದ್ಧಿ ಕಾರ್ಯವೇ ನನ್ನಗೆ ಚುನಾವಣೆಯಲ್ಲಿ ಗೆಲುವಿಗೆ ಶ್ರೀ ರಕ್ಷೆಯಾಗಲಿದೆ.
ನಮ್ಮ ತಂದೆ ಆರ್ ಧ್ರುವನಾರಾಯಣ್ ಅವರು ಸಂಸದರಾಗಿದ್ದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ನಾನು ತಂದೆಯಾವರ ಅವರ ಆಸೆಯಂತೆ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕ್ಷಮಿಸುತ್ತೇನೆ ನನ್ನ ತಂದೆಯಂತೆ ನಾನು ಕ್ಷೇತ್ರದ ಜನರ ಕಷ್ಟ ಸುಖಗಳಿಗೆ ಭಾಗಿಯಾಗುತೆನೆ ನನ್ನ ತಂದೆಗೆ ಕೊಟ್ಟ ಪ್ರೀತಿಯನ್ನು ನನಗೂ ಕೊಟ್ಟು ಕ್ಷೇತ್ರದ ಜನರ ಸೇವೆ ಮಾಡಲು ಒಂದು ಅವಕಾಶ ನೀಡಿ ಎಂದು ಮನವಿ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಬಡ ಜನರು ನೆಮ್ಮದಿಯಿಂದ ಬದುಕುತ್ತಾರೆ ಈಗಾಗಲೇ ಕಾಂಗ್ರೆಸ್ ಪಕ್ಷ ಬಡವರಿಗಾಗಿ 200 ಯೂನಿಟ್ ಪ್ರತಿ ಮಹಿಳೆಗೆ ತಿಂಗಳಿಗೆ 2000 10 ಕೆಜಿ ಅಕ್ಕಿ ಕೊಡಲಾಗುವುದು
ಈ ಬಾರಿ ನಾವು ಕಾಂಗ್ರೆಸ್ ಪಕ್ಷಕಾಗಿ ದುಡಿಯಬೇಕಿದೆ ನನಗೆ ರಾಜಕೀಯ ಹೊಸದಾಗಿರಬಹುದು ಅದರೆ ನಿಮ್ಮೆಲ್ಲರ ಆಶೀರ್ವಾದದಿಂದ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ನನಗೆ ನಿಮ್ಮ ಸಹಕಾರ ಬೇಕು ಯಾವುದೇ ಸಮಸ್ಯೆ ಇದ್ದರೂ ನನ್ನನ್ನು ಹುಡುಕಿಕೊಂಡು ಮೈಸೂರಿಗೆ ಬರುವ ಅವಶ್ಯಕತೆ ಇಲ್ಲ ಕೇವಲ ಒಂದು ದೂರವಾಣಿ ಕರೆ ಮಾಡಿದರೆ ನನ್ನ ಕೈಲಾದಷ್ಟು ಸಮಸ್ಯೆ ಬಗೆಹರಿಯಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಕೊಡಲಾಗುವುದು ಎಂದು ಹೇಳಿದರು.
ಕಳಲೆ ಕೇಶವಮೂರ್ತಿಯವರು ಮಾತನಾಡಿ ಹಿಂದಿನಿಂದ ಒಂದು ವಾರಗಳ ಕಾಲ ದರ್ಶನ್ ಧ್ರುವನಾರಾಯಣ್ ರವರು ಕ್ಷೇತ್ರ ಪ್ರವಾಸ ಮಾಡಲಿದ್ದಾರೆ ಒಂದು ಕಡೆ ತಾಯಿಯ ಅನಾರೋಗ್ಯ ಮತ್ತೊಂದು ಕಡೆ ತಂದೆಯ ನಿಧನದ ನೋವು ಎರಡರ ನೋವನ್ನು ನುಂಗಿಕೊಂಡು ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ ಅವರನ್ನು ಗೆಲ್ಲಿಸುವುದು ನಮ್ಮ ಸಂಪೂರ್ಣ ಜವಾಬ್ದಾರಿಯಾಗಿದೆ ಇಂದ ಅವರ ಬೆನ್ನಿಗೆ ನಿಂತು ಪ್ರಚಾರ ಮಾಡಿ ಅತ್ಯಧಿಕ ಬಹುಮತದಿಂದ ಅವರನ್ನು ಗೆಲ್ಲಿಸಲು ನಮ್ಮ ಕರ್ತವ್ಯವಾಗಿದೆ ಎಂದರು
ತಾ ಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಕೆ ಮಾರುತಿ. ಎಸ್ ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ದೊರೆಸ್ವಾಮಿ ನಾಯಕ. ಜಿ ಪಂ ಮಾಜಿ ಅಧ್ಯಕ್ಷೆ ಲತಾ ಸಿದ್ಧಶೆಟ್ಟಿ. ನಂಜನಗೂಡು ಟೌನ್ ಬ್ಲಾಕ್ ಅಧ್ಯಕ್ಷ ಸಿಎಂ ಶಂಕರ್, ಹುಲ್ಲಹಳ್ಳಿ ಬಾಕ್ಲ ಅದ್ಯಕ್ಷ ಶ್ರೀ ಕಂಠ ನಾಯಕ ನಂಜನಗೂಡು ಟೌನ್ ಯುವ ಮೋರ್ಚಾ ಅಧ್ಯಕ್ಷ ದೇಬುರ್ ಅಶೋಕ್, ಹುಲ್ಲಳ್ಳಿ ಯುವ ಮೋರ್ಚಾ ಅಧ್ಯಕ್ಷ ಅಜೇಯ್,ಸುಮೇಶ್ ಇನ್ನು ಮುಂತಾದವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು