ನಂಜನಗೂಡು:- ತಾಲೂಕಿನ ಇತಿಹಾಸ ಪ್ರಸಿದ್ಧ ಕಳಲೆ ಗ್ರಾಮವು ಪುರಾಣ ಪ್ರಸಿದ್ಧ ಗ್ರಾಮವಾಗಿದ್ದು ಇಡೀ ನಂಜನಗೂಡು ತಾಲೂಕಿನಲ್ಲಿ ಅತಿ ದೊಡ್ಡ ಗ್ರಾಮವಾಗಿದೆ ಈ ಗ್ರಾಮದಲ್ಲಿ ಪುರಾಣ ಪ್ರಸಿದ್ಧವಾದ ಕಳಲೆ ಶ್ರೀ ಲಕ್ಷ್ಮಿಕಾಂತ ಸ್ವಾಮಿ ದೇವಸ್ಥಾನವಿದ್ದು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಲಕ್ಷ್ಮಿಕಾಂತ ಸ್ವಾಮಿ ಅವರ ಜಾತ್ರೆ ಸಾವಿರಾರು ಭಕ್ತಾದಿಗಳ ನಡುವೆ ಈ ಬಾರಿಯೂ ಅದ್ದೂರಿಯಾಗಿ ನಡೆಯಿತು.
ಬೆಳಗ್ಗೆ 6 19 ಗಂಟೆಯಿಂದ 6:40 ಗಂಟೆ ಒಳಗೆ ಸಲ್ಲುವ ಕುಂಭ ಮೀನಾ ಲಗ್ನದಲ್ಲಿ ರಥ ಚಾಲನೆ ನೀಡಿದರು ಈ ಜಾತ್ರೆಗೆ ತಾಲೂಕಿನ ಹಲವಾರು ಗ್ರಾಮದ ಭಕ್ತಾದಿಗಳು ಆಗಮಿಸಿ ಲಕ್ಷ್ಮಿಕಾಂತ ಸ್ವಾಮಿ ಕೃಪೆಗೆ ಪಾತ್ರರಾಗಿ ಜೈಕಾರ ಹಾಕಿ ರಥ ವನ್ನು ಭಕ್ತಿಯಿಂದ ಎಳೆದರು ಭಕ್ತಾದಿಗಳು ಮತ್ತು ನವ ಜೋಡಿಗಳು ಹಣ್ಣು ದವನ ಹಾಕಿ ಪೂಜೆ ಸಲ್ಲಿಸಿದರು.
ಜಾತ್ರೆಯ ದಿನ ರಾತ್ರಿ 10:00 ಗಂಟೆಗೆ ತೇ ರಡಿ ಉತ್ಸವ ಪುಷ್ಪಲಂಕಾರವು ನಡೆಯಲಿದೆ. ರಥಕ್ಕೆ ಬಣ್ಣ ಬಣ್ಣದ ಹೂಗಳಿಂದ ಮತ್ತು ಹೂಗಳಿಂದ ಸಿಂಗರಿಸಲಾಗಿತ್ತು.
ಜಾತ್ರೆಯಲ್ಲಿ ಹೆಚ್ಚಿನ ಭಕ್ತಾದಿಗಳು ಆಗಮಿಸಿ ಭರ್ಜರಿ ವ್ಯಾಪಾರ ಕೂಡ ನಡೆಯಿತು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ವಿಶೇಷವಾಗಿ ಭಾಗವಹಿಸಿ ತಮ್ಮ ಆಟೋಟ ಗಳನ್ನು ಹಾಡಿ ಸಂಭ್ರಮಿಸಿದರು
ಪ್ರತಿ ವರ್ಷದಂತೆ ಈ ವರ್ಷ ಕೂಡ ಸಾವಿರಾರು ಭಕ್ತಾದಿಗಳ ನಡುವೆ ಅದ್ದೂರಿಯಾಗಿ ಕಳಲೆ ಗ್ರಾಮದಲ್ಲಿ ಶ್ರೀ ಲಕ್ಷ್ಮಿಕಾಂತ ಸ್ವಾಮಿ ಜಾತ್ರೆ ನಡೆಯಿತು.
ಈ ಸಂದರ್ಭದಲ್ಲಿ ದೇವಾಲಯ ಪಾರುಪತೇದಾರ್ ಎಚ್ ಎಸ್ ಜಯರಾಮ್ ಪ್ರಧಾನ ಆಗಮಿಕ ಎಚ್ ಡಿ ವಿನಯ್ ಅರ್ಚಕ ರಂಗರಾಜನ್ ಊರಿನ ಗ್ರಾಮಸ್ಥರು ಮುಖಂಡರು ಯಜಮಾನರುಗಳು ಇದ್ದರು.