ಮೈಸೂರು: ಪ್ರಭುದೇವ ಅವರ ಅಜ್ಜಿ ಪುಟ್ಟಮ್ಮಣ್ಣಿ (96) ನಿಧನರಾಗಿದ್ದಾರೆ. ಬಹುಭಾಷಾ ನಟ ಪ್ರಭುದೇವ ತಾಯಿ ಅವರ ತಾಯಿ ಪುಟ್ಟಮ್ಮಣ್ಣಿ ನಂಜನಗೂಡು ತಾಲ್ಲೂಕಿನ ದೂರ ಗ್ರಾಮದಲ್ಲಿ ಕಳೆದ ರಾತ್ರಿ ನಿಧನರಾಗಿದ್ದಾರೆ. ವಯೋ ಸಹಜ ಕಾರಣಗಳಿಂದ ಬಳಲುತ್ತಿದ್ದ ಅವರು ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ.ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಂದು ಮೈಸೂರಿಗೆ ಪ್ರಭುದೇವ ಹಾಗೂ ಸಹೋದರ ನಾಗೇಂದ್ರ ಆಗಮಿಸಿದ್ದಾರೆ.ಅಜ್ಜಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಪ್ರಭುದೇವ ಅವರು ಚೆನ್ನೈ ನಿಂದ ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇಂದು ಸಂಜೆ ಪುಟ್ಟಮ್ಮಣ್ಣಿಯವರ ಅಂತ್ಯಕ್ರಿಯೆ ನೆರವೇರಲಿದೆ.