ನಂಜನಗೂಡು: ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ 21 ಸೀಟ್ ಹೊಂದಿರುವ ಮಿನಿ ಬಸ್ ಬೈಕ್ ಸವಾರ ಅಡ್ಡ ಬಂದ ಕಾರಣ ರಸ್ತೆ ಅಪಘಾತವಾಗಿದೆ ಎಲ್ಲರಿಗೂ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಯದಿಂದ ಪಾರಾಗಿದ್ದಾರೆ ಅಪಘಾತ ಆಗಿರುವವರು ಹೊಸಪೇಟೆಯವರು ಎಂದು ತಿಳಿದಿದೆ.
ಈ ಬಸ್ಸಿನಲ್ಲಿ 21 ಜನ ಪ್ರಯಾಣಿಕರು ಇದ್ದರು ಎನ್ನಲಾಗಿದೆ ಅದರಲ್ಲಿ 10ಕ್ಕೂ ಹೆಚ್ಚು ಸಣ್ಣ ಐದು ವರ್ಷದ ಮೂರು ವರ್ಷದ ಮಕ್ಕಳು ಇದ್ದರುವಾಹನದ ನಂಬರ್ KA05 7492 21 ಸೀಟು ಹೊಂದಿರುವ ಮಿನಿ ಬಸ್ಸಿನ ಡ್ರೈವರ್ ಮಹೇಶ್ ಮಾತನಾಡಿ ಇವರು ಮೈಸೂರು ಲೋಕಲ್ ಪ್ರವಾಸ ಮಾಡುತ್ತಿದ್ದರು ಆದ್ದರಿಂದ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಮೈಸೂರಿಗೆ ತೆರಳುತ್ತಿರುವಾಗ ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ ಬೈಕ್ ಸವಾರ ಅಡ್ಡ ಬಂದಿದ್ದ ಆತನನ್ನು ಪಾರು ಮಾಡಲು ಹೋಗಿ ಈ ಘಟನೆ ನಡೆಯಿತು ಪಕ್ಕದಲ್ಲಿದ್ದ ಡಿವೈಡರ್ ಡಿಕ್ಕಿ ಹೊಡೆದು ಮಿನಿ ಬಸ್ ಪಲ್ಟಿ ಹೊಡೆದು ಗ್ಲಾಸ್ ಗಳು ಪುಡಿ-ಪುಡಿಯಾಗಿ ರಸ್ತೆ ಅಡ್ಡಲಾಗಿ ಬಿದ್ದಿದೆ ಯಾವುದೇ ಪ್ರಾಣಾಪಯವಿಲ್ಲದೆ ಹತ್ತರಿಂದ ಹದಿನೈದು ಪ್ರಯಾಣಿಕರಿಗೆ ಕಾಲು ಕೈಗಳು ಬೆನ್ನು ಒಳ ಏಟು ಬಿದ್ದಿದ್ದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಕೆಲವರಿಗೆ ಎಕ್ಸ್ ರೇ ತೆಗೆದು ಚಿಕಿತ್ಸೆ ನೀಡಲಾಗುತ್ತಿದೆ
ಸ್ಥಳಕ್ಕೆ ಟ್ರಾಫಿಕ್ ಪೊಲೀಸ್ ಇಲಾಖೆಯವರು ಬಂದು ಅಡ್ಡಲಾಗಿ ಬಿದ್ದಿದ್ದ ಮಿನಿ ಬಸ್ಸನ್ನು ಕ್ರೇನ್ ಮೂಲಕ ತೆಗೆದು ಸುಗಮ ಸಂಚಾರಕ್ಕೆ ದಾರಿಯ ಮಾಡಿಕೊಟ್ಟರು
ಹೆಚ್ಚಿನ ಮಾಹಿತಿಯನ್ನು ಸರ್ಕಾರಿ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆಯುತ್ತಿದ್ದಾರೆ
ಬಸ್ಸಿನ ಪ್ರಾಣಿಕರು ಮಾತನಾಡುತ್ತಿದ್ದು ಶ್ರೀಕಂಠೇಶ್ವರ ದೇವರೇ ನಮ್ಮನ್ನು ಕಾಪಾಡಿದ್ದಾನೆ ಯಾರಿಗೂ ಯಾವುದೇ ರೀತಿಯ ತೊಂದರೆ ಆಗಿಲ್ಲ ಸಣ್ಣ ಸಣ್ಣ ಮಕ್ಕಳು ಕುಟುಂಬ ಸಮೇತ ಬಂದಿದ್ದೆವು ಹೆಚ್ಚಿನ ಅನಾಹುತ ಆಗಿದ್ದರೆ ಎಲ್ಲರೂ ಜೀವ ಕಳೆದುಕೊಳ್ಳುತ್ತಿದ್ದೆವು. ಆದರೆ ಶ್ರೀಕಂಠೇಶ್ವರ ಪರಮಾತ್ಮ ನಮ್ಮನ್ನು ಕಾಪಾಡಿದ್ದಾನೆ ಎನ್ನುತ್ತಿದ್ದರು