ಮೈಸೂರು:- ಯಡಿಯೂರಪ್ಪ ಜೈಲಿಗೆ ಹೋಗಿದ್ದ ಪ್ರಕರಣವೇ ಬೇರೆ. ನನ್ನ ಪ್ರಕರಣವೇ ಬೇರೆ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಯಡಿಯೂರಪ್ಪಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ನಗರದಲ್ಲಿ ಇಂದು ಸಿಎಂ ಸುದ್ದಿಗಾರರೊಂದಿಗೆ ಮಾತನಾಡಿದರು. ಯಡಿಯೂರಪ್ಪ ಚೆಕ್ ಮೂಲಕ ಹಣ ಪಡೆದಿದ್ದರು. ಡಿನೋಟಿಫಿಷನ್ ಮಾಡಿದ್ದರು. ಅವರ ಪ್ರಕರಣವೇ ಬೇರೆ ಎಂದು ಸಿಎಂ ಹೇಳಿ, ನಾಳಿದ್ದು ಮೈಸೂರಿನಲ್ಲಿ ಸಮಾವೇಶ ಇದೆ. ಎಲ್ಲರ ಹಗರಣವನ್ನು ನಿಮ್ಮ ಮುಂದೆ ಇಡುತ್ತೇನೆ. ಅದಕ್ಕಾಗಿ ಇಂದು ಪ್ರೆಸ್ ಮೀಟ್ ಕ್ಯಾನ್ಸಲ್ ಮಾಡಿದ್ದೇನೆ. ನಾಳಿದ್ದು ಸಮಾವೇಶದಲ್ಲಿ ಎಲ್ಲವನ್ನೂ ಹೇಳುತ್ತೇನೆ.ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.ಪಾದಯಾತ್ರೆ ಮುಗಿಯುವಷ್ಟರಲ್ಲಿ ಸಿಎಂ ರಾಜೀನಾಮೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರ ಕುರಿತು ಗರಂ ಆದ ಸಿಎಂ, ಯಡಿಯೂರಪ್ಪ ಕೋರ್ಟ್ ದಯದಿಂದ ಹೊರಗಡೆ ಇದ್ದಾರೆ. ಈ ವಯಸ್ಸಿನಲ್ಲಿ ಫೋಕ್ಸೋ ಕೇಸ್ ಹಾಕಿಸಿಕೊಂಡಿದ್ದಾರೆ. 82ನೇ ವಯಸ್ಸಿನಲ್ಲಿ ಇದೆಲ್ಲ ಬೇಕಿತ್ತ. ಅವರು ರಾಜಕೀಯ ನಿವೃತ್ತಿ ಆಗಬೇಕಿತ್ತು ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.ಬಿಜೆಪಿ ಜೆಡಿಎಸ್ ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ. ನನ್ನನು ಟಾರ್ಗೆಟ್ ಮಾಡಿ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನ ಮಾಡ್ತಿದ್ದಾರೆ. ಆದರೆ ಇವರ ಸುಳ್ಳುಗಳಿಂದ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಸಿಎಂ ಖಡಕ್ ಆಗಿ ಹೇಳಿದರು.ಜನರು ಇವರ ಸುಳ್ಳನ್ನು ನಂಬಲ್ಲ. ಈ ಹಿಂದೆ ಆಪರೇಶನ್ ಕಮಲ ಮಾಡಲು ಪ್ರಯತ್ನ ಮಾಡಿದ್ದರು. ಅದು ಆಗಲಿಲ್ಲ ವಿಫಲ ಆಯ್ತು. ಇದೀಗ ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ರಾಜ್ಯಪಾಲರಿಂದ ನನಗೆ ಬಂದಿರುವುದು ಒಂದೇ ನೋಟಿಸ್. ಅದಕ್ಕೆ ಉತ್ತರ ಕೊಟ್ಟಿದ್ದೇನೆ. ಮುಖ್ಯ ಕಾರ್ಯದರ್ಶಿಗಳು, ರಾಜ್ಯಪಾಲರ ಭೇಟಿ ಮಾಡಿದ್ದೆ ಬೇರೆ ವಿಚಾರಕ್ಕೆ. ಸಿ.ಎಸ್. ಭೇಟಿಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ ಮುಖ್ಯಮಂತ್ರಿಗಳು, ಹೊಸದಾಗಿ ನೇಮಕವಾದ ಹಿನ್ನಲೆ ಭೇಟಿ ಆಗಿದ್ದಾರೆ. ಕಾನೂನಾತ್ಮಕವಾಗಿ ನನ್ನ ತಪ್ಪಿಲ್ಲ ಅಂತ ರಾಜ್ಯಪಾಲರು ಕನ್ವಿಸ್ ಆಗುತ್ತಾರೆ ಎಂಬ ವಿಶ್ವಾಸ ಇದೆ ಎಂದರು.ಸಚಿವ ಸಂಪುಟದವರು ಉತ್ತರ ಕೊಟ್ಟಿದ್ದಾರೆ. ಇದನ್ನು ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ವಿಪಕ್ಷಗಳ ಸುಳ್ಳುಗಳನ್ನು ಎದುರಿಸುವ ಶಕ್ತಿ ನನಗಿದೆ. ಬಿಜೆಪಿ ಅವರದ್ದು ಭ್ರಷ್ಟ ಸರ್ಕಾರ. ಅವರದೇ ಹಗಣರದ ತನಿಖೆಗಳು ನಡೆಯುತ್ತಿದೆ. ಇವರಿಗೆ ಯಾವ ನೈತಿಕತೆ ಇದೆ. ವಿಪಕ್ಷಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.ಮುಡಾ ಹಗರಣ ವಿಚಾರ ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು 2014ರಲ್ಲಿ ಸಿಎಂ ಆಗಿದ್ದಾಗ ನನ್ನ ಹೆಂಡ್ತಿ ಅರ್ಜಿ ಹಾಕಿದ್ದಳು. ಇದನ್ನು ಮುಡಾ ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದರು. ನಾನು ಸಿಎಂ ಆಗಿರುವಾಗ ಒಂದು ಗುಂಟೆ ಜಾಗವನ್ನು ಕೊಡಬೇಡಿ ಎಂದಿದ್ದೆ. ಮತ್ತೆ 2021ರಲ್ಲಿ ಅರ್ಜಿ ಹಾಕಿದ್ದಾಳೆ. ಆವಾಗ ಬಿಜೆಪಿ ಸರ್ಕಾರವಿತ್ತು. ಅವರು ಕಾನೂನು ರೀತಿಯಲ್ಲಿ ಬದಲಿ ಸೈಟ್ ಕೊಟ್ಟಿದ್ದಾರೆ. ನಾನು ಸೈಟು ಪಡೆಯಬೇಕು ಎಂಬ ಉದ್ದೇಶವಿದಿದ್ದರೆ ಸಿಎಂ ಆಗಿದ್ದಾಗ ನಾನೇ ಸೈಟ್ ಕೊಡಿಸುತ್ತಿದ್ದೆ. ಸಿಎಂ ಆಗಿ ನನಗೆ ಅಧಿಕಾರ ಇತ್ತು. ನಾನೇ ಪ್ರಭಾವ ಬಳಸಿ ಸೈಟು ಕೊಡಬಹುದಿತ್ತು. ನಾನು ಆ ರೀತಿ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.