ಮೈಸೂರು: ನನ್ನ ವಿರುದ್ಧದ ಆರೋಪಗಳನ್ನೂ ಎದುರಿಸಲು ಸನ್ನದ್ಧರಾಗಿದ್ದೇನೆ ಎಂದು ಚಾಮುಂಡಿಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಸಿಎಂ ರಾಜೀನಾಮೆ ನೀಡುವವರೆಗೂ ಮೈತ್ರಿ ಹೋರಟ ಮುಂದವರಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಇಂತಹವಕ್ಕೆಲ್ಲಾ ಹೆದುರಿತ್ತಿನಾ..? ನಾನು ಇದಕ್ಕೆಲ್ಲ ಬಗ್ಗೋದಿಲ್ಲ. ಇದೆಲ್ಲ ಸುಳ್ಳು ಆರೋಪಗಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.ನಾನು ರಾಜಕೀಯ ಹಾಗೂ ಕಾನೂನು ಮೂಲಕ ಎದುರಿಸಲು ಸಿದ್ಧನಿದ್ದೇನೆ. ನಿನ್ನೆ ನಡೆದ ಸಮಾವೇಶದಲ್ಲಿ ಹಲವು ವಿಚಾರ ಬಿಚ್ಚಿಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳನ್ನ ಜನರ ಮುಂದೆ ಇಡುತ್ತೇನೆ. ಬಿ.ವೈ.ವಿಜಯೇಂದ್ರ, ಯಡಿಯೂರಪ್ಪ , ಕುಮಾರಸ್ವಾಮಿ, ಆರ್. ಅಶೋಕ್ ಎಲ್ಲರೂ ಏನೇನೂ ಮಾಡಿದ್ದಾರೆ ಗೊತ್ತಿದೆ. ಈಗಾಗ್ಲೇ ಕೆಲವು ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಈ ಬಗ್ಗೆ ಮಾತನಾಡುತ್ತೇವೆ. ಇನ್ನೂ ಕೆಲವು ಹಗರಣಗಳು ಬಾಕಿ ಇವೆ. ಬಿಜೆಪಿ- ಜೆಡಿಎಸ್ ನಾಯಕರ ಆರೋಪಗಳನ್ನು ಎದುರಿಸಲು ಸಿದ್ಧನಿದ್ದೇನೆ ಎಂದರು.ಬಿಜೆಪಿ ಜೆಡಿಎಸ್ ಅವ್ರ ಪಾದಯಾತ್ರೆ ಮಾಡಿದ್ದಕ್ಕೆ ನಾವು ಜನಾಂದೋಲ ಮಾಡಿದ್ದು. ಅವರು ಮಾಡುತ್ತಿರೋ ಆರೋಪ ಸುಳ್ಳು ಎಂದು ತಿಳಿಸಲು ಜನಾಂದೋಲ ಮಾಡಿದ್ದು. ನನಗೆ ಕಪ್ಪು ಮಸಿ ಬಳಿಯಲು ಪ್ರಯತ್ನ ಪಡುತ್ತಿದ್ದಾರೆ. ಜನರ ಆಶೀರ್ವಾದದಿಂದ ಬಂದ ಸರ್ಕಾರವನ್ನ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ನನಗೆ ಕಪ್ಪು ಮಸಿ ಬಳಿದರೆ ತಮಗೆ ರಾಜಕೀಯವಾಗಿ ಅನುಕೂಲ ಆಗುತ್ತೆ ಅನ್ನೊ ಭ್ರಮೆಯಲ್ಲಿ ಇದ್ದಾರೆ. ಅವ್ರ ಹಗರಣಗಳು ಬಹಳಷ್ಟು ಇದೆ. ಎಲ್ಲವನ್ನೂ ಬಿಚ್ಚಿಡುತ್ತೇವೆ. ಯಾರೆಲ್ಲ ತಪ್ಪಿಸ್ಥರು ಇದ್ದಾರೋ ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.