ಮುಡಾ ಹಗರವನ್ನ ಸಿಬಿಐಗೆ ವಹಿಸಲು ಸಿಎಂ ನಕಾರ
ಮೈಸೂರು: ಮುಡಾ ಹೆಸರು ಹೇಳುತ್ತಿದಂತೆ ನನ್ನ ಹೆಂಡತಿಯ ವಿಚಾರವನ್ನು ವಿವಾದ ಮಾಡುತ್ತಿದ್ದಾರೆ. ಮುಡಾದಲ್ಲಿ 50:50 ರದ್ದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಗರಂ ಹಾಗಿ ಉತ್ತರಿಸಿದರು.ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿ ಇರುವ ಸಿಎಂ ವಿಶೇಷ ವಿಮಾನ ಮೂಲಕ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಮಾತನಾಡಿದ ಅವರು ಎಷ್ಟು ಸಲ ಇದರ ಬಗ್ಗೆ ಹೇಳುವುದು. ನಾನು ವಿಜಯನಗರದಲ್ಲಿ ಸೈಟ್ ಕೊಡಿ ಎಂದು ಕೇಳಿಲ್ಲ. ನಮ್ಮ ಜಮೀನಿನನ್ನು ನಿಯಮಬಾಹಿರವಾಗಿ ಭೂಸ್ವಾಧೀನ ಮಾಡಿಕೊಂಡಿದ್ದಾರೆ. ಅದಕ್ಕೆ ಅವರೇ ತಪ್ಪಾಯಿತು ಎಂದು ಹೇಳಿ ಸೈಟ್ ಕೊಟ್ಟಿದ್ದಾರೆ. ಇದರಲ್ಲಿ ಯಾವ ವಿವಾದ ಇದೆ. ಸುಮ್ಮನೇ ಪ್ರತಿಭಟನೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ.ಮುಡಾ ಅಕ್ರಮದ ಬಗ್ಗೆ ಇಬ್ಬರು ಐಎಎಸ್ ಅಧಿಕಾರಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ತಪ್ಪಾಗಿದೆ ಎಂಬುದು ಗೊತ್ತಾದರೇ ಎಲ್ಲರೂ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಕರಣ ಸಿಬಿಐಗೆ ವಹಿಸುವ ವಿಚಾರ ನಮ್ಮ ಪೆÇಲೀಸರನೇ ಸಮರ್ಥರಿಲ್ಲವಾ. ಎಲ್ಲದಕ್ಕೂ ಸಿಬಿಐ ಸಿಬಿಐ ಅನ್ನುವ ಬಿಜೆಪಿ ತಮ್ಮ ಅವಧಿಯಲ್ಲಿ ಎಷ್ಟು ಕೇಸ್ ನ್ನ ಸಿಬಿಐಗೆ ಕೊಟ್ಟಿದ್ದಾರೆ. ಈಗೀನ ಸಿಬಿಐ ಮುಖ್ಯಸ್ಥ ಕೂಡ ಕರ್ನಾಟಕದಲ್ಲಿ ಕೆಲಸ ಮಾಡಿದವರು.ನಮ್ಮ ಪೆÇಲೀಸರು ತನಿಖೆ ವಿಚಾರದಲ್ಲಿ ಸಮರ್ಥರಿದ್ದಾರೆ ಎಂದರು.ಮಾಜಿ ನಾಗೇಂದ್ರ ಮನೆ ಮೇಲೆ ಇಡಿ ದಾಳಿ ವಿಚಾರಕ್ಕೆ ಉತ್ತರಿಸಿದ ಅವರು ಇಡಿ ಅವರ ಕೆಲಸವನ್ನ ಅವರು ಮಾಡುತ್ತಾರೆ. ಇದರ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ. ದಾಲಿ ಮಾಡಲಿ ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.ರಾಮನಗರ ಜಿಲ್ಲೆಯ ಹೆಸೆರು ಬದಲಾವಣೆ ವಿಚಾರ. ರಾಮನಗರ ಜಿಲ್ಲೆಯ ಎಲ್ಲಾ ಮುಖಂಡರು ಬಂದಿದ್ರು. ಮೊದಲಿನಿಂದಲೂ ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾಗಬೇಕು ಎಂಬುದು ಅವರ ಇಚ್ಚೆ. ಆ ಬಗ್ಗೆ ಮನವಿ ಕೊಟ್ಟಿದ್ದಾರೆ. ಕ್ಯಾಬಿನಟ್ ನಲ್ಲಿಟ್ಟು ತೀರ್ಮಾನ ಮಾಡುತ್ತೇವೆ. ನಾವು ಬಂದರೇ ಹೆಸರು ಕಿತ್ತಾಕುತ್ತೇವೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಿಎಂ ತಿರುಗೇಟು ನೀಡಿದರು.ಅವರು ಅಧಿಕಾರಕ್ಕೆ ಬಂದರೆ ತಾನೇ ಕಿತ್ತಾಕುವುದು ? ಜನರು ಆಶೀರ್ವಾದ ಮಾಡಿದ ಕಾರಣ ನಾನು ಸಿಎಂ ಆಗಿದ್ದೇನೆ. ಇವರಿಗೆ ಜನರೇ ಆಶೀರ್ವಾದ ಮಾಡುವುದಿಲ್ಲ. ಇವರು ಇನ್ನೆಲ್ಲಿ ಸಿಎಂ ಆಗುತ್ತಾರೆ. ಹೆಸರು ಬದಲಾವಣೆ ಮಾಡುವುದು ಭ್ರಮೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.