ಮಗನ ಮದುವೆ ಮತ್ತು ಪತಿಯ ವಿಚಾರವಾಗಿ ನಟಿ ಲೀಲಾವತಿ ಅವರ ಮೇಲೆ ನಿರ್ದೇಶಕ ಪ್ರಕಾಶ್ ರಾಜ್ ಮೆಹು ಹಲವು ಪ್ರಶ್ನೆಗಳನ್ನು ಮಾಡಿದ್ದರು. ಅದಕ್ಕೆ ಪೂರಕ ಎನ್ನುವಂತೆ ದಾಖಲೆಗಳನ್ನು ನೀಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಸಾಕಷ್ಟು ಚರ್ಚೆ ನಡೆದಿತ್ತು. ಇದರಿಂದಾಗಿ ಸಹಜವಾಗಿಯೇ ಲೀಲಾವತಿ ಅವರ ಕುಟುಂಬಕ್ಕೆ ನೋವಾಗಿದೆ. ಈ ವಿಚಾರಕ್ಕೆ ಸಂಬAಧಿಸಿದAತೆ ವಿನೋದ್ ರಾಜ್ ಕುಮಾರ್ ಕೂಡ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.
`ಅಮ್ಮ ಇಳಿವಯಸ್ಸಿನಲ್ಲಿ ನೆಮ್ಮದಿಯಾಗಿ ಇದ್ದಾರೆ. ಅವರು ಕರ್ನಾಟಕದ ಆಸ್ತಿ. ದಯವಿಟ್ಟು ಅವರನ್ನು ನೆಮ್ಮದಿಯಾಗಿ ಇರಲಿಬಿಡಿ’ ಎಂದು ವಿನೋದ್ ರಾಜ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಸದ್ಯ ವಯೋಸಹಜ ಅನಾರೋಗ್ಯದಿಂದ ಇರುವ ಲೀಲಾವತಿ ಅವರನ್ನು ಅವರ ಪುತ್ರ ವಿನೋದ್ ರಾಜ್ ನೋಡಿಕೊಳ್ಳುತ್ತಿದ್ದು, ಇದರ ಜೊತೆಗೆ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ನೆಲಮಂಗಲ ಹತ್ತಿರ ನೆಲೆಸಿದ್ದಾರೆ. ಮಗನ ಮದುವೆ ಹಾಗೂ ಪತಿಯ ಕುರಿತಾಗಿ ವಿಷಯವನ್ನು ಕೆದಕಿ ನೋವು ಮಾಡುತ್ತಿರುವವರ ಕುರಿತು ಲೀಲಾವತಿ ಅವರು ನೋವಿನಿಂದಲೇ ಮಾತನಾಡಿ, `ಈ ರೀತಿ ಪದೇ ಪದೇ ನನ್ನ ವಿಚಾರಗಳನ್ನು ಮಾತನಾಡಿ ನೋವು ಮಾಡುವವರು ನರಕಕ್ಕೆ ಬೀಳ್ತಾರೆ. ನಮ್ಮ ಅಂತರAಗದ ಸುದ್ದಿಯನ್ನು ಈ ರೀತಿ ಕೇಳುತ್ತಾರೆ ಅಂತ ಬೇಸರವಾಗುತ್ತಿದೆ. ಯಾರು ಏನಾದರೂ ಹೇಳಲಿ, ನನ್ನ ಆತ್ಮಸಾಕ್ಷಿಯಂತೆ ನಾನು ನಡೆದುಕೊಂಡಿದ್ದೇನೆ’ ಎಂದಿದ್ದಾರೆ.
ಯೂಟ್ಯೂಬ್ ಚಾನೆಲ್ ವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಲೀಲಾವತಿ ಅವರು ಮಗನ ಮದುವೆ ವಿಚಾರವನ್ನೂ ಮಾತನಾಡಿದ್ದಾರೆ. `ನನ್ನ ಮಗನ ಮದುವೆ ಆಗಿದೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ಸಿಂಪಲ್ ಆಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ್ದಕ್ಕೆ ತಿರುಪತಿ ಬೆಟ್ಟದ ಮೇಲೆ ಮಾಡಿದೆ. ಎಂಥೆAತವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್ ಗಳಲ್ಲಿ ಮಾಡಿದ್ದಾರೆ. ಆದರೆ, ನನಗೆ ಆ ಶಕ್ತಿ ಇರಲಿಲ್ಲ. ಅನೇಕರು ಈ ಕುರಿತು ಹೀಯಾಳಿಸಿದರು. ಹಾಗಾಗಿ ಚರ್ಚೆ ಮಾಡಲಿಲ್ಲ’ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಲೀಲಾವತಿ, `ನನ್ನ ಮಗನ ಮದುವೆಗೆ ಏಳು ಜನ ಕನ್ನಡಿಗರು ಬಂದಿದ್ದರು. ಏನ್ ಲೀಲಾವತಿ ಅವರೇ ನಿಮ್ಮ ಮಗನ ಮದುವೆಗೆ ಏಳೇ ಏಳು ಜನ ಬಂದಿದ್ದಾರೆ. ಜನ ಸಿಗಲಿಲ್ಲವಾ ಎಂದು ಕುಹಕವಾಡಿದರು. ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಮೊಮ್ಮಗ ಮತ್ತು ಸೊಸೆ ಚೆನ್ನಾಗಿದ್ದಾರೆ. ಅವರಿಗೆ ಯಾವುದೇ ಕೊರತೆ ಮಾಡಿಲ್ಲ. ಅಂತರAಗದ ಸುದ್ದಿಯನ್ನು ಈ ರೀತಿ ಕೇಳುತ್ತಾರೆ ಅಂತ ಬೇಸರವಾಗುತ್ತದೆ. ಯಾರು ಏನೇ ಹೇಳಲಿ ನನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವೆ’ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ನಿರ್ದೇಶಕ ಮೆಹು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಲೀಲಾವತಿ ಮತ್ತು ಅವರ ಪುತ್ರನ ಬಗ್ಗೆ ಪೋಸ್ಟ್ ವೊಂದನ್ನು ಹಾಕಿದ್ದರು. ಅದರಲ್ಲಿ `ವಿನೋದ್ ರಾಜ್ ಅವರಿಗೆ ಮದುವೆಯಾಗಿ ಪುತ್ರನಿದ್ದು, ಚೆನ್ನೆöÊನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ವಿನೋದ್ ಪತ್ನಿ ಮತ್ತು ಮಗ ಚೆನ್ನೆöÊನಲ್ಲಿ ವಾಸಿಸುತ್ತಿದ್ದಾರೆ’ ಎಂದು ಬರೆದಿದ್ದರು. ಲೀಲಾವತಿಯವರ ಜೊತೆಗೆ ಕುಳಿತಿರುವ ಫೋಟೋವನ್ನು ಫೇಸ್ಬುಕ್ನಲ್ಲಿ ಮೆಹು ಪ್ರಕಟಿಸಿದ್ದಾರೆ. ಅದರಲ್ಲಿ ಮಹಾಲಿಂಗ ಭಾಗವತರ್ ಪತ್ನಿ ಲೀಲಾವತಿ ಅಮ್ಮಾಳ್ ಎಂದು ಬರೆದುಕೊಂಡಿದ್ದಾರೆ. ವಿನೋದ್ ಪುತ್ರನ ಹೆಸರು ಯುವರಾಜ್ ಎಂದು ಇದ್ದು, ಈ ಸಂಬAಧ ಆತನ ಅಂಕಪಟ್ಟಿಯ ಫೋಟೋವನ್ನು ಕೂಡ ಹಾಕಿದ್ದಾರೆ. ಅದರಲ್ಲಿ ತಾಯಿ ಹೆಸರು ಅನು ಬಿ ಎಂದಿದೆ. ತಂದೆ/ಗಾರ್ಡಿಯನ್ ಜಾಗದಲ್ಲಿ ವಿನೋದ್ ರಾಜ್ ಎಂದಿದೆ.