ಮಳವಳ್ಳಿ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ ಜಯಂತಿಯನ್ನು ತಾಲೂಕು ಆಡಳಿತ ವತಿಯಿಂದ ಇಂದು ನಾಡಪ್ರಭು ಕೆಂಪೇಗೌಡರ ರಥೋತ್ಸವಕ್ಕೆ ಶಾಸಕ ಪಿಎಂ ನರೇಂದ್ರಸ್ವಾಮಿ ರವರು ಚಾಲನೆ ನೀಡಿದರು .
ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಕೆಂಪೇಗೌಡರು ಬೆಂಗಳೂರು ನಗರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ ಎಂದರೆ ಇದಕ್ಕೆ ಕಾರಣ ಕೆಂಪೇಗೌಡರ ಶ್ರಮ ಸಾಕಷ್ಟು ಇದೆ ಎಂದರು.
ಇಂದು ತಾಲೂಕು ಆಡಳಿತ ವತಿಯಿಂದ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನು ಸರ್ವ ಜನರ ಜೊತೆಗೂಡಿ ಜಯಂತಿಯನ್ನು ಆಚರಣೆ ಮಾಡುತ್ತಿದ್ದೇವೆ ಎಂದರು .
ಕೆಂಪೇಗೌಡರ ರಥೋತ್ಸವ ತಾಲೂಕು ಪಂಚಾಯಿತಿಯಿಂದ ಮೆರವಣಿಗೆ ಹೊರಟು ಸಾಂಸ್ಕೃತಿಕ ಪೂಜಾ ಕುಣಿತಗಳೊಂದಿಗೆ ಅಂಬೇಡ್ಕರ್ ಭವನಕ್ಕೆ ತೆರಳಿತು ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಶಾಸಕ ಪಿ ಎಂ ನರೇಂದ್ರಸ್ವಾಮಿ ನಾಡಪ್ರಭು ಕೆಂಪೇಗೌಡರ ವಿಚಾರ ಧಾರಣೆಯನ್ನು ನೀಡಿದರು
ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿಗಳಾದ ಲೋಕೇಶ್ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕರಾದ ರಾಮಲಿಂಗಯ್ಯ ಡಿಎಸ್ಪಿ ನವೀನ್ ಕುಮಾರ್ ಪುರಸಭೆ ಮುಖ್ಯ ಅಧಿಕಾರಿ ಮಹದೇವ ಹಲವರು ಪಾಲ್ಗೊಂಡಿದ್ದರು .
ನಾಡಪ್ರಭು ಕೆಂಪೇಗೌಡರ ರಥೋತ್ಸವಕ್ಕೆ ಶಾಸಕ ಪಿಎಂ ನರೇಂದ್ರಸ್ವಾಮಿ ಚಾಲನೆ
