ಮೈಸೂರು:- ನಾನು ಹುಟ್ಟುತ್ತಲೇ ರೈತ. ಊಳೋದು, ಮಟ್ಟಿ ಹೊಡೆಯೋದು ಗೊತ್ತು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ತಿಳಿಸಿದರು.
ಮೈಸೂರಿನ ಜಲದರ್ಶಿನಿ ಕಚೇರಿಯಲ್ಲಿ ಶಾಸಕ ಜಿ ಟಿ ದೇವೇಗೌಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಜತೆ ಪ್ರವಾಸ ಹೋಗಿದ್ದೆ. ಆಗ ಶಾಸಕರು ಏನ್ ಗೌಡ್ರೇ, 100 ಸೈಟ್ ಇಟ್ಟಿದ್ದೀರಂತೆ ಅಂತ ಕೇಳುತ್ತಿದ್ರು. ನಾನು ಹುಟ್ಟುತ್ತಲೇ ರೈತ. ನಾನು ಪ್ರಗತಿಪರ ರೈತ, ನಮ್ಮಪ್ಪ 1966ರಲ್ಲಿ ಭೀಕರ ಬರಗಾಲದಲ್ಲಿ ತೀರಿ ಹೋಗಿದ್ದರು. ಶ್ರೀಮಂತ ಅಲ್ಲ, ಬಡತನದಲ್ಲಿ ಬೆಳೆದವನು ಬೆಳೆದವನು. 1983ರಲ್ಲಿ ಸಿದ್ದರಾಮಯ್ಯ ಗೆಲ್ಲಿಸಲು ನಾನು 20 ಸಾವಿರ ಖರ್ಚು ಮಾಡಿದ್ದೇನೆ. ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಇದ್ದೆ ಎಂದು ಮಾಹಿತಿ ನೀಡಿದರು.
ಮುಡಾದಲ್ಲಿ ಜಿ.ಟಿ ದೇವೇಗೌಡರದ್ದು 100 ಸೈಟ್ ಇವೆ ಎಂಬ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ನನ್ನ ಹೆಸರಿನಲ್ಲಿ ಅಕ್ರಮವಾಗಿ 1 ಸೈಟು ಇದ್ದರೂ ಬರೆದು ಕೊಡ್ತೀನಿ. ನನ್ನ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ನನ್ನ ಕುಟುಂಬದವರ ಹೆಸರಿನಲ್ಲಿ ಒಂದು ಹೋಟೆಲ್, ರೆಸಾರ್ಟ್, ಪೆಟ್ರೋಲ್ ಬಂಕ್ ಏನು ಇಲ್ಲ. ಇದ್ದರೆ ತೋರಿಸಲಿ ಎಲ್ಲವನ್ನೂ ಬರೆದು ಕೊಡ್ತೀನಿ. ಮುಡಾ ಬಡವರಿಗೆ ನಿವೇಶನ ಕೊಡುವ ಸಂಸ್ಥೆ. ಅದನ್ನು ಉಳಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಕಾಂಗ್ರೆಸ್ ನಾಯಕರ ರೀತಿ ಪ್ರಚಾರ ಮಾಡುವ ಗುಣ ನನ್ನದಲ್ಲ. ನಾನು ಕಟ್ಟಾ ರೈತ. ಶಾಸಕ ಜಿ.ಟಿ ದೇವೇಗೌಡ ಹೇಳಿದರು.
ಪ್ರಾಧಿಕಾರದವರು 100 ಎಕರೆ ಜಮೀನು ವಶ ಪಡಿಸಿಕೊಳ್ಳಬೇಕಿತ್ತು. ಆದರೆ 125 ಎಕರೆ ಜಾಗವನ್ನು ವಶಕ್ಕೆ ಪಡೆದು ಅಭಿವೃದ್ಧಿ ಪಡಿಸಿದ್ದಾರೆ. ಸುಂದರಮ್ಮ ಅವರ ಜಮೀನನ್ನು ಭೂಸ್ವಾಧೀನ ಪಡಿಸಿದೆ ಭೂಮಿ ಅಭಿವೃದ್ಧಿ ಪಡಿಸಿದ್ದಾರೆ. ಇದರ ವಿರುದ್ಧ ಹೈ ಕೋರ್ಟ್ ಗೆ ಸುಂದರಮ್ಮ ಹೋಗಿದ್ದರು. ನಂತರ ಸುಪ್ರೀಂ ಕೋರ್ಟ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶ ಮಾಡಿದೆ. ಸುಪ್ರೀಂ ಕೋರ್ಟ್ ನಲ್ಲಿ ಲ್ಯಾಂಡ್ ಟು ಲ್ಯಾಂಡ್ ಕೊಡಬೇಕು ಎಂದು ಆದೇಶ ಮಾಡಿದೆ. ಭೂಸ್ವಾಧೀನ ಪಡಿಸಿಕೊಳ್ಳದೆ ಅಭಿವೃದ್ಧಿ ಪಡಿಸಿದ್ರೆ ಅಂತಹವರ ಜಮೀನಿಗೆ 50:50 ಅನುಪಾತದಡಿ ನಿವೇಶನ ಕೊಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ ಎಂದು ತಿಳಿಸಿದರು.