ಮೈಸೂರು: ವಿಜಯನಗರ ೨ನೇ ಹಂತದ ಅಂಬರೀಶ್ ರಸ್ತೆಯಲ್ಲಿರುವ ನೆರಳು ಬೆಳಕು ಗ್ಯಾಲರಿಯಲ್ಲಿ ಕಲಾವಿದ ಪವನ್ಗೌಡ ಅವರ ಸ್ಟಿಲ್ ಲೈಫ್ ವಿಷಯದ ಏಕವ್ಯಕ್ತಿ ಪ್ರದರ್ಶನ ಚಿತ್ರಗಳ ಪ್ರದರ್ಶನ ಇರಲಿದೆ.
ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಕಲಾವಿದ ಪವನ್ಗೌಡ, ನ.೧೦ರವರೆಗೆ ಬೆಳಿಗ್ಗೆಯಿಂದ ರಾತ್ರಿವರೆಗೂ ಪ್ರದರ್ಶನ ಇರಲಿದೆ. ಒಂದು ನಿರ್ಜೀವ ವಸ್ತು ಹಾಗೂ ಸಜೀವ ವಸ್ತುಗಳೆರಡನ್ನು ಬಳಸಿಕೊಂಡು ವಿಭಿನ್ನ ರೀತಿಯಲ್ಲಿ ಚಿತ್ರಗಳನ್ನು ತ್ರಿಡಿ ಮಾದರಿಯಲ್ಲಿ ರಚಿಸಲಾಗಿರುತ್ತದೆ. ಒಂದು ಚಿತ್ರ ರಚಿಸಲು ಕನಿಷ್ಠ ಒಂದು ತಿಂಗಳವರೆಗೆ ಅವಕಾಶ ಹಿಡಿಯುತ್ತದೆ. ಹೆಚ್ಚು ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಚಿತ್ರಗಳು ಇದಾಗಿದೆ ಎಂದು ಹೇಳಿದರು.
ನೆರಳು ಬೆಳಕು ಗ್ಯಾಲರಿಯ ನಿರ್ವಾಹಕರಾದ ಮಾರುತಿ ಅವರು ಮಾತನಾಡಿ, ಚಿತ್ರಗಳು ನೈಜವಾಗಿ ಭಿತ್ತರಗೊಳ್ಳುವಂತೆ ಬಾಸವಾಗಿ ಖುಷಿ ಕೊಡಲಿದೆ. ನಾಳೆ ಬೆಳಿಗ್ಗೆ ೧೧ಕ್ಕೆ ಕಲಾವಿದ ಸುಭಾಷ್ ಕಮ್ಮಾರ್ ಚಿತ್ರ ಪ್ರದರ್ಶನ ಉದ್ಘಾಟಿಸುವರು ಎಂದರು. ಕೀರ್ತಿ ಗೋಷ್ಠಿಯಲ್ಲಿದ್ದರು.