ಮೈಸೂರು: ರಾಜ ಪರಂಪರೆಯ ರೀತಿ ಅರಮನೆಯ ರಾಜವಂಶಸ್ಥರು ಶರನ್ನವರಾತ್ರಿ ಪೂಜಾ ಕಾರ್ಯ ನಡೆಸಲು ನಾಳೆ ಅಂದರೆ ಸೆ.27ರಂದು ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ನಡೆಸಲಿದ್ದಾರೆ. ಆದ್ದರಿಂದ ನಾಳೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧ ಮಾಡಲಾಗಿದೆ ಎಂದು ಅರಮನೆ ಆಡಳಿತ ಮಂಡಳಿಯ ಕಾರ್ಯ ಅಧಿಕಾರಿಯಾದ ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷಿ÷್ಮಕಾಂತ್ ರೆಡ್ಡಿ ತಿಳಿಸಿದ್ದಾರೆ.
ಅ.3 ರಿಂದ ಅ. 12ರ ವರೆಗೆ ಅರಮನೆಯ ರಾಜವಂಶಸ್ಥರು ರಾಜ ಪರಂಪರೆಯAತೆ ಅರಮನೆಯೊಳಗೆ ಶರನ್ನವರಾತ್ರಿ ಪೂಜೆಗಳನ್ನ ನಡೆಸಲಿದ್ದಾರೆ. ಜತೆಗೆ ರಾಜವಂಶಸ್ಥ ಯದುವೀರ್ ಒಡೆಯರ್ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಖಾಸಗಿ ರ?ಬಾರ್ ನಡೆಸಲಿದ್ದಾರೆ. ಇದರ ಅಂಗವಾಗಿ ನಾಳೆ ಅಂದರೆ ಸೆ.27ರಂದು ಅರಮನೆಯ ಭದ್ರತಾ ಕೊಠಡಿಯಲ್ಲಿರುವ ಸಿಂಹಾಸನದ 13 ಬಿಡಿಭಾಗಗಳನ್ನ ಅಂಬಾ ವಿಲಾಸ ಅರಮನೆಯ ರ?ಬಾರ್ ಹಾಲ್?ಗೆ ತಂದು, ನುರಿತ ಅರಮನೆ ಸಿಬ್ಬಂದಿ ಹಾಗೂ ಗೆಜ್ಜಗಳ್ಳಿಯ ಹಿರಿಯ ಸಿಂಹಾಸನ ಜೋಡಣೆ ಮಾಡುವ ಜನರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ಸಿಂಹಾಸನ ಜೋಡಣೆ ಮಾಡಲಿದ್ದಾರೆ.
ಈ ದಿನಗಳಲ್ಲಿ ಅರಮನೆಗೆ ಪ್ರವೇಶವಿರುವುದಿಲ್ಲ : ‘ನಾಳೆ ಅಂಬಾ ವಿಲಾಸ ಅರಮನೆಯ ರ?ಬಾರ್ ಹಾಲ್?ನಲ್ಲಿ ಸಿಂಹಾಸನ ಜೋಡಿಸುವ ಹಿನ್ನೆಲೆ ಸೆಪ್ಟೆಂಬರ್? 27 ರಂದು ಬೆಳಗ್ಗೆ 10 ಗಂಟೆಯಿAದ 1 ಗಂಟೆವರೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕ ಪ್ರವೇಶ ಇರುವುದಿಲ್ಲ.
ಜತೆಗೆ ಅ.3 ರಂದು ದರ್ಬಾರದ ಹಾಲ್?ನಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಖಾಸಗಿ ರ?ಬಾರ್ ನಡೆಸಿ, ಸಿಂಹಾಸಕ್ಕೆ ಪೂಜೆ ಸಲ್ಲಿಸುವ ಹಿನ್ನೆಲೆ ಅ. 3 ರಂದು ಬೆ. 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಹಾಗೂ ಅ. 11 ರಂದು ಅರಮನೆಯೊಳಗಡೆ ಆಯುಧ ಪೂಜೆ ಹಾಗೂ ಅ.12 ರಂದು ವಿಜಯದಶಮಿ ಇರುವುದರಿಂದ ಅಂದು ಸಹ ಅರಮನೆಯೊಳಗಡೆ ಪ್ರವಾಸಿಗರಿಗೆ ಹಾಗೂ ಸರ?ವಜನಿಕರಿಗೆ ಪ್ರವೇಶ ಇರುವುದಿಲ್ಲ’ ಎಂದು ತಿಳಿಸಿದ್ದಾರೆ.