ಹನೂರು:- ತಾಲೂಕಿನ ಲೊಕ್ಕನಹಳ್ಳಿ ಹೋಬಳಿಯ ವಿ.ಎಸ್. ದೊಡ್ಡಿ ಗ್ರಾಮದ ಭಾಗ್ಯ ಎಂಬುವರ ಮನೆಯಲ್ಲಿ ನಿಧಿ ಆಸೆಗಾಗಿ ಗುಂಡಿ ತೆಗೆದು ನಿಧಿ ಹುಡಿಕಿರುವ ಪ್ರಕರಣ ಬೆಳಕಿಗೆ ಬಂದಿದೆ. ತಾಲೂಕಿನ ಒಡೆಯರಪಾಳ್ಯ ಸಮೀಪದ ವಿ.ಎಸ್. ದೊಡ್ಡಿ ಗ್ರಾಮದ ಮನೆ ಯೊಂದರಲ್ಲಿ ನಿಧಿ ಆಸೆಗೋಸ್ಕರ ಗುಂಡಿ ತೆಗೆಯುತ್ತಿದ್ದ ಪ್ರಕರಣ ಭಾನುವಾರ ರಾತ್ರಿ ಬೆಳಕಿಗೆ ಬಂದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ವಿ.ಎಸ್. ದೊಡ್ಡಿ ಗ್ರಾಮದ ಭಾಗ್ಯಾ ಎಂಬುವರು ನಾಲೈದು ವರ್ಷದ ಹಿಂದೆ ವಾಸ್ತು ಸರಿಯಿಲ್ಲ. ಎಂದು ಮನೆಯನ್ನು ತೊರೆದು ಬೆಂಗಳೂರಿನಲ್ಲಿ ನೆಲೆಸಿದ್ದರು. ಈ ವೇಳೆ ಸಂಬಂದಿಕರಾದ ಪರಶಿವ ಎಂಬುವರು ಭಾಗ್ಯಾ ಅವರನ್ನು ಸ್ಥಳೀಯ ಜೋತಿಷಿಯೊಬ್ಬರ ಬಳಿ ಕರೆದು ಕೊಂಡು ಹೋಗಿ ಶಾಸ್ತ್ರ ಕೇಳಿಸಿದ್ದರು. ಮನೆಯಲ್ಲಿ ನಿಧಿ ಇದೆ ಎಂದು ಜೋತಿಷಿ ತಿಳಿಸಿದಾಗ, ಭಾಗ್ಯಾ ಅವರು ನಿಧಿ ಶೋಧನೆಗಾಗಿ ಅನುಮತಿ ನೀಡಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಜೋತಿಷಿ ತನ್ನ ಜತೆಗಾರನೊಂದಿಗೆ ಕಳೆದ ವಾರ ವಿ.ಎಸ್. ದೊಡ್ಡಿಗೆ ಆಗಮಿಸಿ ಭಾಗ್ಯಾ ಅವರ ಸಮ್ಮುಖದಲ್ಲೇ ರಾತ್ರಿ ವೇಳೆ ಮನೆಯಲ್ಲಿ ಕಳಸವಿಟ್ಟು ವಿಶೇಷ ಪೂಜೆ ನೆರವೇರಿಸಿದ. ಯಾರಿಗೂ ತಿಳಿಯದಂತೆ ನಿಧಿಗಾಗಿ ಗುಂಡಿ ತೆಗೆಯುವ ಕಾರ್ಯ ಆರಂಭಿಸಿದ್ದ. 3 ಅಡಿ ಅಗಲ ಹಾಗೂ ಸುಮಾರು 20 ಅಡಿ ಆಳದ ಗುಂಡಿ ತೆಗೆಯಿಸಿದ್ದು. ಸ್ಥಳೀಯರು ಪೆÇಲೀಸರಿಗೆ ಮಾಹಿತಿ ನೀಡಿದ್ದು, ಪೆÇೀಲೀಸರು ತನಿಖೆಗೆ ಆಗಮಿಸಿದ ವೇಳೆ ಜೋತಿಷಿ ಹಾಗೂ ಜತೆಗಿದ್ದವರು ಪರಾರಿಯಾಗಿದ್ದಾರೆ. ನಿಧಿಗಾಗಿ ಇಂತಹ ಕಾರ್ಯ ನಡೆಸಬಾರದೆಂದು ಒಡೆಯರಪಾಳ್ಯ ಉಪಠಾಣೆ ಪೆÇಲೀಸರು ಭಾಗ್ಯಾ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇನ್ಸ್ಪೆಕ್ಟರ್ ಶಶಿಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ನಿಧಿ ಆಸೆಗಾಗಿ ಮನೆಯಲ್ಲೇ ಗುಂಡಿ ತೆಗೆಸಿರುವುದು ವಿಪರ್ಯಾಸ.
ಈ ಸಂಬಂಧ ಸ್ಥಳಕ್ಕೆ ಸಿಬ್ಬಂದಿಗಳನ್ನು ಕಳುಹಿಸಿ ತಪಾಸಣೆ ನಡೆಸಿದ್ದು, ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.