ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟರ್ನಿಯ ಹದಿನಾರನೇ ಆವೃತ್ತಿಯ ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ ನಡೆಯಲಿದ್ದು, ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಅಂಬಾಟಿ ರಾಯುಡು ನಿವೃತ್ತಿ ಘೋಷಿಸಿದ್ದಾರೆ.
ಐಪಿಎಲ್ನಲ್ಲಿ 204 ಪಂದ್ಯಗಳನ್ನಾಡಿರುವ ರಾಯುಡು 4,329 ರನ್ ಗಳಿಸಿದ್ದಾರೆ. ಈವರಗೆ 1 ಶತಕ ಹಾಗೂ 22 ರ್ಧಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.
2018 ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರುವ ರಾಯುಡು ಕಳೆದ ಆವೃತ್ತಿಯಲ್ಲಿ ಐಪಿಎಲ್ನಿಂದ ಹಿಂದೆ ಸರಿಯಲು ನರ್ಧರಿಸಿದ್ದರು. ಆದರೆ, ಸಿಎಸ್ಕೆ ಫ್ರಾಂಚೈಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು. ಅದರಂತೆ ಈ ಬಾರಿ ಕೂಡ ರಾಯುಡು ಸಿಎಸ್ಕೆ ಪರ ಕಣಕ್ಕಿಳಿದಿದ್ದರು.
ಇದೀಗ ಸಿಎಸ್ಕೆ ತಂಡವು ಫೈನಲ್ ಪ್ರವೇಶಿಸಿದ್ದು, ಗುಜರಾತ್ ಟೈಟನ್ಸ್ ವಿರುದ್ಧ ಆಡುವ ಪಂದ್ಯವು ನನ್ನ ಪಾಲಿಗೆ ಕೊನೆಯ ಪಂದ್ಯವಾಗಿರಲಿದೆ ಎಂದು ಅಂಬಾಟಿ ರಾಯುಡು ತಿಳಿಸಿದ್ದಾರೆ. ಅಲ್ಲದೆ ಈ ನಿವೃತ್ತಿ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ.
2010ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ಗೆ ಪದರ್ಪಣೆ ಮಾಡಿದ್ದ ರಾಯುಡು 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಇದರ ನಡುವೆ ಮುಂಬೈ ಇಂಡಿಯನ್ಸ್ ಪರ 3 ಹಾಗೂ ಸಿಎಸ್ಕೆ ಪರ 2 ಬಾರಿ ಚಾಂಪಿಯನ್ ತಂಡದ ಭಾಗವಾಗಿದ್ದರು. ಈ ಬಾರಿ ಫೈನಲ್ ಪ್ರವೇಶಿಸಿದ ಸಿಎಸ್ಕೆ ತಂಡದ ಭಾಗವಾಗಿರುವ ರಾಯುಡು 15 ಪಂದ್ಯಗಳಲ್ಲಿ ಬ್ಯಾಟ್ ಬೀಸಿ 139 ರನ್ ಕಲೆಹಾಕಿದ್ದಾರೆ.
ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್ಕೆ ತಂಡ 2 ಶೇಷ್ಠ ತಂಡಗಳು… 204 ಪಂದ್ಯಗಳು, 14 ಸೀಸನ್ಗಳು, 11 ಪ್ಲೇಆಫ್ಗಳು, 8 ಫೈನಲ್ಗಳು, 5 ಟ್ರೋಫಿಗಳು. ಐಪಿಎಲ್ನಲ್ಲಿ ಇಂದು ನನ್ನ ಕೊನೆಯ ಪಂದ್ಯವಾಡಲು ನರ್ಧರಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು ಎಂದು 38 ರ್ಷದ ರಾಯುಡು ತಿಳಿಸಿದ್ದಾರೆ.