ಮೈಸೂರು: 8 ಗಂಟೆಗಳ ಕೆಲಸ ನೀಡಿ ನಿವೃತ್ತಿ ವೇತನ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸಿದರು.
ನಗರದ ಆಕಾಶವಾಣಿ ಕೇಂದ್ರದ ಎದುರು ಪ್ರತಿಭಟಿಸಿದ ಆಲ್ ಇಂಡಿಯಾ ಗ್ರಾಮೀಣ ಡಾಕ ಸೇವಿಕಾಸ್ ಯೂನಿಯನ್ ಮೈಸೂರು ವಿಭಾಗ ಎಲ್ಲಾ ಸವಲತ್ತುಗಳನ್ನು ನೀಡುವುದು. ಕಮಲೇಶ್ ಚಂದ್ರ ಸಮಿತಿ ವರದಿಯಂತೆ ಈಡೇರಿದೆ ಇರುವ ಶಿಫಾರಸ್ಸುಗಳಾದ ಆರ್.ಟಿ.ಸಿ. ಆ ವೇತನ ಪರಿಷ್ಕರಣೆಯನ್ನು 2016 ರಿಂದ ನೀಡುವುದು. 12, 24, 36 ವರ್ಷಗಳ ಸೇವೆ ಸಲ್ಲಿಸಿರುವವರಿಗೆ ಹೆಚ್ಚುವರಿ ಇಂಕ್ರಿಮೆಂಟ್ ನೀಡುವುದು. 1.5 ಲಕ್ಷದ ಬದಲಿಗೆ ಕೊನೆಯ ತಿಂಗಳ ವೇತನ 16.5 ರಷ್ಟು ನೀಡುವುದು. ಜಿ.ಬಿ.ಎಸ್. ನೌಕರರ ಮತ್ತು ಕುಟುಂಬದವರಿಗೆ ಆರೋಗ್ಯ ವಿಮೆ ನೀಡುವುದು.
ವೇತನ ಸಹಿತ ನೀಡುತ್ತಿರುವ ರಜೆಯನ್ನು 180 ದಿನಗಳವರೆಗೆ ಕೂಡಿಟ್ಟುಕೊಳ್ಳಲು ಅವಕಾಶ ನೀಡುವುದು. ಗ್ರೂಪ್ ಇನ್ಸುರೆನ್ಸ್ ಅನ್ನು 5 ಲಕ್ಷಕ್ಕೆ ಹೆಚ್ಚುಸುವುದು. ಎಸ್ ಡಿಬಿಎಸ್ ಸ್ಟ್ರೀಮ್ನಲ್ಲಿ ಶೇ.3 ರಿಂದ ಶೇ.10ಕ್ಕೆ ಹೆಚ್ಚಿಸಿ ನಿವೃತ್ತಿ ವೇತನ ನೀಡುವುದು. ಐಪಿಪಿಬಿ ಆರ್ ಪಿಎಲ್ ಐ ಕೆಲಸಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ರದ್ದುಗೊಳಿಸಿ ಕೆಲಸದ ಹೊರಗೆ ಸೇರಿಸುವುದು. ನೂತನವಾಗಿ ನೇಮಕಾತಿ ಹೊಂದಿದ ನೌಕರರಿಗೆ ಕೆಲಸದ ಹೊರೆಯ ಆಧಾರದ ಮೇಲೆ ವೇತನ ನಿಗದಿಗೊಳಿಸುವುದು. ನೌಕರರು ತಮ್ಮ ಸ್ವಂತ ಮೊಬೈಲ್ ನಲ್ಲಿ ಇಲಾಖಾ ಕೆಲಸವನ್ನು ನಿರ್ವಹಿಸಲು ಒತ್ತಾಯಿಸುತ್ತಿರುವುದು ಮತ್ತು ಅವೈಜ್ಞಾನಿಕ ಟಾರ್ಗೆಟ್ಗಳನ್ನು ಕೂಡಲೇ ನಿಲ್ಲಿಸುವುದು. ಎಲ್ಲ ಶಾಲಾ ಕಛೇರಿಗಳಿಗೆ ಲ್ಯಾಪ್ಟಾಪ್, ಪ್ರಿಂಟರ್ , ಬ್ಯಾಡ್ ಬಾಂಡ್ ಸೆಟ್ವರ್ಕ್ ನೀಡುವುದು ಸೇರಿ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಮೈಸೂರು ವಿಭಾಗೀಯ ಅಧ್ಯಕ್ಷ ಎಸ್.ಆರ್.ಸೋಮಶೇಖರ್, ವಿಭಾಗೀಯ ಖಜಾಂಚಿ ಮಲ್ಲಯ್ಯ, ವಿಭಾಗೀಯ ಕಾರ್ಯದರ್ಶಿ ಟಿ.ರಾಣಿ ಇನ್ನಿತರರು ಉಪಸ್ಥಿತರಿದ್ದರು.